Site icon Vistara News

Mandya Politics: ಮಂಡ್ಯದಲ್ಲಿ ಎಚ್‌ಡಿಕೆ ಸ್ಪರ್ಧಿಸಿದರೆ ಬಿಜೆಪಿಯಿಂದ ಸುಮಲತಾ ಕಣಕ್ಕೆ: ಏನೇನು ಲೆಕ್ಕಾಚಾರಗಳು?

mandya politics sumalatha can contest against HDK in mandya

#image_title

ಬೆಂಗಳೂರು: ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿರುಸಿನ ಫೈಟ್‌ಗೆ ಇಡೀ ರಾಜ್ಯದ ಗಮನ ಸೆಳೆದಿದ್ದ ಮಂಡ್ಯ ಈಗ ಮತ್ತೆ ಬಿಸಿಯೇರುತ್ತಿದೆ. ಈ ಬಾರಿ ಮಂಡ್ಯ ವಿಧಾನಸಭೆ ಕ್ಷೇತ್ರದಿಂದ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ಸೆಣೆಸುವ ಸಾಧ್ಯತೆಯಿದೆ.

ಮಂಡ್ಯ ಕ್ಷೇತ್ರದಲ್ಲಿ ಈಗ ಕುಮಾರಸ್ವಾಮಿ ಹೆಸರು ಚಾಲ್ತಿಯಲ್ಲಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚನ್ನಪಟ್ಟಣ ಹಾಗೂ ರಾಮನಗರದಿಂದ ಕುಮಾರಸ್ವಾಮಿ ಕಣಕ್ಕಿಳಿದಿದ್ದರು. ರಾಮನಗರದಿಂದ ರಾಜೀನಾಮೆ ನೀಡಿ ಚನ್ನಪಟ್ಟಣವನ್ನು ಉಳಿಸಿಕೊಂಡಿದ್ದರು.

ಈ ಬಾರಿ ಚನ್ನಪಟ್ಟಣದಲ್ಲಿ ಸಿ.ಪಿ. ಯೋಗೇಶ್ವರ್‌ ವಿರುದ್ಧ ಈಗಾಗಲೆ ನಾಮಪತ್ರ ಸಲ್ಲಿಸಿರುವ ಕುಮಾರಸ್ವಾಮಿ, ರಾಮನಗರವನ್ನು ಪುತ್ರ ನಿಖಿಲ್‌ ಕುಮಾರಸ್ವಾಮಿಗೆ ಬಿಟ್ಟುಕೊಟ್ಟಿದ್ದಾರೆ. ಈ ಬಾರಿ ರಾಮನಗರಕ್ಕೆ ಬದಲಾಗಿ ಮಂಡ್ಯ ವಿಧಾನಸಭೆಯಿಂದಲೇ ಕುಮಾರಸ್ವಾಮಿ ಸ್ಪರ್ಧೆ ಮಾಡಬಹುದು ಎನ್ನಲಾಗುತ್ತಿದೆ.

ಈಗಾಗಲೆ ಸ್ಥಳೀಯ ನಾಯಕರಿಂದ ಕುಮಾರಸ್ವಾಮಿ ಮಾಹಿತಿ ಪಡೆದುಕೊಂಡಿದ್ದಾರೆ. ತಾವು ಸ್ಪರ್ಧೆ ಮಾಡಿದರೆ ಗೆಲ್ಲಬಹುದೇ ಎಂದು ವಿಚಾರಿಸಿದ್ದಾರೆ. ಸಧಯದಲ್ಲೆ ನಿರ್ಧಾರ ಮಾಡಲಿದ್ದಾರೆ ಎನ್ನಲಾಗಿದೆ.

ಎಚ್‌ಡಿಕೆ ಪ್ಲ್ಯಾನ್‌

ಸುಮಲತಾ ಸ್ಪರ್ಧೆ ಚರ್ಚೆ

ಈಗಾಗಲೆ ಮಂಡ್ಯ ಕ್ಷೇತ್ರಕ್ಕೆ ಅಶೋಕ್‌ ಜಯರಾಮ್‌ ಹೆಸರು ಘೋಷಿಸಿರುವ ಬಿಜೆಪಿ, ಎಚ್‌.ಡಿ.ಕೆ. ಸ್ಪರ್ಧೆ ಮಾಡಿದರೆ ಮತ್ತೊಂದು ಉಪಾಯ ಇಟ್ಟುಕೊಂಡಿದೆ. ಸಂಸದೆ ಸುಮಲತಾ ಈಗತಾನೆ ಪಕ್ಷಕ್ಕೆ ಆಗಮಿಸಿದ್ದಾರೆ. ಅವರು ಮಂಡ್ಯ ಕ್ಷೇತ್ರದಲ್ಲಿ ಉತ್ತಮ ಹಿಡಿತ ಹೊಂದಿದ್ದಾರೆ. ಅವರು ಸ್ಪರ್ಧೆ ಮಾಡಿದರೆ ಉತ್ತಮ ಸ್ಪರ್ಧೆ ಒಡ್ಡಬಹುದು ಎಂಬ ಚರ್ಚೆ ನಡೆಯುತ್ತಿದೆ.

ನಾಮಪತ್ರ ಸಲ್ಲಿಕೆ ಮಾಡಲು ಇನ್ನೂ ಎರಡು ದಿನ ಬಾಕಿಯಿದ್ದು, ಬಿಜೆಪಿ ಈ ಕುರಿತು ಚಿಂತನೆ ನಡೆಸುತ್ತಿದೆ. ಬುಧವಾರ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಬಹುದು ಎನ್ನಲಾಗಿದೆ.

ಇದನ್ನೂ ಓದಿ: Karnataka Election 2023 : ಮಂಡ್ಯದಿಂದ ಸ್ಪರ್ಧಿಸಲಾರೆ ಎಂದ ಕುಮಾರಸ್ವಾಮಿ; ಚನ್ನಪಟ್ಟಣದಲ್ಲಿ ನಾಮಪತ್ರ ಸಲ್ಲಿಕೆ

Exit mobile version