Site icon Vistara News

Mandya Accident: ನಿಂತಿದ್ದ ಬಸ್‌ಗೆ ಕಾರು ಡಿಕ್ಕಿ; ಯುವತಿ ಸಹಿತ ನಾಲ್ವರು ಟೆಕ್ಕಿಗಳು ಸ್ಥಳದಲ್ಲೇ ದುರ್ಮರಣ

Accident at bellur cross kills four

ಮಂಡ್ಯ: ಬೆಂಗಳೂರು – ಮಂಗಳೂರು ಹೆದ್ದಾರಿಯಲ್ಲಿ (Bangalore-Mangalore High way) ನಾಗಮಂಗಲ ಸಮೀಪ ನಡೆದಿರುವ ಭೀಕರ ಅಪಘಾತದಲ್ಲಿ (Mandya accident) ನಾಲ್ವರು ಸಾಫ್ಟ್‌ವೇರ್‌ ಎಂಜಿನಿಯರ್‌ಗಳು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ (Four dead on spot). ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಳ್ಳೂರು ಕ್ರಾಸ್‌ನಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗೆ ಕಾರು ಡಿಕ್ಕಿ ಹೊಡೆದು ದುರಂತ ಸಂಭವಿಸಿದೆ.

ಹಾಸನ ಕಡೆಯಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಕೆ.ಎಸ್‌ಆರ್ಟಿಸಿ ಬಸ್‌ಗೆ ಹಿಂದಿನಿಂದ ವೇಗವಾಗಿ ಬಂದ ಸ್ವಿಫ್ಟ್‌ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ಹೀಗಾಗಿ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತರೆಲ್ಲರೂ ಸಾಫ್ಟ್ ವೇರ್ ಕಂಪನಿ ಉದ್ಯೋಗಿಗಳಾಗಿದ್ದಾರೆ. ಅಸ್ಸೆಂಚರ್ ಕಂಪನಿಯಲ್ಲಿ ಕೆಲಸ ಮಾಡುವ ಬೆಂಗಳೂರು ನಿವಾಸಿ ಬೆಂಡಿಗನಹಳ್ಳಿ ನಮಿತಾ, ಧಾರವಾಡದ ರಘುನಾಥ್ ಭಜಂತ್ರಿ, ಇನ್ಫೋಸಿಸ್ ಉದ್ಯೋಗಿಗಳಾಗಿರುವ ರಾಜಸ್ಥಾನದ ಪಂಕಜ್ ಶರ್ಮಾ, ಹೊಸಕೋಟೆಯ ವಂಶಿ ಕೃಷ್ಣ ಮೃತರು.

ಅಪಘಾತ ಹೇಗಾಯಿತು?

ಕೆಎಸ್‌ಆರ್‌ಟಿಸಿ ಬಸ್ಸು ಹಾಸನ ಕಡೆಯಿಂದ ಬೆಂಗಳೂರು ಕಡೆಗೆ ಬರುತ್ತಿತ್ತು. ಈ ವೇಳೆ ಆದಿಚುಂಚನಗಿರಿ ಮೆಡಿಕಲ್ ಆಸ್ಪತ್ರೆ ಎದುರು ಜನರನ್ನು ಇಳಿಸಲು ಬಸ್‌ ನಿಲ್ಲಿಸಲಾಗಿತ್ತು. ಈ ವೇಳೆ ವೇಗವಾಗಿ ಧಾವಿಸಿ ಬಂದ ಕಾರು ನಿಂತಿದ್ದ ಬಸ್ಸಿಗೆ ಡಿಕ್ಕಿ ಹೊಡೆದಿದೆ. KA-02 MM 1802 ನಂಬರಿನ ಸ್ವಿಫ್ಟ್ ಕಾರು ಇದಾಗಿದ್ದು, ಕಾರಿನಲ್ಲಿದ್ದ ಓರ್ವ ಮಹಿಳೆ, ಮೂವರು ಪುರುಷರು ಸೇರಿ ನಾಲ್ವರು ಮೃತಪಟ್ಟಿದ್ದರು. ತಕ್ಷಣಕ್ಕೆ ಅವರ ಗುರುತು ಸಿಗಲಿಲ್ಲ. ಬಳಿಕ ಪೊಲೀಸರು ಅವರ ಗುರುತು ಪತ್ತೆ ಹಚ್ಚಿದರು.

ಇದನ್ನೂ ಓದಿ: Iraq Fire Accident: ಮದುವೆ ಮನೆಯಲ್ಲಿ ಅಗ್ನಿ ದುರಂತ; ಮದುಮಕ್ಕಳು ಸೇರಿ 114 ಜನರ ಸಾವು!

ಡಿವೈಡರ್‌ಗೆ ಬೈಕ್ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ವಿದ್ಯಾರ್ಥಿಗಳ ಸಾವು

ಕಲಬುರಗಿ: ರಸ್ತೆ ಡಿವೈಡರ್‌ಗೆ ಬೈಕ್ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿರುವುದು ನಗರದ ರಿಂಗ್ ರಸ್ತೆಯ ನಾಗನಹಳ್ಳಿ ಬಳಿಯ ರೈಲ್ವೆ ಬ್ರಿಡ್ಜ್ ಬಳಿ ಮಂಗಳವಾರ ನಡೆದಿದೆ. ಹುಟ್ಟುಹಬ್ಬದ ಪಾರ್ಟಿಗೆ ಹೋಗುತ್ತಿದ್ದಾಗ ಅಪಘಾತವಾಗಿದೆ (Bike Accident).

ಅಂಬಿಕಾ ನಗರದ ಅಲಿ ಅಬ್ಬಾಸ್ ಹಾಗೂ ರೆಹಮತ್ ನಗರದ ಇರ್ಫಾನ್ ಮೃತ ವಿದ್ಯಾರ್ಥಿಗಳು. ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಅಬ್ಬಾಸ್ ಅಲಿ, ಸ್ನೇಹಿತ ಇರ್ಫಾನ್ ಜತೆ ಬೈಕ್‌ನಲ್ಲಿ ಪಾರ್ಟಿಗೆ ಹೊರಟಿದ್ದ. ವೇಗವಾಗಿ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಬೈಕ್‌ ಡಿವೈಡರ್‌ಗೆ ಡಿಕ್ಕಿಯಾಗಿದೆ. ಈ ವೇಳೆ ತಲೆಗೆ ಗಂಭೀರ ಗಾಯಗಳಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಬ್ಬರು 10ನೇ ತರಗತಿ ಓದುತ್ತಿದ್ದರು. ಸ್ಥಳಕ್ಕೆ ಸಂಚಾರ-2 ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Exit mobile version