ಮೈಸೂರು: ರಾಜ್ಯದಲ್ಲಿ ತಮಿಳುನಾಡಿಗೆ ನೀರೇ ಬಿಡಬಾರದು ಎಂದು ಆಗ್ರಹಿಸಿ ಹೋರಾಟಗಳು (Cauvery Dispute) ನಡೆಯುತ್ತಿವೆ. ಮಂಗಳವಾರ ನಡೆದ ಬೆಂಗಳೂರು ಬಂದ್ (Bangalore Bandh) ಕೂಡಾ ಯಶಸ್ವಿಯಾಗಿದೆ. ಇದರ ನಡುವೆ, ಸೆಪ್ಟೆಂಬರ್ 29ರಂದು ಮತ್ತೊಂದು ಸುತ್ತಿನ ಕರ್ನಾಟಕ ಬಂದ್ (Sep 29 Karnataka Bandh) ನಡೆಯುತ್ತಿದೆ. ಆದರೆ, ಇದ್ಯಾವುದರ ಪರಿವೆಯೇ ಇಲ್ಲದಂತೆ ಕರ್ನಾಟಕದಿಂದ ತಮಿಳುನಾಡಿಗೆ ಧಾರಾಳವಾಗಿ (Water flowing to Tamilandu) ನೀರು ಹರಿಯುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರಿಬ್ಬರೂ ನೀರಿಲ್ಲ, ನೀರಿಲ್ಲ ಎನ್ನುತ್ತಿದ್ದಾರೆ. ಎಲ್ಲಿಂದ ಬಿಡಲಿ ನೀರು ಎನ್ನುತ್ತಿದ್ದಾರೆ. ಆದರೆ, ಇದರ ನಡುವೆಯೇ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಸುಪ್ರೀಂಕೋರ್ಟ್ ಹೇಳಿದ್ದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ನೀರು ತಮಿಳುನಾಡಿಗೆ ಹರಿಯುತ್ತಿದೆ.
ನಿಜವೆಂದರೆ ಸುಪ್ರೀಂಕೋರ್ಟ್ ಅಂತಿಮವಾಗಿ ಹರಿಸಲು ಹೇಳಿದ್ದು ಪ್ರತಿ ದಿನ 5000 ಕ್ಯುಸೆಕ್. ನೀರು ಆದರೆ, ಕರ್ನಾಟಕದಿಂದ ಈಗ ತಮಿಳುನಾಡಿಗೆ ಬಿಡಲಾಗುತ್ತಿರುವ ನೀರಿನ ಪ್ರಮಾಣ ಒಟ್ಟು 6300 ಕ್ಯೂಸೆಕ್!
ಕಪಿಲಾ ಮತ್ತು ಕಾವೇರಿ ನದಿಯಿಂದ ಸಾವಿರಾರು ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲಾಗುತ್ತಿರುವುದು ಸರ್ಕಾರದ ಅಂಕಿ ಅಂಶಗಳಿಂದಲೇ ಬಯಲಾಗಿದೆ. ಅಂದರೆ ಎರಡು ಜಲಾಶಯಗಳಿಂದ ಒಟ್ಟು ತಮಿಳುನಾಡಿಗೆ 6300 ಕ್ಯೂಸೆಕ್ ಗೂ ಅಧಿಕ ನೀರು ಹರಿದು ಹೋಗುತ್ತಿದೆ.
ಕೆಆರ್ ಎಸ್ ಅಣೆಕಟ್ಟೆಯಿಂದ ಪ್ರತಿದಿನ 3873 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ. ಅದೇ ವೇಳೆ ಕಬಿನಿಯಿಂದ 2500 ಕ್ಯೂಸೆಕ್ ನೀರು ಹರಿಯುತ್ತಿದೆ. ಅಂದರೆ ಒಟ್ಟು 6300 ಕ್ಯೂಸೆಕ್ ನೀರು ಹರಿದಂತಾಗಿದೆ.
ಇದನ್ನೂ ಓದಿ: Cauvery Dispute: CWRCಯಿಂದ ರಾಜ್ಯಕ್ಕೆ ಸ್ವಲ್ಪ ರಿಲೀಫ್; 5000ದಿಂದ 3000 ಕ್ಯೂಸೆಕ್‌ಗೆ ಇಳಿಸಿದ ಸಮಿತಿ
ಬಿಳಿಗೊಂಡ್ಲು ಜಲಾಶಯದ ಲೆಕ್ಕ
ಕಾವೇರಿ ಮತ್ತು ಕಬಿನಿ ಜಲಾಶಯದಿಂದ ಬಿಟ್ಟ ನೀರು ಎರಡೂ ಹೋಗಿ ಸೇರುವುದು ಬಿಳಿಗೊಂಡ್ಲು ಜಲಾಶಯಕ್ಕೆ. ಕಾವೇರಿ ನೀರು ನಿಯಂತ್ರಣ ಸಮಿತಿ ಬಿಳಿಗೊಂಡ್ಲು ಜಲಾಶಯಕ್ಕೆ ಎಷ್ಟು ನೀರು ಬಂದು ಸೇರಬೇಕು ಎನ್ನುವ ಲೆಕ್ಕಾಚಾರದಲ್ಲಿ ಆದೇಶವನ್ನು ನೀಡಿದೆ. ಹೀಗಾಗಿ ಈಗ ಬಿಡುಗಡೆ ಮಾಡುತ್ತಿರುವ ನೀರು ಆದೇಶಕ್ಕಿಂತಲೂ ಹೆಚ್ಚಾಗಿದೆ.
ರಾಜ್ಯ ಸರ್ಕಾರದ ಈ ಉದಾರತೆಯಿಂದಾಗಿ ರಾಜ್ಯದ ಜಲಾಶಯಗಳು ಬರಿದಾಗುತ್ತಿದೆ. ಕೆಆರ್.ಎಸ್‌ನಲ್ಲಿ ನೀರು ಕಡಿಮೆಯಾಗಿದೆ ಎಂದು ಗೊತ್ತಾಗದಂತೆ ಹಾರಂಗಿ ಜಲಾಶಯದಿಂದಲೂ ನೀರು ಹರಿಸುತ್ತಿದೆ.
ಕಬಿನಿ ಮತ್ತು ಕೆಆರ್‌ಎಸ್ ಜಲಾಶಯಗಳ ನೀರಿನ ಮಟ್ಟ ಮತ್ತು ಪ್ರಮಾಣ (ಮಂಗಳವಾರದ ಲೆಕ್ಕ)
ಕೆ.ಆರ್.ಎಸ್ ಅಣೆಕಟ್ಟು
ಗರಿಷ್ಠ ಸಾಮರ್ಥ್ಯ: 124.80 ಅಡಿ
ಇಂದಿನ ನೀರಿನ ಮಟ್ಟ: 96.80 ಅಡಿ
ಒಳಹರಿವು: 7134 ಕ್ಯೂಸೆಕ್
ಹೊರ ಹರಿವು: 6,201 ಕ್ಯೂಸೆಕ್.
ಕಬಿನಿ ಅಣೆಕಟ್ಟು
ಗರಿಷ್ಠ ಸಾಮರ್ಥ್ಯ: 84 ಅಡಿ
ಇಂದಿನ ನೀರಿನ ಮಟ್ಟ: 73.82 ಅಡಿ
ಒಳಹರಿವು: 2,384 ಕ್ಯೂಸೆಕ್
ಹೊರಹರಿವು: 4,890.