ಮಂಡ್ಯ: ಹಿಜಾಬ್ ಗದ್ದಲ ವೇಳೆ ಅಲ್ಲಾ ಹು ಅಕ್ಬರ್ ಘೋಷಣೆ ಕೂಗಿ ಸುದ್ದಿಯಾಗಿದ್ದ ಮುಸ್ಕಾನ್ ಘೋಷಣೆ ಬಳಿಕ ದೇಶಾದ್ಯಂತ ಹಿಜಾಬ್ ಲೇಡಿ ಅಂತಲೇ ಪ್ರಖ್ಯಾತಿ ಆಗಿದ್ದಾಳೆ. ರಾಜ್ಯ, ಹೊರ ರಾಜ್ಯದ ಮುಸ್ಲಿಂ ಮುಖಂಡರು ಮುಸ್ಕಾನ್‌ಗೆ ಪ್ರಶಂಸೆ ಮಾಡಿದ್ದರು. ಈ ವಿವಾದ ಭುಗಿಲೆದ್ದ ಸಂದರ್ಭದಲ್ಲಿ, ಉಗ್ರ ಸಂಘಟನೆಯೂ ಈಕೆಯನ್ನು ಹೊಗಳಿತ್ತು. ಇದೀಘ ಮುಸ್ಕಾನ್ ಹಾಗೂ ಕುಟುಂಬದವರು ಖಾಸಗಿ ಪ್ರವಾಸಕ್ಕೆ ತೆರಳೀರುವುದಕ್ಕೆ ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕಾಲೇಜಿಗೆ ಆಗಮಿಸಿದ ಮುಸ್ಕಾನ್ ಕಡೆಗೆ ತಿರುಗಿನ ಹಿಂದು ಯುವಕರ ಗುಂಪು ಜೈ ಶ್ರೀರಾಮ್ ಘೋಷಣೆ ಕೂಗಿತ್ತು. ಇದಕ್ಕೆ ಪ್ರತಿಯಾಗಿ ಅಲ್ಲಾ ಹೊ ಅಕ್ಬರ್ ಎನ್ನುತ್ತಾ ಮುಸ್ಕಾನ್ ತೆರಳಿದ್ದರು. ಈ ವಿಚಾರಕ್ಕೆ ಪ್ರಶಂಸೆಯಾಗಿ ಮಹಾರಾಷ್ಟ್ರ ಶಾಸಕರೊಬ್ಬರು ಮೊಬೈಲ್ ಉಡುಗೊರೆಯಾಗಿ ನೀಡಿದ್ದರು. ಅಲ್ ಖೈದಾ ಉಗ್ರ ಅಲ್ ಜವಹರಿ ಮುಸ್ಕಾನ್‌ರನ್ನು ಹೊಗಳಿದ್ದ ವಿಡಿಯೋ ಬಹಿರಂಗವಾಗಿತ್ತು. ಇದೆಲ್ಲ ಘಟನೆಗಳ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರ ತನಿಖೆ ನಡೆಸಬೇಕು ಎಂದು ಅನೇಕರು ಆಗ್ರಹಿಸಿದ್ದರು. ಇತ್ತೀಚೆಗೆ ಮುಸ್ಕಾನ್ ಹಾಗೂ ಕುಟುಂಬ ಮೆಕ್ಕಾ ಪ್ರವಾಸಕ್ಕೆ ತೆರಳಿದೆ. ಪೊಲೀಸರಿಗೆ ತಿಳಿಸದೇ ವಿದೇಶಕ್ಕೆ ತೆರಳಿರುವುದು ಸರಿಯಲ್ಲ ಎಂದು ಅನಕರು ಆಕ್ಷೇಪಿಸಿದ್ದರು.
ಈ ಕುರಿತು ಪ್ರತಿಕ್ರಿಯಿಸಿದ್ದ ಪೊಲೀಸರು, ವಿದೇಶಕ್ಕೆ ತೆರಳಬಾರದು ಎಂದು ಮುಸ್ಕಾನ್ ಮೇಲೆ ಯಾವುದೇ ನಿರ್ಬಂಧ ಇರಲಿಲ್ಲ. ಹಾಗಾಗಿ ಅವರು ವಿದೇಶಕ್ಕೆ ತೆರಳಿರುವುದು ಕಾನೂನುಬಾಹಿರ ಅಲ್ಲ ಎಂದು ತಿಳಿಸಿದ್ದರು.
ಇದೀಗ ಮಂಡ್ಯದ ಸಾಮಾಜಿಕ ಕಾರ್ಯಕರ್ತ ಅನಿಲ್ ಎಂಬವರು ಎಸ್‌ಪಿ ದೂರು ನೀಡಿದ್ದಾರೆ. ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೂ ದೂರು ನೀಡಿದ್ದು, ಮುಸ್ಕಾನ್ ಕುಟುಂಬ, ವಿದೇಶ ಪ್ರವಾಸ, ಭೇಟಿಯಾದ ವ್ಯಕ್ತಿ, ಸಂಘಟನೆಗಳ ಕುರಿತು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿದ್ದಾರೆ.
ಇದನ್ನೂ ಓದಿ | ದೇಶ ಎತ್ತ ಸಾಗುತ್ತಿದೆ?: ಟ್ವಿಟ್ಟರ್‌ನಲ್ಲಿ ಪ್ರಶ್ನಿಸಿದ ಹಿಜಾಬ್ ಯುವತಿ ಆಲಿಯಾ