Site icon Vistara News

Hanuman Flag :ಕೆರಗೋಡಿನಲ್ಲಿ ಮನೆ ಮನೆಗೆ ಹನುಮ ಧ್ವಜ ಕಟ್ಟಿದ ಮಹಿಳೆಯರು

Hanuman flag Keragodu BJP Abhiyan

ಮಂಡ್ಯ : ಹನುಮ ಧ್ವಜ (Hanuman Flag) ವಿವಾದ ನಡೆದ ಮಂಡ್ಯ ತಾಲೂಕಿನ ಕೆರಗೋಡಿನಲ್ಲಿ (Keragodu of Mandya District) ಶನಿವಾರ ಬಿಜೆಪಿ ಮತ್ತು ಜೆಡಿಎಸ್‌ ವತಿಯಿಂದ ಆರಂಭಗೊಂಡಿರುವ ಮನೆ ಮನೆಗೆ ಹನುಮ ಧ್ವಜ ಅಭಿಯಾನ ವೇಗವನ್ನು (Hanuman flag to Every house) ಪಡೆದುಕೊಂಡಿದೆ. ಸೋಮವಾರ ಬಿಜೆಪಿಯ ಮಹಿಳಾ ಮೋರ್ಚಾ (BJP Mahila Morcha) ನಾಯಕಿಯರು ಮತ್ತು ಕಾರ್ಯಕರ್ತೆಯರು ಮೆರವಣಿಗೆ ನಡೆಸಿ ಮನೆ ಮನೆಗೆ ತೆರಳಿ ಧ್ವಜ ವಿತರಣೆ ಮಾಡಿದರು. ಹೆಚ್ಚಿನ ಮನೆಗಳ ಮಹಡಿಗಳಿಗೆ ತಾವೇ ಹೋಗಿ ಧ್ವಜ ಕಟ್ಟಿ ಬಂದರು.

ಗ್ರಾಮದ ಧ್ವಜಸ್ತಂಭದಲ್ಲಿ ಹಾರಿಸಿದ್ದ ಹನುಮ ಧ್ವಜ (Hanuman Flag) ತೆರವು ಮಾಡಿದ್ದರಿಂದ ಆಕ್ರೋಶಿತರಾದ ಬಿಜೆಪಿ ಮತ್ತು ಹಿಂದು ಸಂಘಟನೆಗಳ ನಾಯಕರು ಗ್ರಾಮದಲ್ಲಿ ಮನೆ ಮನೆ ಮೇಲೆ ಕೇಸರಿ ಧ್ವಜ ಅಭಿಯಾನಕ್ಕೆ ಶನಿವಾರ ಚಾಲನೆ ನೀಡಿದ್ದರು. ಕೆರಗೋಡು ಗ್ರಾಮದ ಹನುಮ ದೇವಾಲಯದಲ್ಲಿ ಶನಿವಾರ ಪೂಜೆ ಸಲ್ಲಿಸುವ ಮೂಲಕ ಕೇಸರಿ ಧ್ವಜ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್ ಅವರ ನೇತೃತ್ವದಲ್ಲಿ ಮನೆ ಮನೆಗೆ ಕೇಸರಿ ಧ್ವಜ ನೀಡಲಾಗಿತ್ತು.

ಸೋಮವಾರ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಮನೆ ಮನೆಗೆ ಹನುಮ ಧ್ವಜ ನೀಡಲಾಯಿತು. ಮಂಡ್ಯದ ಶಂಕರ ನಗರದ ಮನೆ ಮನೆಗೆ ಮೆರವಣಿಗೆ ಮೂಲಕ ತೆರಳಿದ ಮಹಿಳೆಯರು ತಾವೇ ಮಹಡಿ ಹತ್ತಿ ಧ್ವಜ ಕಟ್ಟಿದ್ದು ವಿಶೇಷವಾಗಿತ್ತು.

ರಾಜ್ಯ ಬಿಜೆಪಿ ಮಹಿಳಾ ಮೋರ್ಚ ಅಧ್ಯಕ್ಷೆ ಮಂಜುಳಾ ನೇತೃತ್ವದಲ್ಲಿ ಹನುಮಧ್ವಜ ಕಟ್ಟುವ ಕಾರ್ಯ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನವರು ಹಳ್ಳಿ ಹಳ್ಳಿಗಳಲ್ಲಿ ಬೆಂಕಿ ಹಚ್ಚುವ ಪ್ರಯತ್ನ ನಡೆಸುತ್ತಿದ್ದಾರೆ ಎಂದರು. ಅವರು ಮಂಡ್ಯ ಕಾಂಗ್ರೆಸ್‌ ಶಾಸಕ ರವಿ ಗಣಿಗ ಅವರ ಮೇಲೂ ಕೆಂಡ ಕಾರಿದರು.

ಇದನ್ನೂ ಓದಿ: Actor Dhanush: ಭಿಕ್ಷುಕನ ಅವತಾರದಲ್ಲಿ ʻನಟ ಧನುಷ್‌ʼ; ತಿರುಪತಿಯಲ್ಲಿ ಭಕ್ತರ ಪರದಾಟ!

ಜಿಲ್ಲಾಡಳಿತ ನಡೆಸಿದ ಎರಡೂ ಶಾಂತಿ ಸಭೆ ವಿಫಲ

ಕೆರಗೋಡು ಧ್ವಜ ಇಳಿಸಿದ ಪ್ರಕರಣ ಸಂಬಂಧ ಜಿಲ್ಲಾಡಳಿತ ನಡೆಸಿರುವ ಎರಡೂ ಶಾಂತಿ ಸಭೆಗಳೂ ವಿಫಲವಾಗಿವೆ.
ಶುಕ್ರವಾರ ಮಂಡ್ಯ ಡಿಸಿ ಕುಮಾರ್ ನೇತೃತ್ವದಲ್ಲಿ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ ನಡೆದಿತ್ತು. ಬಳಿಕ ಸರ್ಕಲ್ ಇನ್‌ಸ್ಪೆಕ್ಟರ್‌ ಮಹೇಶ್ ನೇತೃತ್ವದಲ್ಲಿ ಐಯಪ್ಪಸ್ವಾಮಿ ದೇವಾಲಯದ ಬಳಿ ಶಾಂತಿ ಸಭೆ ನಡೆದಿತ್ತು. ಆದರೆ, ಎರಡೂ ಸಭೆಗಳಲ್ಲಿ ಗ್ರಾಮಸ್ಥರು ಮಂಡಿಸಿದ ಪಟ್ಟು ಒಂದೇ. ಮೊದಲು ಧ್ವಜ ಸ್ತಂಭದಲ್ಲಿ ಹನುಮಧ್ವಜ ಹಾರಿಸಿ ನಂತರ ಶಾಂತಿ ಸಭೆಗೆ ಬನ್ನಿ ಎಂದು ಎನ್ನುವುದು. ಈ ನಡುವೆ, ಮಂಡ್ಯ ಬಂದ್ (ಫೆ. 9) ನಂತರ ಮತ್ತೊಂದು ಸುತ್ತಿನ ಮಾತುಕತೆ ನಡೆಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

ನಿಖಿಲ್‌ ಕುಮಾರಸ್ವಾಮಿ ಫ್ಲೆಕ್ಸ್‌ಗೂ ತಟ್ಟಿದ ಧ್ವಜ ದಂಗಲ್‌ ಬಿಸಿ

ಹನುಮಧ್ವಜ ದಂಗಲ್ ಬಳಿಕ ಕೆರಗೋಡಿನಲ್ಲಿ ಫ್ಲಕ್ಸ್ ಜಟಾಪಟಿ ನಡೆಯುತ್ತಿದೆ. ನಿಖಿಲ್ ಕುಮಾರಸ್ವಾಮಿ ಹುಟ್ಟುಹಬ್ಬದ ಶುಭಾಶಯ ಕೋರಿ ಅಳವಡಿಸಿದ್ದ ಬೃಹತ್ ಫ್ಲೆಕ್ಸ್‌ಗಳ ವಿಚಾರದಲ್ಲಿ ಪಂಚಾಯಿತಿ ಸಿಬ್ಬಂದಿ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದೆ.
ಅನುಮತಿ ಪಡೆಯದೆ ಹಾಕಲಾಗಿದೆ ಎಂಬ ಕಾರಣ ನೀಡಿ ಫ್ಲೆಕ್ಸ್‌ಗಳನ್ನು ಗ್ರಾ.ಪಂ ಸಿಬ್ಬಂದಿ ತೆರವು ಮಾಡಿದರು. ಈ ವೇಳೆ ಗ್ರಾ.ಪಂ ಸಿಬ್ಬಂದಿ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ಪೊಲೀಸರ ಸಮ್ಮುಖದಲ್ಲಿ ಫ್ಲೆಕ್ಸ್‌ ತೆರವು ಮಾಡಲಾಯಿತು.

ಅವರು ಬಂದ್‌ ಮಾಡಲಿ, ನಾವು ಬಂದೋಬಸ್ತ್‌ ಮಾಡುತ್ತೇವೆ ಎಂದ ಪರಮೇಶ್ವರ್‌

ಈ ನಡುವೆ, ಫೆಬ್ರವರಿ 9ರಂದು ನಡೆಯಲಿರುವ ಮಂಡ್ಯ ಬಂದ್‌ ಬಗ್ಗೆ ಗೃಹ ಸಚಿವ ಡಾ.ಜಿ ಪರಮೇಶ್ವರ್‌ ಅವರು ಪ್ರತಿಕ್ರಿಯೆ ನೀಡಿದ್ದು, ಅವರು ಬಂದ್ ಮಾಡ್ಲಿ, ಅವರ ಕೆಲಸ ಅವರು ಮಾಡ್ಲಿ, ನಮ್ಮ ಕೆಲಸ ನಾವು ಮಾಡ್ತೀವಿ ಎಂದರು.

ಕೆರೆಗೋಡಿನ ರೀತಿಯಲ್ಲೇ ಬೆಳಗಾವಿಯ ಎಂ.ಕೆ.ಹುಬ್ಬಳ್ಳಿಯಲ್ಲಿ ಧ್ವಜ ವಿವಾದ ನಡೆದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಎಲ್ಲೇ ಇಂಥ ಘಟನೆಗಳು ನಡೆದರೂ ಅಹಿತಕರ ಘಟನೆ ಆಗದಂತೆ ನೋಡಿಕೊಳ್ತೀವಿ ಎಂದರು.

ಈ ವರದಿಯ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ

Exit mobile version