Site icon Vistara News

Crime news: ಬಂಕ್‌ನಿಂದ ಪೆಟ್ರೋಲ್‌ ಹೊರಚೆಲ್ಲಿದ ಖದೀಮರು, ಲಕ್ಷಾಂತರ ರೂ. ನಷ್ಟ

petrol waste in mandya

ಮಂಡ್ಯ: ರಾತ್ರೋರಾತ್ರಿ ಪೆಟ್ರೋಲ್ ಬಂಕ್‌ನಿಂದ ಯಾರೋ ದುಷ್ಕರ್ಮಿಗಳು (miscreants) ಪೆಟ್ರೋಲ್ ಹಾಗೂ ಡಿಸೇಲ್ ಅನ್ನು ಹೊರಗೆ ಬಿಟ್ಟ (Petrol waste) ಘಟನೆ (Crime news) ವರದಿಯಾಗಿದೆ. ಇದರಿಂದ ಬಂಕ್‌ ಮಾಲೀಕರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಬೇಬಿ ಗ್ರಾಮದ ಬಳಿಯ ಹೆಚ್‌ಪಿ ಪೆಟ್ರೋಲ್ ಬಂಕ್‌ನಲ್ಲಿ ಘಟನೆ ನಡೆದಿದೆ. ಭಸ್ತಿ ರಂಗಪ್ಪ ಎಂಬುವವರಿಗೆ ಸೇರಿದ ಪೆಟ್ರೋಲ್ ಬಂಕ್‌ನಲ್ಲಿ ಹೀಗಾಗಿದೆ. ರಾತ್ರಿ ಸಿಬ್ಬಂದಿಗಳು ಊಟಕ್ಕೆ ಹೋಗಿದ್ದ ವೇಳೆ ದುಷ್ಕರ್ಮಿಗಳು ಈ ಕೃತ್ಯ ನಡೆಸಿದ್ದಾರೆ. ಬಂಕ್‌ನ ಪೆಟ್ರೋಲ್‌ ಹಾಗೂ ಡೀಸೆಲ್‌ ಪೈಪ್‌ಗಳನ್ನು ಓಪನ್‌ ಆಗಿಟ್ಟು ನೆಲಕ್ಕಿಟ್ಟು ರಸ್ತೆಯಲ್ಲಿ ವ್ಯರ್ಥವಾಗಿ ಹರಿದುಹೋಗುವಂತೆ ಈ ಕಿಡಿಗೇಡಿಗಳು ಮಾಡಿದ್ದಾರೆ.

ಇದುವರೆಗೂ ಬಂಕ್‌ ಮಾಲೀಕರು ಬಂಕ್‌ನಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ‌ಮಾಡಿರದಿರುವುದರಿಂದ ದುಷ್ಕರ್ಮಿಗಳ ಚೆಹರೆ ಗೊತ್ತಾಗಿಲ್ಲ. ಸುಮಾರು ಎಂಟು ಸಾವಿರ ಲೀಟರ್ ಪೆಟ್ರೋಲ್ ಹಾಗೂ ಎರಡು ಸಾವಿರ ಲೀಟರ್ ಡಿಸೇಲ್ ನಾಶವಾಗಿದೆ. ಒಂಬತ್ತು ಲಕ್ಷ ರೂಪಾಯಿಗೂ ಅಧಿಕ ನಷ್ಟವಾಗಿದೆ. ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಟಿಎಂಗೆ ಜೆಸಿಬಿ ನುಗ್ಗಿಸಿ ಕಳವು ಮಾಡಿದವರ ಬಂಧನ

ಮಂಗಳೂರು: ಎಟಿಎಂಗೆ ಜೆಸಿಬಿ ನುಗ್ಗಿಸಿ ದರೋಡೆ ಮಾಡಿದ್ದ ನಾಲ್ವರನ್ನು ಬಂಧಿಸಲಾಗಿದೆ. ಮಂಗಳೂರು ಹೊರವಲಯದ ಸುರತ್ಕಲ್ ಇಡ್ಯಾ ಬಳಿ ಘಟನೆ ನಡೆದಿತ್ತು. 15 ಲಕ್ಷ ರೂಪಾಯಿ ಸಹಿತ ನಾಲ್ವರು ಅಂತ‌ರ್ ಜಿಲ್ಲಾ ಕಳ್ಳರನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.

ಆ.4ರಂದು ಸುರತ್ಕಲ್ ಇಡ್ಯಾದ ಸೌತ್ ಇಂಡಿಯನ್ ಬ್ಯಾಂಕ್ ಎಟಿಎಂ ದರೋಡೆ ಯತ್ನ ನಡೆದಿತ್ತು. ಜೆಸಿಬಿ ಬಳಸಿ ಎಟಿಎಂನ ಗ್ಲಾಸ್ ಒಡೆದು ಎಟಿಎಂ ಮೆಷಿನ್ ಅನ್ನು ಕಳವು ಮಾಡಲು ಯತ್ನ ನಡೆದಿತ್ತು. ಬಳಿಕ ಜೋಕಟ್ಟೆ ಕಡೆಗೆ ಹೋಗುವ ರಸ್ತೆಯಲ್ಲಿ ಜೆಸಿಬಿ ಪತ್ತೆಯಾಗಿತ್ತು. ಶಿವಮೊಗ್ಗದ ಶಿಕಾರಿಪುರದ ದೇವರಾಜ್(24), ಭರತ್‌ ಹೆಚ್‌ (20), ನಾಗರಾಜ ನಾಯ್ಕ (21), ಧನರಾಜ್ ನಾಯ್ಕ( 22) ಬಂಧಿತರು. ಈ ಆರೋಪಿಗಳು ಇನ್ನೂ ಹಲವು ಲೂಟಿ, ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Koppala News: 4 ಕಳ್ಳರ ಬಂಧನ: 8.85 ಲಕ್ಷ ಮೌಲ್ಯದ ಚಿನ್ನಾಭರಣ, 4 ಬೈಕ್ ವಶ

Exit mobile version