Site icon Vistara News

Dowry Case : ವರದಕ್ಷಿಣೆ ಕಿರುಕುಳ; ನರಕಯಾತನೆಯನ್ನು ಡೆತ್‌ನೋಟ್‌ನಲ್ಲಿ ಬರೆದಿಟ್ಟಳು ನಗುಮೊಗದ ಚೆಲುವೆ

Dowry case

ಮಂಡ್ಯ: ತನ್ನ ನೋವಿನ ಕರಾಳ ದಿನಗಳನ್ನು ಡೆತ್‌ನೋಟ್‌ನಲ್ಲಿ (Death Note) ಬರೆದಿಟ್ಟು ಗೃಹಿಣೆಯೊಬ್ಬಳು ನೇಣಿಗೆ (Self Harming) ಶರಣಾಗಿದ್ದಾಳೆ. ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಲಿಂಗಾಪುರ ಗ್ರಾಮದಲ್ಲಿ ಘಟನೆ (Dowry Case) ನಡೆದಿದೆ. ಪ್ರೇಮಕುಮಾರಿ (26) ಮೃತ ದುರ್ದೈವಿ.

Dowry Case

ಪ್ರೇಮಕುಮಾರಿ 2022ರಲ್ಲಿ ಮೈಸೂರಿನ ರಾಘವೇಂದ್ರ ಎಂಬುವವರನ್ನು ಮದುವೆಯಾಗಿದ್ದರು. ಮದುವೆ ಟೈಂನಲ್ಲೇ ಪ್ರೇಮಕುಮಾರಿ ಕುಟುಂಬಸ್ಥರು 150 ಗ್ರಾಂ ಚಿನ್ನ ಹಾಗೂ 5 ಲಕ್ಷ ರೂ. ವರದಕ್ಷಿಣೆ ನೀಡಿದ್ದರು. ಮದುವೆ ಆದ ಮೂರೇ ತಿಂಗಳಿಗೆ ರಾಘವೇಂದ್ರ ಕುಟುಂಬಸ್ಥರ ಅಸಲಿ ಆಟ ಶುರುವಾಗಿತ್ತು. ಹೆಚ್ಚಿನ ವರದಕ್ಷಿಣೆ ತರುವಂತೆ ಪ್ರೇಮಕುಮಾರಿಗೆ ಒತ್ತಡ ಹಾಕಿದ್ದರು. 64 ಲಕ್ಷ ರೂ ತೆಗೆದುಕೊಂಡು ಬಾ.. ಇಲ್ಲದಿದ್ದರೆ ಈ ಮನೆಯಲ್ಲಿ ಜಾಗವಿಲ್ಲ ಎಂದು ಕಿರುಕುಳ ನೀಡುತ್ತಿದ್ದರಂತೆ. ಈ ಬಗ್ಗೆ ಡೆತ್‌ ನೋಟ್‌ನಲ್ಲಿ ಪ್ರೇಮಕುಮಾರಿ ಉಲ್ಲೇಖಿಸಿದ್ದಾರೆ.

Dowry Case

ತವರು ಮನೆಗೆ ಕಳಿಸಿ ಕೊಲೆ ಬೆದರಿಕೆ

ಹಣ ತರುವಂತೆ ಪತಿ ಕುಟುಂಬಸ್ಥರು ಒತ್ತಡ ಏರಿ ಪ್ರೇಮಕುಮಾರಿಯನ್ನು ತವರು ಮನೆಗೆ ಕಳಿಸಿದ್ದರು. ಇತ್ತ ತವರು ಮನೆಯಲ್ಲೆ ಇದ್ದುಕೊಂಡೇ ಪ್ರೇಮ ವಿದ್ಯಾಭ್ಯಾಸವನ್ನು ಮುಂದುವರಿಸಿದ್ದಳು. ಇತ್ತೀಚಿಗೆ ವರದಕ್ಷಿಣೆ ತೆಗೆದುಕೊಂಡು ಬಾ ಇಲ್ಲದಿದ್ದರಿಂದ ಕೊಲೆ ಮಾಡಿಸುವ ಬೆದರಿಕೆಯನ್ನೂ ಹಾಕಿದ್ದರು ಎನ್ನಲಾಗಿದೆ. ಲಾಯರ್‌ ಆಗುವ ನನ್ನ ಕನಸು ನಚ್ಚು ನೂರಾಗಿದೆ. ಇವರ ಕಾಟವನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ನಿತ್ಯವು ಭಯದಲ್ಲೇ ಜೀವನವನ್ನು ದೂಡುವಂತಾಗಿದೆ. ಒಳ್ಳೆಯವರಂತೆ ನಟಿಸಿ, ಮೋಸ ಮಾಡಿದ್ದಾರೆ. ಅವರಿಗೆ ಸರಿಯಾದ ಶಿಕ್ಷೆ ಆಗಬೇಕು ಎಂದು ಪ್ರೇಮಕುಮಾರಿ ಸಾಯುವ ಮುನ್ನ ಡೆತ್‌ನೋಟ್‌ನಲ್ಲಿ ಬರೆದಿದ್ದಾಳೆ.

Dowry Case

ಶ್ರೀಮಂತ ಮನೆ ಸೊಸೆಯಾದ ನನಗೆ ಸಾಯುವ ಧೈರ್ಯವು ಇಲ್ಲ, ಬದುಕುವ ಆಸೆಯು ಇಲ್ಲ. ಗಂಡ ಬಿಟ್ಟವಳು, ಮಾರ್ಯಾದೆ ತೆಗೆಯುತ್ತಿದ್ದಾಳೆ ಎಂದು ಭಾವಿಸದೇ ನನ್ನ ಸಾವಿಗೆ ನ್ಯಾಯ ಕೊಡಿಸಿ ಎಂದು ಪ್ರೇಮಕುಮಾರಿ ಸುಮಾರು 5 ಪುಟಗಳ ಡೆತ್‌ನೋಟ್ ಬರೆದಿಟ್ಟು, ಬುಧವಾರ ಸಂಜೆ ನೇಣಿಗೆ ಶರಣಾಗಿದ್ದಾಳೆ. ಕುಟುಂಬಸ್ಥರು ರಾಘವೇಂದ್ರ ಕುಟುಂಬಸ್ಥರ ವಿರುದ್ಧ ಕಿಕ್ಕೆರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version