Site icon Vistara News

Electric scooter | ಕ್ಷಣಾರ್ಧದಲ್ಲೆ ಉರಿದು ಭಸ್ಮವಾದ ಎಲೆಕ್ಟ್ರಿಕ್ ಸ್ಕೂಟರ್

electric scooter fire

ಮಂಡ್ಯ: ಕೆ.ಆರ್.ಪೇಟೆ ಪಟ್ಟಣದಲ್ಲಿ ನಿಲ್ಲಿಸಲಾಗಿದ್ದ ಸ್ಥಳದಲ್ಲೇ ಎಲೆಕ್ಟ್ರಿಕ್ ಸ್ಕೂಟರ್ (Electric scooter) ಹೊತ್ತಿ ಉರಿದ ಘಟನೆ ನಡೆದಿದೆ.

ಪಟ್ಟಣದ ಕೆಇಬಿ ಪಕ್ಕದ ಜಯಮ್ಮ ಕಾಂಪ್ಲೆಕ್ಸ್ ಬಳಿ ಎಲೆಕ್ಟ್ರಿಕ್‌ ಸ್ಕೂಟರ್‌ ನಿಲ್ಲಿಸಲಾಗಿತ್ತು. ಈ ವೇಳೆ ಸಣ್ಣದಾಗಿ ಕಾಣಿಸಿಕೊಂಡ ಬೆಂಕಿ ನಂತರ ಕ್ಷಣಾರ್ಧದಲ್ಲೆ ಹೊತ್ತಿ ಉರಿದಿದೆ.

ಸುದ್ದಿ ತಿಳಿದು ತಕ್ಷಣವೇ ಅಗ್ನಿ ಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಿಢೀರ್‌ ಬೆಂಕಿ ಕಾಣಿಸಿಕೊಳ್ಳಲು ಕಾರಣ ಏನು ಎಂದು ತಿಳಿದು ಬಂದಿಲ್ಲ. ಸ್ಥಳದಲ್ಲಿ ಯಾರೂ ಇರದಿದ್ದ ಕಾರಣ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.‌

ಇದನ್ನೂ ಓದಿ | ಓಲಾ ಎಲೆಕ್ಟ್ರಿಕ್‌ ಸ್ಕೂಟರ್ ಸಸ್ಪೆನ್ಷನ್‌ ಮುರಿದುಬಿದ್ದು ಮತ್ತೊಂದು ಅವಘಡ, ಜಾಲತಾಣದಲ್ಲಿ ಚಿತ್ರ ವೈರಲ್

Exit mobile version