Site icon Vistara News

JDS Politics: ಉತ್ತರ ಪ್ರದೇಶ ಸಿಎಂ ಯೋಗಿಗೆ ಮದುವೆ ಆಗಿದ್ರೆ ಬೆಲೆ ಏರಿಕೆ ಆಗ್ತಿರಲಿಲ್ಲ: ಜೆಡಿಎಸ್‌ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿಕೆ

jds-politics-CM Ibrahim reaction about BJP and Hassan ticket

ಮಂಡ್ಯ: ಹೆಂಡತಿ ಮಕ್ಕಳಿಲ್ಲದವರಿಗೆ ದೇಶ ಕೊಟ್ಟಿರುವುದರಿಂದಲೇ ದೇಶ ಈ ರೀತಿ ಆಗಿದೆ ಎಂದಿರುವ ರಾಜ್ಯ ಜೆಡಿಎಸ್‌ ಅಧ್ಯಕ್ಷ ಸಿ.ಎಂ. ಇಬ್ರಾಹಿಂ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಮದುವೆ ಆಗಿದ್ದರೆ ಬೆಲೆ ಏರಿಕೆ ಆಗುತ್ತಿರಲಿಲ್ಲ ಎಂದಿದ್ದಾರೆ.

ಪಾಂಡವಪುರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಹಾಸನ ಟಿಕೆಟ್ ಗೊಂದಲ ವಿಚಾರದಲ್ಲಿ ಪ್ರತಿಕ್ರಿಯಿಸಿ, ಹಾಸನದ ಟಿಕೆಟ್ ಅಂತಿಮವಾಗಿಲ್ಲ. ಹಾಸನದ ಟಿಕೆಟ್ ವಿಚಾರವಾಗಿ ಇನ್ನೂ ಚರ್ಚೆ ಮಾಡಬೇಕು. ಭವಾನಿ ಅವರಿಗೆ ಟಿಕೆಟ್ ಕೇಳುವ ಹಕ್ಕು ಇದೆ ಕೇಳ್ತಾರೆ. ರೇವಣ್ಣ ಹೇಳಿದ್ದಾರೆ ದೇವೇಗೌಡರು, ಇಬ್ರಾಹಿಂ ಕೂತು ನಿರ್ಧಾರ ಮಾಡುತ್ತಾರೆ ಅಂತಾ. ಪಾರ್ಲಿಮೆಂಟ್ ಬೋರ್ಡ್ ಇದೆ. ಅದಲ್ಲಿ ಇನ್ನೂ ಚರ್ಚೆಗೆ ಬಂದಿಲ್ಲ, ಇನ್ನೂ ಚರ್ಚೆ ಮಾಡಬೇಕು. ನನಗೆ ಯಾರಿಗೆ ಟಿಕೆಟ್ ಎನ್ನಲು ಅಧಿಕಾರ ಇಲ್ಲ. ಎಲ್ಲರೂ ಕೂತು ನಿರ್ಧಾರ ಮಾಡಬೇಕು. ಇವತ್ತು ಯಾವುದೇ ಸಭೆ ಇರಲಿಲ್ಲ. ಹಾಸನದ ಟಿಕೆಟ್ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ದೇವೇಗೌಡರ ಕುಟುಂಬದಲ್ಲಿ ಗೊಂದಲ ಬರುತ್ತೆ ಎಂದು ತಿಳಿದುಕೊಂಡ್ರೆ ಅದು ತಪ್ಪು. ರೇವಣ್ಣ, ಕುಮಾರಣ್ಣ, ರಮೇಶಣ್ಣ, ಬಾಲಣ್ಣ, ಈ ನಾಲ್ಕು ಅಣ್ಣರ ಗಂಟು ಬಲವಾಗಿ ಇದೆ ಎಂದರು.

ರಾಜ್ಯದಲ್ಲಿ ಜೆಡಿಎಸ್‌ ಪರವಾದ ವಾತಾವರಣ ಇದೆ. ಹಳೇ ಮೈಸೂರು ಭಾಗದಲ್ಲಿ ಪಕ್ಷ ಬಲಿಷ್ಠವಾಗಿದೆ. ಕಲ್ಯಾಣ, ಮುಂಬೈ ಕರ್ನಾಟಕದಲ್ಲಿ ಪಕ್ಷ ಸಂಘಟನೆ ಆಗುತ್ತಿದೆ. ಎರಡು ಕಡೆ ಅತೀ ಹೆಚ್ಚು ಸ್ಥಾನ ಗೆಲ್ಲಲಿದ್ದೇವೆ. ಬಿಜೆಪಿಗೆ ಅಧಿಕಾರ ಇದೆ ಎಂದು ಜನ ಸೇರುತ್ತಿದ್ದಾರೆ. ತಂದ ಜನಕ್ಕೆ ಮಾತಡಿ ಪ್ರಯೋಜನ ಇಲ್ಲ, ಬಂದ ಜನಕ್ಕೆ ಮಾತಡಬೇಕು. ಬಿಜೆಪಿ ಜಾಯಮಾನದಲ್ಲಿ ಬಿಜೆಪಿಗೆ ಜನ ಬಂದಿಲ್ಲ, ತಂದವರು. ಬೇರೆಯವರು ಹುಟ್ಟಿಸಿದ್ದನ್ನು ತೆಗೊಂಡು ನಮ್ಮವರು ಅಂತಿದ್ದಾರೆ.

ನಾಯಕರನ್ನು ಸೃಷ್ಟಿಸುವ ಪಕ್ಷ ಜೆಡಿಎಸ್‌. ಪಂಚರತ್ನದ ರೀತಿ ಭಾರತದಲ್ಲಿ ಯಾವುದೇ ರಾಜಕೀಯ ಪಕ್ಷ ಕಾರ್ಯಕ್ರಮ ಕೊಟ್ಟಿಲ್ಲ. ಮಂಡ್ಯದಲ್ಲಿ ಬಿಜೆಪಿ ಗೆಲ್ಲುವುದು ಬರೀ ಕಲ್ಪನೆ. ರಾಜ್ಯದಲ್ಲಿ ಬಿಜೆಪಿ ಉಳಿಸಲು ಮೋದಿ ಪ್ರಯತ್ನ ಪಡ್ತಿದ್ದಾರೆ. ಅದು ಸಾಧ್ಯವಿಲ್ಲ, ಬಿಜೆಪಿ 70 ಸ್ಥಾನ ಮೇಲೆ ಗೆಲ್ಲಲ್ಲ. ವಯಸ್ಸಿನ ಕಾರಣ ನೀಡಿ ಯಡಿಯೂರಪ್ಪ ಅವರನ್ನ ಶಾಶ್ವತವಾಗಿ ಕೂರಿಸಿದ್ರು. ಲಿಂಗಾಯತರ ಮತ ಪಡೆದು ಅಧಿಕಾರ ಪಡೆದ ಬಿಜೆಪಿ. ಪಂಚಮಸಾಲಿಗಳನ್ನ ಬೀದಿಗೆ ತಂದರು, ಬೇಡ ಜಂಗಮ ಕಡೆ ತಿರುಗಿ ನೋಡ್ತಿಲ್ಲ ಎಂದರು.

ಯಡಿಯೂರಪ್ಪ ಬಲವನ್ನ ಕುಗ್ಗಿಸಿದ್ದೆ ಬಿಜೆಪಿ. ಈ ಬಾರಿ ರಾಜ್ಯದ ಲಿಂಗಾಯತಿರು ಜೆಡಿಎಸ್‌ ಪರವಾಗಿದ್ದಾರೆ. ಕಾಂಗ್ರೆಸ್ ಲಿಸ್ಟ್ ಬಂದಮೇಲೆ 2ನೇ ಪಟ್ಟಿ ಬಿಡುಗಡೆ. ಅವರು ಏನು ಮಾಡ್ತಾರೆ ನೋಡಿಕೊಂಡು ಪಟ್ಟಿ ರಿಲೀಸ್ ಮಾಡ್ತೀವಿ.
ಸಿ.ಟಿ. ರವಿ ಕಿಚನ್ ಕ್ಯಾಬಿನೆಟ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಸಿ.ಟಿ. ರವಿಯನ್ನು ಆರ್‌ಎಸ್‌ಎಸ್ ಯಾವ ಕ್ಯಾಬಿನೆಟ್‌ನಲ್ಲಿ ಇಟ್ಟಿದ್ದಾರೆ ಗೊತ್ತಾ.? ಆರ್‌ಎಸ್‌ಎಸ್ ಮೀಟಿಂಗ್‌ಗಳಲ್ಲಿ ರವಿಗೆ ಅವಕಾಶ ಇದೆಯಾ? ಸ್ಮಾರ್ಟ್ ಬ್ರಾಹ್ಮಣರಿಗೆ ಒಳಗೆ ಬಿಟ್ಟಿಲ್ಲಾ ಈ ಮುಂಡೆತ್ತದ್ದು ಗೌಡ್ರಿಗೆ ಬಿಡ್ತಾರ? ಸುಮ್ನೆ ಗೂಬೆ ಹಾಕಲು ಸಿ.ಟಿ. ರವಿಯನ್ನು ಇಟ್ಟು ಕೊಂಡಿದ್ದಾರೆ. ರೈತರ ಮಕ್ಕಳಿಗೆ ಮರ್ಯಾದೆ ಇರೋದು ಜೆಡಿಎಸ್‌ ಪಕ್ಷದಲ್ಲಿ ಮಾತ್ರ. ಸ್ವಾಭಿಮಾನ ಇಲ್ಲದವರು ನೀವು, ಕಂಡವರ ಮನೆಯಲ್ಲಿ ಕೆಲಸ ಮಾಡಲು ಹೋಗಿದ್ದೀರಿ.

ಮಠಾಧೀಶರನ್ನ ರಾಜ್ಯ ರಾಜಕೀಯಕ್ಕೆ ಕರೆತರಲು ಬಿಜೆಪಿ ಮಾತುಕತೆ ವಿಚಾರದಲ್ಲಿ ಪ್ರತಿಕ್ರಿಯಿಸಿ, ಮಠಾಧಿಪತಿಗಳು ಧರ್ಮ ರಕ್ಷಕರು. ಅವರು ಗುರಿ ತೋರಿಸಬಹುದು ಸಲಹೆ ಕೊಡಬಹುದು. ಆದರೆ ಅವರೇ ನೇರವಾಗಿ ರಾಜಕೀಯ ಮಾಡಬಾರದು. ಅವರು ರಾಜಕೀಯಕ್ಕೆ ಬರುವುದು ಮಠದ ಸಂಸ್ಕೃತಿಗೆ ಅಪಮಾನ ಮಾಡಿದಂತೆ. ಯಾವ ಮಠಾಧೀಶರೂ ರಾಜಕೀಯಕ್ಕೆ ಬರುವುದಿಲ್ಲ. ಬಿಜೆಪಿ ಅವರೇ ವೇಶ ಹಾಕಿಸಿ ಡೂಪ್ಲಿಕೇಟ್ ಸ್ವಾಮೀಜಿಯನ್ನು ಕರೆತರಬಹುದು. ಸ್ವಾಮೀಜಿಗಳು ರಾಜಕೀಯಕ್ಕೆ ಬರಬಾರದು.

ಉತ್ತರ ಪ್ರದೇಶ ಸಿಎಂಗೆ ಮದುವೆ ಆಗಿದ್ದರೆ ಬೆಲೆ ಏರಿಕೆ ಆಗ್ತಿರಲಿಲ್ಲ. ಹೆಂಡ್ತಿ‌, ಮಕ್ಕಳಿಲ್ಲದವರ ಕೈಗೆ ದೇಶ ಕೊಟ್ರೆ ಬೆಲೆ ಏರಿಕೆ ಆಗದೆ ಇನ್ನೇನು. ಲವ್ ಲವ್ ಅಂತಾವೇ, ಲವ್ ಅಂದರೆ ಏನ್ ಗೊತ್ತು ಯೋಗಿಗೆ? ಲವ್ ಮಾಡಿ ಎಲ್ರೂ ಮದುವೆ ಆಗ್ತಾರೆ, ಲವ್ ಅನುಭವ ಅವನಿಗೆ ಇಲ್ಲ. ಸಂಸಾರ ನಡೆಸುವ ಅನುಭವ ಇಲ್ಲ. ಹಾಗಾಗಿ ಇಂತಹವರ ಕೈಗೆ ದೇಶ ಕೊಟ್ರೆ ಆಡಳಿತ ನಡೆಸಲು ಆಗಲ್ಲ ಎಂದರು.

ಇದನ್ನೂ ಓದಿ: Karnataka Election : ಟಿಪ್ಪುವನ್ನು ಹೊಗಳಿದ ಮಾಜಿ ರಾಷ್ಟ್ರಪತಿ ಕೋವಿಂದ್‌ ಅವರನ್ನೂ ಹೊಡೆದು ಹಾಕ್ತೀರಾ?; ಸಿ.ಎಂ ಇಬ್ರಾಹಿಂ ಪ್ರಶ್ನೆ

ಮುಂದಿನ ಜನ್ಮದಲ್ಲಿ ಯಾಕೆ‌ ಈಗಲೇ ಮುಸ್ಲಿಂ ಸಮುದಾಯಕ್ಕೆ ಹೋಗಿ ಎಂಬ ಸಿ.ಟಿ. ರವಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ದೇವೇಗೌಡರು ಆ ಮಾತನ್ನು ಹೇಳೆ ಇಲ್ಲ. ಇದು ಬಿಜೆಪಿಯವರು ಸೃಷ್ಟಿ ಮಾಡಿದ ಹೇಳಿಕೆ. ಸಿ.ಟಿ. ರವಿ ಯಾವ ಸಮುದಾಯದಲ್ಲಿ ಹುಟ್ಟಿದ್ದಾರೆ? ಆರ್‌ಎಸ್‌ಎಸ್ ಇವ್ರನ್ನ ನೋಡಿದ್ರೆ ಶೂದ್ರರು ಎನ್ನುತ್ತಾರೆ. ರಾಜಕಾರಣಿಗಳ‌ ಕೆಲಸ ಧರ್ಮದ ಬಗ್ಗೆ ವಿಮರ್ಶೆ ಮಾಡುವುದಲ್ಲ. ಬಡವರ ಪರ, ಅಭಿವೃದ್ಧಿ ಬಗ್ಗೆ ಮಾತನಾಡಬೇಕು. ಬಿಜೆಪಿ ಅವರಿಗೆ ಈ ಬಾರಿ ಹೀನಾಯ ಸೋಲಾಗಲಿದೆ ಎಂದರು,

Exit mobile version