ಬೆಂಗಳೂರು: ಮಂಡ್ಯ ಸೇರಿದಂತೆ ಹಳೆ ಮೈಸೂರು ಭಾಗದಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಬಿಜೆಪಿ ಪ್ರಯತ್ನಿಸುತ್ತಿರುವ ಬೆನ್ನಲ್ಲೆ, ಮಂಡ್ಯ ಜಿಲ್ಲೆಯ (Mandya Politics) ಕುರಿತು ಜೆಡಿಎಸ್ ಗಂಭಿರವಾಗಿದೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಮಂಡ್ಯ ಜಿಲ್ಲೆಯ ಶಾಸಕರು ಹಾಗೂ ಮುಖಂಡರನ್ನು ಕರೆದು ಸಭೆ ನಡೆಸಿದ್ದಾರೆ.
ಬೆಂಗಳೂರಿನ ಮನೆಯಲ್ಲಿ ಸಿ.ಎಸ್. ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಶ್ರೀನಿವಾಸ್, ಸುರೇಶ್ ಗೌಡ, ರವೀಂದ್ರ ಶ್ರೀಕಂಠಯ್ಯ, ಅಪ್ಪಾಜಿ ಗೌಡ,ಅನ್ನದಾನಿ, ಮಂಡ್ಯ ಜಿಲ್ಲಾಧ್ಯಕ್ಷ ಡಿ. ರಮೇಶ್ ಜತೆ ದೇವೇಗೌಡರು ಸಭೆ ನಡೆಸಿದ್ದಾರೆ.
ಮಂಡ್ಯ ಜಿಲ್ಲಾ ಜವಾಬ್ದಾರಿ ನನ್ನದೇ ಎಂದು ಮುಖಂಡರಿಗೆ ಭರವಸೆ ನೀಡಿರುವ ದೇವೆಗೌಡರು, 7 ಕ್ಕೆ 7 ಕ್ಷೇತ್ರ ಗೆಲ್ಲುವ ಗುರಿ ನೀಡಿದ್ದಾರೆ. ಗೆಲ್ಲಲು ಬೇಕಾದ ಎಲ್ಲ ತಂತ್ರಗಳನ್ನು ಅನುಸರಿಸಿ. ಪ್ರತಿ 10 ದಿನಗಳಗಳಿಗೊಮ್ಮೆ ಮಂಡ್ಯದ ಸಂಪೂರ್ಣ ಮಾಹಿತಿ ನೀಡಬೇಕು. ಚುನಾವಣಾ ಸಿದ್ಧತೆ, ಪಕ್ಷ ಸಂಘಟನೆ, ವಿಪಕ್ಷಗಳ ತಂತ್ರಕ್ಕೆ ಪ್ರತಿತಂತ್ರ ಹೆಣೆಯಬೇಕು.
ಎಲ್ಲರ ನಡುವೆ ಇರುವ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಮರೆಯಬೇಕು. ಮುಖ್ಯವಾಗಿ ಮಂಡ್ಯ ವಿಧಾನಸಭೆ ಕ್ಷೇತ್ರದ ಕುರಿತು ಹೆಚ್ಚು ಗಮನ ನೀಡುವಂತೆ ತಿಳಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Modi in Karnataka: ರೋಡ್ ಶೋದಲ್ಲಿ ಹೂಮಳೆ ಸುರಿಸಿದ ಮಂಡ್ಯ ಜನತೆಗೆ ಧನ್ಯವಾದ ಅರ್ಪಿಸಿದ ಮೋದಿ