Site icon Vistara News

ಟಿಪ್ಪರ್‌ಗೆ ವಿದ್ಯುತ್‌ ತಂತಿ ತಗುಲಿ ಚಾಲಕ ಸಾವು

electrocution

ಮಂಡ್ಯ: ಟಿಪ್ಪರ್‌ಗೆ ವಿದ್ಯುತ್ ತಂತಿ ತಗುಲಿ ಚಾಲಕ ಸಾವನ್ನಪ್ಪಿದ ಘಟನೆ ಕೆ.ಆರ್‌ ಪೇಟೆಯಲ್ಲಿ ನಡೆದಿದೆ.

ಕೆ.ಆರ್ ಪೇಟೆ ಹೊರವಲಯದ ಹೊಸಹೊಳಲು ಗ್ರಾಮದಲ್ಲಿ ದುರ್ಘಟನೆ ಸಂಭವಿಸಿದೆ. ಇಂಡಿ ತಾಲೂಕಿನ ಬಬಲವಾದಿ ಗ್ರಾಮದ ಕಾಂತಪ್ಪ(35) ಮೃತ ಟಿಪ್ಪರ್ ಚಾಲಕ. ಹೊಸಹೊಳಲು ಗ್ರಾಮದ ಕೆರೆ ಅಭಿವೃದ್ಧಿ ಕಾಮಗಾರಿಗೆಂದು ಕೆಲಸಕ್ಕೆ ಬಂದಿದ್ದ ಅವರು ಟಿಪ್ಪರ್‌ನಲ್ಲಿ ಮಣ್ಣು ತಂದು ಸುರಿಯುವಾಗ ಟಿಪ್ಪರ್‌ಗೆ ವಿದ್ಯುತ್ ತಂತಿ ತಾಗಿ ಅವಘಡ ಸಂಭವಿಸಿದೆ. ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇದನ್ನೂ ಓದಿ | Custodial death | ಬೆಳಗಾವಿ ಪೊಲೀಸ್‌ ಠಾಣೆಯಲ್ಲಿ ವ್ಯಕ್ತಿಯ ಸಾವು

Exit mobile version