Site icon Vistara News

Mandya Accident : ವಿಸಿ ನಾಲೆಗೆ ಉರುಳಿದ ಕಾರು, ಇಬ್ಬರು ಸ್ಥಳದಲ್ಲೇ ದುರ್ಮರಣ

Mandya Accident

ಮಂಡ್ಯ: ಮಂಡ್ಯದಲ್ಲಿ ಮತ್ತೊಂದು ಕಾಲುವೆ ದುರಂತ (Channel Tragedy) ಸಂಭವಿಸಿದೆ. ವಾಹನಿಗರ ಪಾಲಿಗೆ ಮರಣ ಗುಂಡಿಯಂತಾಗಿರುವ ವಿ.ಸಿ ನಾಲೆಗೆ ಉರುಳಿ ಬಿದ್ದ‌ ಕಾರು ಚಾಲಕ ಸೇರಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ (Mandya accident).

ಮಂಡ್ಯ ತಾಲೂಕಿನ (Mandya News) ಅವ್ವೇರಹಳ್ಳಿ ಗ್ರಾಮದ ಬಳಿ ನೀರಿಲ್ಲದೆ ಕಾಲುವೆಗೆ ಕಾರು ನಿಯಂತ್ರಣ ತಪ್ಪಿ ಸೇತುವೆ (Car falls into Channel) ಮೇಲಿಂದ ಉರುಳಿ ಬಿದ್ದಿದೆ. ಮೃತರ ವಿಳಾಸ ಯಾವುದು ತಿಳಿದುಬಂದಿಲ್ಲ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಈ ಭಾಗದಲ್ಲಿ ನಾಲೆಗೆ ತಡೆಗೋಡೆ ಇಲ್ಲದಿರುವುದೇ ಕಾರಣ ಎಂದು ಹೇಳಲಾಗುತ್ತಿದೆ. 2023ರಲ್ಲಿ ವಿಸಿ ನಾಲೆಗೆ ವಾಹನಗಳು ಉರುಳಿ ಬಿದ್ದು ಸುಮಾರು 11 ಮಂದಿ ಪ್ರಾಣ ಕಳೆದುಕೊಂಡಿದ್ದರು.

ಇದನ್ನೂ ಓದಿ : Bengaluru Ring Road : ಬೆಂಗಳೂರಿನ 2 ರಿಂಗ್‌ ರೋಡ್‌ ಲೋಕಾರ್ಪಣೆ ಮಾಡಿದ ಮೋದಿ: ಏನೇನು ಲಾಭ?

ಕಳೆದ ವರ್ಷದ ಜುಲೈನಲ್ಲಿ ನಾಲೆ ಏರಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಕಬ್ಬಿಣದ ತಾತ್ಕಾಲಿಕ ತಡೆಗೋಡೆಗೆ ಗುದ್ದಿ ನಾಲೆಗೆ ಉರುಳಿ ಬಿದ್ದು ಐವರು ಮೃತಪಟ್ಟಿದ್ದರು. ಮೈಸೂರು ಜಿಲ್ಲೆ, ತಿ. ನರಸೀಪುರ ತಾಲೂಕು ಗೊರವನಹಳ್ಳಿ ನಿವಾಸಿ ಬಸವರಾಜು ಎಂಬವರ ಪತ್ನಿ ರೇಖಾ (35) ಮತ್ತು ಅವರ ಪುತ್ರಿ ಸಂಜನಾ (18), ಮಲ್ಲೇಶ್ ಎಂಬವರ ಪತ್ನಿ ಮಮತಾ (40) ಹಾಗೂ ಗಾಮನಹಳ್ಳಿಯ ದೋಣಯ್ಯ ಎಂಬವರ ಪತ್ನಿ ಮಹದೇವಮ್ಮ(55) ಸಾವನ್ನಪ್ಪಿದ್ದರು. ಕಾರು ತಲೆ ಕೆಳಗಾಗಿ ನೀರಿಗೆ ಬಿದ್ದಿದ್ದರಿಂದ ನಾಲ್ವರು ಮಹಿಳೆಯರು ಹೊರಗೆ ಬರಲು ಸಾಧ್ಯವಾಗಿರಲಿಲ್ಲ.

2018ರ ನವೆಂಬರ್‌ 24ರಲ್ಲಿ ತಡೆಗೋಡೆ ಇಲ್ಲದೇ ಪಾಂಡವಪುರ ತಾಲೂಕಿನ ಕನಗನಮರಡಿ ಬಳಿ ಬಸ್ ದುರಂತ ಸಂಭವಿಸಿ 34 ಮಂದಿ ಮೃತಪಟ್ಟಿದ್ದರು. ಈ ಘಟನೆಯ ಬಳಿಕ ವಿ.ನಾಲೆ ಎಲ್ಲೆಲ್ಲಿ ಹರಿಯುತ್ತದೆಯೋ ಅಲ್ಲೆಲ್ಲ ತಡೆಗೋಡೆ ನಿರ್ಮಿಸುವುದಾಗಿ ಅಂದಿನ ಸರ್ಕಾರ ಹೇಳಿತ್ತು. ಇಷ್ಟಾದರೂ ಸರ್ಕಾರ ತಡೆಗೋಡೆ ನಿರ್ಮಾಣ ಮಾಡದ ಕಾರಣ ದಿನೇ ದಿನೇ ಅಪಘಾತ ಪ್ರಕರಣಗಳು ಹೆಚ್ಚುತ್ತಿವೆ.

Exit mobile version