Site icon Vistara News

Modi in Karnataka: ಮಂಡ್ಯಕ್ಕೆ ಭೇಟಿ ನೀಡಿದ 4 ನೇ ಪ್ರಧಾನಿ ಮೋದಿ: ಈ ಹಿಂದೆ ಮಂಡ್ಯಕ್ಕೆ ಮೋದಿ ಬಂದಿದ್ದು ಯಾವಾಗ?

#image_title

ಮಂಡ್ಯ: ಮಂಡ್ಯ ಜಿಲ್ಲೆಗೆ ಭೇಟಿ ನೀಡಿದ ನಾಲ್ಕನೇ ಪ್ರಧಾನಿ ನರೇಂದ್ರ ಮೋದಿ (Modi in Karnataka). ಈ ಹಿಂದೆ ಅನೇಕ ಸಂದರ್ಭಗಳಲ್ಲಿ ಮೂವರು ಪ್ರಧಾನಮಂತ್ರಿಗಳು ಮಂಡ್ಯಕ್ಕೆ ಭೇಟಿ ನೀಡಿದ್ದಾರೆ. ಇದೀಗ ಬೆಂಗಳೂರು-ಮೈಸೂರು ದಶಪಥ ರಾಷ್ಟ್ರೀಯ ಹೆದ್ದಾರಿ ಉದ್ಘಾಟನೆ ಹಾಗೂ ವಿವಿಧ ಸರ್ಕಾರಿ ಯೋಜನೆಗಳ ಚಾಲನೆಗೆ ಪ್ರಧಾನಿ ಮೋದಿ ಆಗಮಿಸಿ, ನಾಲ್ಕನೇ ಪ್ರಧಾನಿಯಾಗಿದ್ದಾರೆ.

ಮಂಡ್ಯಕ್ಕೆ 1962 ರಲ್ಲಿ ಜವಾಹರಲಾಲ್ ನೆಹರೂ ಆಗಮಿಸಿದ್ದರು. ಮಂಡ್ಯ ಜಿಲ್ಲಾ ಕ್ರೀಡಾಂಗಣಕ್ಕೆ ಆಗಮಿಸಿದ್ದರ. ಕಾಂಗ್ರೆಸ್ ನಿಂದ ಲೋಕಸಭೆಗೆ ಸ್ಪರ್ಧಿಸಿದ್ದ ಅಭ್ಯರ್ಥಿ ಎಂ. ಕೆ. ಶಿವನಂಜಪ್ಪ ಪರ ಪ್ರಚಾರಕ್ಕೆ ಬಂದಿದ್ದರು.

ಇಂದಿರಾಗಾಂಧಿಯವರು 1977ರಲ್ಲಿ ಪ್ರಧಾನಿಯಾಗಿ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದರು. ಚಿಕ್ಕಲಿಂಗಯ್ಯ ಪರ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಇಂದಿರಾಗಾಂಧಿ ಆಗಮಿಸಿದ್ದರು. ಜಿಲ್ಲಾ ಕ್ರೀಡಾಂಗಣದಲ್ಲಿ ಸಮಾವೇಶ ನಡೆದಿತ್ತು.

1979ರಲ್ಲಿ ಆಗಿನ ಪ್ರಧಾನಿ ಚರಣ್ ಸಿಂಗ್ ಅವರು ಮಂಡ್ಯಕ್ಕೆ ಭೇಟಿ ಕೊಟ್ಟಿದ್ದರು. ದೇವರಾಜು ಅರಸು ಅವರಿಗೆ ನಾಗರಿಕ ಸನ್ಮಾನ ಕಾರ್ಯಕ್ರಮಕ್ಕೆ ಚರಣ್ ಸಿಂಗ್ ಆಗಮಿಸಿದ್ದರು.

41 ವರ್ಷದ ನಂತರ ಆಗಮನ

ಪ್ರಧಾನಿಯೊಬ್ಬರು ಮಂಡ್ಯ ಜಿಲ್ಲೆಗೆ ಆಗಮಿಸಿ ಬರೊಬ್ಬರಿ 41 ವರ್ಷಗಳಾಗಿದ್ದವು. ಮೋದಿ ಪ್ರಧಾನಿಯಾಗಿ 9 ವರ್ಷವಾದರೂ ಮಂಡ್ಯಕ್ಕೆ ಆಗಮಿಸಿದ್ದರು. ಹಿಂದಿನಿಂದಲೂ ಹಳೆ ಮೈಸೂರು, ಅದರಲ್ಲೂ ಮಂಡ್ಯ ಜಿಲ್ಲೆಯ ಕುರಿತು ಬಿಜೆಪಿ ಆಸಕ್ತಿ ತೋರುತ್ತಿರಲಿಲ್ಲ. ಬಿಜೆಪಿ ಸ್ಥಾಪನೆಯಾದಂದಿನಿಂದಲೂ ಸಾರ್ವತ್ರಿಕ ಚುನಾವಣೆಯಲ್ಲಿ ಒಮ್ಮೆಯೂ ಬಿಜೆಪಿ ಅಭ್ಯರ್ಥಿ ಗೆದ್ದಿಲ್ಲ. ಇದೀಗ 2021ರಲ್ಲಿ ಉಪಚುನಾವಣೆಯಲ್ಲಿ ಜೆಡಿಎಸ್‌ನಿಂದ ಬಂದ ನಾರಾಯಣಗೌಡ ಮೊದಲ ಬಾರಿಗೆ ಜಿಲ್ಲೆಯಲ್ಲಿ ಪಕ್ಷದ ಧ್ವಜ ಹಾರಿಸಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ ಕುರಿತು ಬಿಜೆಪಿ ಗಮನಹರಿಸುತ್ತಿರುವುದು ಇದೀಗ ಮೋದಿ ರೋಡ್‌ ಶೋನಿಂದ ತಿಳಿದುಬಂದಿದೆ.

ಗುಜರಾತ್‌ ಸಿಎಂ ಆಗಿದ್ದಾಗ ಆಗಮನ

2004ರಲ್ಲಿ ನರೇಂದ್ರ ಮೋದಿ ಮಂಡ್ಯಕ್ಕೆ ಆಗಮಿಸಿದ್ದರು. ಆಗಿನ್ನೂ ಗುಜರಾತ್‌ ಮುಖ್ಯಮಂತ್ರಿಯಾಗಿ ಎರಡೇ ವರ್ಷವಾಗಿದ್ದ ನರೇಂದ್ರ ಮೋದಿ, ಕಚ್‌ ಭೂಕಂಪದ ನಂತರದ ನಿರ್ವಹಣೆಯಿಂದ ಪ್ರಸಿದ್ಧಿ ಪಡೆದಿದ್ದರು. ಗೋಧ್ರ ಹಾಗೂ ಗೋಧ್ರೋತ್ತರ ಘಟನೆಗಳಿಂದಾಗಿಯೂ ದೇಶಾದ್ಯಂತ ಅವರ ಹೆಸರು ಚಾಲ್ತಿಯಲ್ಲಿತ್ತು. ಈ ಸಮಯದಲ್ಲಿ ಅನಂತಕುಮಾರ್‌ ಅವರೊಂದಿಗೆ ಮಂಡ್ಯದಲ್ಲಿ ಚುನಾವಣಾ ಕಾರ್ಯಕ್ರಮದಲ್ಲಿ ಮೋದಿ ಭಾಗವಹಿಸಿದ್ದರು.

ಇದನ್ನೂ ಓದಿ: Modi in Karnataka: ಮಂಡ್ಯದ ಮಂದಿಯ ಮನಗೆದ್ದ ನರೇಂದ್ರ ಮೋದಿ ರೋಡ್‌ ಶೋ: ರಸ್ತೆಯುದ್ದಕ್ಕೂ ಹೂಮಳೆ ಸುರಿಸಿದ ಜನರು

Exit mobile version