ಮಂಡ್ಯ : ವಿಧಾನ ಪರಿಷತ್ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮಂಡ್ಯದಲ್ಲಿ ರಾಜಕೀಯ ನಾಯಕರ ವಾಕ್ಸಮರ ಚುರುಕು ಪಡೆದುಕೊಂಡಿದೆ. “ಸಚಿವ ನಾರಾಯಣಗೌಡನ ಹಿಂಬಾಗಿಲ ರಾಜಕೀಯದಿಂದ ಜೆಡಿಎಸ್‌ಗೆ ಸೋಲಾಗಿದೆ. ಹೇಡಿ ಕೆಲಸ ಮಾಡಿಕೊಂಡಿದ್ದಾರೆ, ಮಾನ ಮರ್ಯಾದೆ ಇಲ್ಲʼʼ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಡಿ. ರಮೇಶ್ ವಾಗ್ದಾಳಿ ನಡೆಸಿದ್ದಾರೆ.
ಎಂಎಲ್‌ಸಿ ಚುನಾವಣೆಯಲ್ಲಿ ಜೆಡಿಎಸ್ ಸೋಲಲು ನಾರಾಯಣಗೌಡ ಕಾರಣ. ಕಳೆದ ಎಂಎಲ್‌ಸಿ ಚುನಾವಣೆಯಲ್ಲಿ ಮಾಡಿದ ರೀತಿ ಈಗಿನ ಎಂಎಲ್‌ಸಿ ಚುನಾವಣೆಯಲ್ಲಿ ಮಾಡಲು ಸಾಧ್ಯವಿಲ್ಲ. ತಾಕತ್ ಇದ್ದರೆ ಈ ಚುನಾವಣೆಯಲ್ಲಿ ಹಿಂದೆ ಮಾಡಿದಂತೆ ಮಾಡಿ ತೋರಿಸಿ ಎಂದು ಸಚಿವ ನಾರಾಯಣಗೌಡರಿಗೆ ಸವಾಲು ಹಾಕಿದ್ದಾರೆ.
ಇದನ್ನೂ ಓದಿ | ಜೆಡಿಎಸ್‌ನಿಂದ ಬಿಜೆಪಿ ಪಕ್ಷವನ್ನು ಸೋಲಿಸಲಾಗದು: ಸಿದ್ದರಾಮಯ್ಯ
ತಿರುಗೇಟು: ತಮ್ಮ ವಿರುದ್ಧ ವಾಗ್ದಾಳಿ ನಡೆಸಿರುವ ಮಂಡ್ಯ ಜೆಡಿಎಸ್ ಜಿಲ್ಲಾಧ್ಯಕ್ಷ ರಮೇಶ್ ಅವರಿಗೆ ಸಚಿವ ನಾರಯಾಣ ಗೌಡ ತಿರುಗೇಟು ನೀಡಿದ್ದಾರೆ. “ಈ ಹಿಂದೆ ನಿನ್ನ ಕುಟುಂಬದ ಒಬ್ಬರು ಕಳ್ಳತನ ಮಾಡಿ ಸಸ್ಪೆಂಡ್ ಆಗಿದ್ದರು. ಆಗ ನೀನು ನನ್ನ ಕಾಲು ಹಿಡಿದುಕೊಂಡಿದ್ದು ಮರೆತು ಬಿಟ್ಟಿದ್ದಿ. ಏಯ್ ಬಾ, ತಾಕತ್ ಇದ್ರೆ ಒಂದು ಚುನಾವಣೆ ಎದುರಿಸು. ದೇವೇಗೌಡರ ಮನೆಗೆ ಹೋಗಿ ಚಾಡಿ ಹೇಳೋದು ನಿನ್ನ ಚಾಳಿಯಾಗಿದೆʼʼ ಎಂದಿದ್ದಾರೆ.
ಇದನ್ನೂ ಓದಿ | ಜೆಡಿಎಸ್ ಪಕ್ಷವು ಬಿಜೆಪಿಯ ಬಿ ಟೀಂ ಅಲ್ಲ ಎಂದ ಎಚ್.ಡಿ. ಕುಮಾರಸ್ವಾಮಿ