Site icon Vistara News

ಒಬ್ಬನಂತೂ ಜೈಲಿಗೆ ಹೋಗುತ್ತಾನೆ: ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದು ಡಿ.ಕೆ. ಶಿವಕುಮಾರ್‌ ಕುರಿತೆ?

sm bommai to visit central minister regarding kadugolla reservation

ಬೆಂಗಳೂರು: ಸದಾ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನೇ ದೂರುವ ಪ್ರತಿಪಕ್ಷಗಳನ್ನು ಟೀಕಿಸುವ ಸಮಯದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಆಡಿದ ಮಾತು ಇದೀಗ ಚರ್ಚೆಗೆ ಗ್ರಾಸವಾಗಿದೆ.

ಪಾಂಡವಪುರದಲ್ಲಿ ಆಯೋಜಿಸಿದ್ದ ಜನಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯ ಹಾಗೂ ಕೇಂದ್ರದ ಡಬ್ಬಲ್‌ ಇಂಜಿನ್‌ ಸರ್ಕಾರ ಸಾಕಷ್ಟು ಕೆಲಸ ಮಾಡುತ್ತಿದೆ ಎಂದು ಸಮರ್ಥಿಸಿಕೊಂಡರು.

ಪ್ರತಿಪಕ್ಷಗಳಲ್ಲಿ ಒಬ್ಬರು ಟಿಪ್ಪು ಕನವರಿಸುತ್ತಾರೆ. ಟಿಪ್ಪು ಟಿಪ್ಪು ಟಿಪ್ಪು ಟಿಪ್ಪು ಎನ್ನುತ್ತಾರೆ. ಎಲ್ಲಿ ನೋಡಿದರೂ ಅವರಿಗೆ ಟಿಪ್ಪುವಿನ ನೆನಪೇ ಆಗುತ್ತದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಟೀಕಿಸಿದರು. ಇನ್ನೊಬ್ಬರು ಭಯೋತ್ಪಾದಕರಿಗೆ ಅನುಕಂಪ ತೋರಿಸುತ್ತಾರೆ. ಪಾಪ ಪ್ರೆಷರ್‌ ಕುಕ್ಕರ್‌ ಎತ್ತಿಕೊಂಡು ಹೋಗಿದ್ದ ಎನ್ನುತ್ತಾರೆ.

ಅನ್ನ ಮಾಡಲು ಕುಕ್ಕರ್‌ ಬಳಸುವುಸದನ್ನು ನೋಡಿದ್ದೆವು. ಆದರೆ ಇವನೊಬ್ಬ ಬಾಂಬ್‌ ಇಡಲು ಬಳಸಿದ್ದಾನೆ. ಅಂಥವನನ್ನು ಇವರು ಸಮರ್ಥನೆ ಮಾಡಿಕೊಳ್ಳುತ್ತಾರೆ. ಇಂತಹ ಪಕ್ಷ, ನಾಯಕರ ಸ್ಥಳ ಯಾವುದು ಗೊತ್ತ? ಎಂದು ಜನರನ್ನು ಬೊಮ್ಮಾಯಿ ಪ್ರಶ್ನಿಸಿದರು. ಜನರು ಒಕ್ಕೊರಲಿನಿಂದ, ಜೈಲಿಗೆ ಎಂದರು.

ನಂತರ ಮಾತು ಮುಂದುವರಿಸಿದ ಬೊಮ್ಮಾಯಿ, ಒಬ್ಬನಂತೂ ಜೈಲಿಗೆ ಹೋಗುತ್ತಾನೆ. ಹೀಗೆಯೇ ಬೆಂಬಲ ಮಾಡಿಕೊಂಡು ಹೋದರೆ ಈ ದೇಶದ ಜನರೂ ಕ್ಷಮಿಸುವುದಿಲ್ಲ. ನಮ್ಮದು ದೇಶಭಕ್ತಿಯ ಪಕ್ಷ. ಇಂತಹ ಮಾತುಗಳನ್ನು ಜನರು ಅರ್ಥ ಮಾಡಿಕೊಳ್ಳುತ್ತಾರೆ. ಈ ರೀತಿ ಹೇಳಿಕೆ ಮೂಲಕ ತುಷ್ಟೀಕರಣಕ್ಕೆ ಪ್ರಯತ್ನಿಸುತ್ತಿದ್ದೀರ. ದೇಶ ಹಾಳಾದರೂ ತೊಂದರೆಯಿಲ್ಲ ಅಧಿಕಾರಕ್ಕೆ ಬರಬೇಕು ಎನ್ನುತ್ತಿದ್ದಾರೆ ಅವರು. ಭಯೋತ್ಪಾದನೆ ಕುರಿತು ಕಾಂಗ್ರೆಸ್‌ ನಿಲುವು ಏನು ಎಂದು ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಸ್ಪಷ್ಟಪಡಿಸಬೇಕು ಎಂದರು.

ಆದರೆ, ಜೈಲಿಗೆ ಹೋಗುವ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಆಡಿದ ಮಾತು ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ | DK Shivakumar | ಡಿಕೆಶಿಗೆ ಭೂಸಂಕಟ: ಅಡಿಗೆ ಬಿದ್ದಿದ್ದ ಬೆನ್ನಿಗಾನಹಳ್ಳಿ ಡಿನೋಟಿಫಿಕೇಶನ್‌ ಕೇಸ್‌ಗೆ ಸಿಬಿಐ ಮರುಜೀವ

Exit mobile version