Site icon Vistara News

Modi in Karnataka: ಮಂಡ್ಯದ ಮಂದಿಯ ಮನಗೆದ್ದ ನರೇಂದ್ರ ಮೋದಿ ರೋಡ್‌ ಶೋ: ರಸ್ತೆಯುದ್ದಕ್ಕೂ ಹೂಮಳೆ ಸುರಿಸಿದ ಜನರು

#image_title

ಮಂಡ್ಯ: ಬಹುನಿರೀಕ್ಷಿತ ಬೆಂಗಳೂರು-ಮೈಸೂರು ದಶಪಥ ರಾಷ್ಟ್ರೀಯ ಹೆದ್ದಾರಿ ಲೋಕಾರ್ಪಣೆ ಸೇರಿ ಅನೇಕ ಯೋಜನೆಗಳ ಚಾಲನೆ ಹಾಗೂ ಶಂಕುಸ್ಥಾಪನೆಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಮಂಡ್ಯದಲ್ಲಿ ಭರ್ಜರಿ ರೋಡ್‌ ಶೋ (Modi in Karnataka) ನಡೆಸಿದರು.

11.30ರ ಸುಮಾರಿಗೆ ಮಂಡ್ಯದ ಪ್ರವಾಸಿ ಮಂದಿರ ವೃತ್ತಕ್ಕೆ ಆಗಮಿಸಿದ ಮೋದಿಯವರನ್ನು ಸ್ವಾಗತಿಸಲು ರಸ್ತೆಯುದ್ದಕ್ಕೂ ಜನರು ಸಾಲುಗಟ್ಟಿ ನಿಂತಿದ್ದರು.

ಬಿಜೆಪಿಯ ಸಂಘಟನೆ ಹೆಚ್ಚು ಪ್ರಬಲವಾಗಿಲ್ಲದ ಪ್ರದೇಶದಲ್ಲೂ ಮಕ್ಕಳು, ಮಹಿಳೆಯರೆನ್ನದೆ ಮಂಡ್ಯದ ನಾಗರಿಕರು ಕಿಕ್ಕಿರಿದು ನೆರೆದರು. ಎಂದಿನಂತೆ ತಮ್ಮ ಕಾರಿನ ದ್ವಾರದಲ್ಲಿ ನಿಂತ ಪ್ರಧಾನಿ, ನಗುಮೊಗದಿಂದ ಕೈಬೀಸುತ್ತ ಸಾಗಿದರು.

ರಸ್ತೆಯ ಇಕ್ಕೆಲಗಳಲ್ಲಿ ನಿಂತು ಪ್ರಧಾನಿ ಕಾರಿನ ಮೇಲೆ ಹೂಮಳೆ ಸುರಿಸಿದರು. ಪ್ರಧಾನಿಯೂ ಇದನ್ನು ಸ್ವಾಗತಿಸುತ್ತ ಅನೇಕ ಬಾರಿ ಹೂಗಳನ್ನು ಮತ್ತೆ ಜನಗಳ ಮೇಲೆಯೇ ಹಾಕಿ ಸಂಭ್ರಮಿಸಿದರು.

ಮುಗಿಲು ಮುಟ್ಟಿದ ಮೋದಿ.. ಮೋದಿ.. ಘೋಷಣೆ | Grand Welcome | PM Modi Road Show | Mandya | Vistara News

ದಾರಿಯುದ್ದಕ್ಕೂ ಜನರು ಪ್ರಧಾನಿ ನರೇಂದ್ರ ಮೋದಿಯವರಿಗೆ ಜೈಕಾರ ಹಾಕಿದರು. ನೆಚ್ಚಿನ ನಾಯಕನನ್ನು ನೋಡಿ ಕಣ್ತುಂಬಿಕೊಂಡರು. ರೋಡ್‌ ಶೋ ಆರಂಭಕ್ಕೂ ಮುನ್ನ ಕರ್ನಾಟಕದ ಕಲಾ ತಂಡಗಳಾದ ವೀರಗಾಸೆ, ಸೋಮನ ಕುಣಿತ, ಡೊಳ್ಳು ಕುಣಿತ, ಪೂಜಾ ಕುಣಿತ, ನಂದಿ ಧ್ವಜ ಕುಣಿತ ಕಲಾ ತಂಡಗಳ ಬಳಿ ತೆರಳಿ ಕಲಾವಿದರಿಗೆ ಕೈಬೀಸಿದರು.

ಇದನ್ನೂ ಓದಿ: Modi in Karnataka: ಹೆದ್ದಾರಿಗಾಗಿ ಭೂಮಿ ಕೊಟ್ಟ ರೈತರಿಗೆ ಇನ್ನೂ ಇಲ್ಲ ಪರಿಹಾರ: ಕನ್ನಡಪರ ಸಂಘಟನೆಗಳ ಪ್ರತಿಭಟನೆ

Exit mobile version