Site icon Vistara News

Cauvery Dispute : ಆ.21ರಂದು ಮಂಡ್ಯ ನಗರ, ಬೆಂಗಳೂರು- ಮೈಸೂರು Express way ಬಂದ್‌ಗೆ ಬಿಜೆಪಿ ನಿರ್ಧಾರ

Kaveri protest at Ramanagara

ಬೆಂಗಳೂರು/ಮಂಡ್ಯ: ರಾಜ್ಯದಲ್ಲಿ ಮಳೆ ಇಲ್ಲದೆ ನೀರಿಗೆ ಹಾಹಾಕಾರ ಹುಟ್ಟಿಕೊಂಡಿರುವ ನಡುವೆಯೇ ಮಂಡ್ಯ ಜಿಲ್ಲೆಯ ಕೆಆರ್‌ಎಸ್‌ ಜಲಾಶಯದಿಂದ (KRS Dam) ತಮಿಳುನಾಡಿಗೆ ನೀರು ಬಿಡುಗಡೆ (Water released to Tamilnadu) ಮಾಡುತ್ತಿರುವ ರಾಜ್ಯ ಸರ್ಕಾರದ (Cauvery Dispute) ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಒಂದು ಕಡೆ ಕಾವೇರಿ ಜಲಾನಯನ ಪ್ರದೇಶದ ಹಲವು ಕಡೆ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದರೆ, ಇನ್ನೊಂದು ಕಡೆ ಬಿಜೆಪಿ ಹೋರಾಟಕ್ಕೆ (BJP protest) ಕಿಚ್ಚು ಹಚ್ಚಲು ಮುಂದಾಗಿದೆ. ಇದರ ಭಾಗವಾಗಿ ಆಗಸ್ಟ್‌ 21ರಂದು ಮಂಡ್ಯ ನಗರ ಬಂದ್‌ (Mandya town bundh on Aug 21) ಹಾಗೂ ಅದೇ ಭಾಗದಲ್ಲಿ ಬೆಂಗಳೂರು-ಮೈಸೂರು Express wayನಲ್ಲಿ ಬಂದ್‌ (Bangalore- Mysore Express Way Bundh) ಮಾಡಲು ನಿರ್ಧರಿಸಲಾಗಿದೆ.

ಬಿಜೆಪಿಯಿಂದ ಕಾವೇರಿ ಉಳಿಸಿ ಹೋರಾಟ

ಭಾರತೀಯ ಜನತಾ ಪಕ್ಷವು ಜಲಾಯನ ಪ್ರದೇಶದ ಐದು ಜಿಲ್ಲೆಗಳ ನಾಯಕರನ್ನು ಮುಂದಿಟ್ಟುಕೊಂಡು ಕಾವೇರಿ ಉಳಿಸಿ ಹೋರಾಟಕ್ಕೆ ಕೈ ಹಾಕಿದೆ. ಶನಿವಾರ ಈ ಸಂಬಂಧ ಮಂಡ್ಯದಲ್ಲಿ ಮಹತ್ವದ ಸಭೆ ನಡೆಯಿತು. ಬಿಜೆಪಿ ಸಂಘಟನಾ ಕಾರ್ಯದರ್ಶಿ ಜಿ.ವಿ.‌ರಾಜೇಶ್, ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ ಗೌಡ ಅವರ ಸಾರಥ್ಯದಲ್ಲಿ ನಡೆದ ಸಭೆಯಲ್ಲಿ ಪಕ್ಷೇತರ ಸಂಸದೆ ಸುಮಲತಾ ಭಾಗಿಯಾಗಿದ್ದರು. ಜತೆಗೆ ಕೆಲವು ಶಾಸಕರಿದ್ದರು. ಈ ಸಭೆಯಲ್ಲಿ ಮೈಸೂರು ಸಂಸದ ಪ್ರತಾಪ್‌ ಸಿಂಹ ಭಾಗಿಯಾಗಿರಲಿಲ್ಲ.

ಡಿ.ಕೆ.ಶಿವಕುಮಾರ್‌ ಮೇಲೆ ಕೆಂಡಾಮಂಡಲ

ಈ ಸಭೆಯಲ್ಲಿ ರಾಜ್ಯ ಸರ್ಕಾರದ ತೀರ್ಮಾನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು. ಅದರಲ್ಲೂ ಮುಖ್ಯವಾಗಿ ನೀರಾವರಿ ಸಚಿವರೂ ಆಗಿರುವ ಡಿ.ಕೆ. ಶಿವಕುಮಾರ್‌ ಅವರು ಇಂಡಿಯಾ ಮೈತ್ರಿ ಕೂಟದ ಸ್ನೇಹಿತ, ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಅವರಿಗಾಗಿ ರಾಜ್ಯದ ಹಿತವನ್ನು ಬಲಿ ಕೊಡುತ್ತಿದ್ದಾರೆ ಎಂಬ ಆರೋಪ ಕೇಳಿಬಂತು. ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ ಗೌಡ ಅವರು ನೇರವಾಗಿ ಈ ಆರೋಪ ಮಾಡಿದ್ದು, ಡಿ.ಕೆ. ಶಿವಕುಮಾರ್‌ ಅವರು ರಾಜಕೀಯ ಲಾಭಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ ಎಂದರು.

ಸರ್ಕಾರದ ಈ ನಿಲುವನ್ನು ಖಂಡಿಸಿ, ಡಿ.ಕೆ. ಶಿವಕುಮಾರ್‌, ಚೆಲುವರಾಯಸ್ವಾಮಿ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರಕಟಿಸಲಾಯಿತು. ಇದರ ಪ್ರಕಾರ, ಸೋಮವಾರ ಬೆಳಗ್ಗೆ ಮಂಡ್ಯದ
ಇಂಡುವಾಳು ಸರ್ಕಲ್ ಬಳಿ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುತ್ತದೆ. ಜತೆಗೆ ಮಂಡ್ಯ ಬಂದ್‌ ಕೂಡಾ ನಡೆಯಲಿದೆ.

ʻʻತಮಿಳುನಾಡು ಸರ್ಕಾರ ಕರ್ನಾಟಕ ನೀರು ಬಿಟ್ಟಿಲ್ಲ ಎಂದು ಸುಪ್ರಿಂ‌ ಕೋರ್ಟ್‌ಗೆ ಅರ್ಜಿ ಹಾಕಿದೆ. ಸುಪ್ರಿಂ‌ ಕೋರ್ಟ್‌ನಿಂದ ಯಾವುದೇ ತೀರ್ಪು ಬಂದಿಲ್ಲ. ಈ ನಡುವೆ ಕಾವೇರಿ ನೀರು ನಿರ್ವಹಣೆ ಪ್ರಾಧಿಕಾರದ ಸಭೆಯಲ್ಲಿ ರಾಜ್ಯ ಸರ್ಕಾರ ಸರಿಯಾದ ಸಮರ್ಥನೆ ಮಾಡಿಲ್ಲ. ಇಂಡಿಯಾ ಮೈತ್ರಿಕೂಟದಿಂದಾಗಿ ತಮಿಳು ನಾಡು ಸಿಎಂ ಸ್ಟಾಲಿನ್ ಹಾಗೂ ಡಿಕೆಶಿ ಅವರ ನಡುವಿನ ಒಳ ಒಪ್ಪಂದಂದಾಗಿ ನೀರು ಬಿಡುಗಡೆ ಮಾಡಲಾಗಿಗದೆ. ಸುಪ್ರಿಂ ಕೋರ್ಟ್ ನಲ್ಲಿ ವಿಚಾರಣೆ ನಡೆದು ಯಾವುದೇ ತೀರ್ಪು ಬರುವ ಮೊದಲೇ ನೀರು ಬಿಡುಗಡೆ ಮಾಡ್ತಿರೋದು
ಸ್ಟಾಲಿನ್ ರನ್ನ ಓಲೈಸಿಕೊಳ್ಳುವುದಕ್ಕಾಗಿಯೇ ನೀರು ಬಿಡಲಾಗುತ್ತಿರುವುದು ರಾಜ್ಯದ ಜನಕ್ಕೆ ಮಾಡಿದ ಅನ್ಯಾಯ ಎಂದು ಅಶ್ವತ್ಥ ನಾರಾಯಣ ಹೇಳಿದರು.

ರಾಮನಗರ, ಟಿ. ನರಸೀಪುರದಲ್ಲಿ ಪ್ರತಿಭಟನೆ

ರಾಜ್ಯದಲ್ಲಿ ನೀರಿಲ್ಲದೆ ಇದ್ದಾಗಲೂ ತಮಿಳುನಾಡಿಗೆ ನೀರು ಬಿಡುಗಡೆ ಮಾಡುತ್ತಿರುವ ಕ್ರಮವನ್ನು ಖಂಡಿಸಿ ರಾಮನಗರದಲ್ಲಿ ಮತ್ತು ಟಿ. ನರಸೀಪುರದದಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಯಿತು.

ಶೋಭಾ ಕರಂದ್ಲಾಜೆ ಆಕ್ರೋಶ

ಈ ನಡುವೆ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಕೂಡಾ ಡಿ.ಕೆ. ಶಿವಕುಮಾರ್‌ ಅವರು ರಾಜಕೀಯ ಉದ್ದೇಶದಿಂದ. ತಾನು ಒಳ್ಳೆಯವನೆಂದು ತೋರಿಸಿಕೊಳ್ಳಲು ರಾಜ್ಯಕ್ಕೆ ದ್ರೋಹ ಬಗೆದು ತಮಿಳುನಾಡಿಗೆ ನೀರು ಬಿಡುಗಡೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: Sumalatha Ambarish : ನಾನು ಬಿಜೆಪಿ ಸದಸ್ಯೆಯಲ್ಲ, ಕಾಂಗ್ರೆಸ್‌ನಿಂದ ಆಹ್ವಾನ ಬಂದಿಲ್ಲ; ಸುಮಲತಾ ಮಾತಿನ ಅರ್ಥವೇನು?

Exit mobile version