Site icon Vistara News

C.M. Ibrahim: ಬಿಜೆಪಿ ಮೇಲೆ ನಂಬಿಕೆ ಇದ್ರೆ ಮಂಡ್ಯದಿಂದ ಗೆದ್ದು ತೋರಿಸಲಿ: ಸುಮಲತಾಗೆ ಸಿ.ಎಂ. ಇಬ್ರಾಹಿಂ ಸವಾಲು

CM ibrahim

#image_title

ಬೆಂಗಳೂರು: ಅಂಬರೀಶ್‌ ಅವರ ಸಿದ್ಧಾಂತಕ್ಕೆ ವಿರುದ್ಧವಾಗಿ ಸುಮಲತಾ ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ ಎಂದಿರುವ ಜೆಡಿಎಸ್‌ ಅಧ್ಯಕ್ಷ ಸಿ.ಎಂ. ಇಬ್ರಾಹಿಂ, ಬಿಜೆಪಿ ಮೇಲೆ ನಂಬಿಕೆಯಿಂದ ಬಿಜೆಪಿ ಟಿಕೆಟ್‌ನಲ್ಲಿ ಮಂಡ್ಯದಿಂದ ಸ್ಪರ್ಧಿಸಿ ಗೆಲ್ಲಲಿ ಎಂದು ಸವಾಲು ಹಾಕಿದ್ದಾರೆ.

ಅಂಬರೀಶ್ ಅವರು ಯಾವ ಸಿದ್ದಾಂತದಿಂದ ತನ್ನ ರಾಜಕೀಯ ಜೀವನವನ್ನ ನಡಸಿದ್ದರೋ ಆ ಸಿದ್ಧಾಂತಕ್ಕೆ ಶ್ರೀಮತಿ ಸುಮಲತಾ ಅವರು ಸಂಪೂರ್ಣವಾಗಿ ತಿಲಾಂಜಲಿ ಹಚ್ಚಿದ್ದಾರೆ. ನೀವು ಇವರನ್ನ ಬಿಜೆಪಿಗೆ ಆಯ್ಕೆ ಮಾಡ್ತಿದ್ದೀರಾ ಎಂದು ನಾವು ಕಾಗ್ರೆಸ್ ನವರಿಗೆ ಪಾರ್ಲಿಮೆಂಟ್ ಎಲೆಕ್ಷನ್ ನಲ್ಲೆ ಹೇಳಿದ್ವಿ. ಅವ್ರು ನಮ್ ಮಾತು ಕೇಳಿಲ್ಲ.

ಕಾಂಗ್ರೆಸ್ ಬಿಜೆಪಿ ಎರಡು ಒಂದೇ. ಕಾಂಗ್ರೆಸ್‌ನಿಂದ ಬಿಜೆಪಿಗೆ ಬಿಜೆಪಿಯಿಂದ ಕಾಂಗ್ರೆಸ್ಸಿಗೆ ಬರ್ತಿದ್ದಾರೆ. ನಾರಾಯಣ ಗೌಡರು ಮತ್ತಿತರನ್ನ ಕಳ್ಸಿದ್ದು ಯಾರು? ನಾವು ಇವತ್ತು ಮಂಡ್ಯದಲ್ಲಿ ಪಾರ್ಲಿಮೆಂಟ್ ಗೆಲ್ಲೋದು ಕನ್ಫರ್ಮ್ !

ಸುಮಲತಾ ಅವ್ರು ಹೀಗೆ ಮಾಡ್ಬಾರ್ದಿತ್ತು, ಸುಮಲತ ಅವರಿಗೆ ಬಿಜೆಪಿಯ ಮೇಲೆ ನಂಬಿಕೆ ಇದ್ರೆ ಬಿಜೆಪಿಯಿಂದ ಮಂಡ್ಯದಲ್ಲಿ ನಿಂತು ಗೆದ್ದು ತೋರಿಸಲಿ ಎಂದು ಸವಾಲೆಸೆದರು.

ಇದನ್ನೂ ಓದಿ : Sumalatha Ambareesh PC: ಅಂಬರೀಶ್‌ ಜತೆ 30 ವರ್ಷ ಸಂಸಾರ ಮಾಡಿದ್ದೀನಿ; ಅವರೇನಂತ ಗೊತ್ತು ಎಂದ ಸುಮಲತಾ

Exit mobile version