Site icon Vistara News

Modi in Karnataka: ದಶಪಥ ಹೆದ್ದಾರಿ ಲೋಕಾರ್ಪಣೆ ಹಿನ್ನೆಲೆಯಲ್ಲಿ ರಸ್ತೆ ಸಂಚಾರದಲ್ಲಿ ಆಗಿರುವ ಬದಲಾವಣೆಗಳೇನು?

road

ಮಂಡ್ಯ: ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯ ಲೋಕಾರ್ಪಣೆ ಸಲುವಾಗಿ ಪ್ರಧಾನ ಮಂತ್ರಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮಾರ್ಚ್ 12 ರ ಬೆಳಿಗ್ಗೆ 7 ಗಂಟೆಯಿಂದ ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಯಾವುದೇ ವಾಹನ ಸಂಚಾರಕ್ಕೆ ಅವಕಾಶವಿರುವುದಿಲ್ಲ. (Modi in Karnataka) ಅಗತ್ಯಸೇವೆ ಮತ್ತು ಹಾಲಿನ ವಾಹನಗಳಿಗೆ ಮಾತ್ರ ಬೆಳಿಗ್ಗೆ 9 ಗಂಟೆಯವರೆಗೆ ಸರ್ವೀಸ್ ರಸ್ತೆಯಲ್ಲಿ ತೆರಳಲು ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

ಹಳೆ ಬೆಂಗಳೂರು – ಮೈಸೂರು ಹೆದ್ದಾರಿಯನ್ನು ಪೊಲೀಸರು ಐಬಿ ಸರ್ಕಲ್ ಬಳಿ ಬ್ಯಾರಿಕೇಡ್ ಹಾಕಿ ಬಂದ್‌ ಮಾಡಿದ್ದಾರೆ. ಐಬಿ ಸರ್ಕಲ್ ಮೂಲಕ ಮಂಡ್ಯ ನಗರಕ್ಕೆ ಮೋದಿಯವರು ಪ್ರವೇಶಿಸಲಿದ್ದಾರೆ. ಸ್ಥಳದಲ್ಲಿ ಎಸ್ಪಿಪಿಜಿ ಅಧಿಕಾರಿ ಪರಿಶೀಲನೆ ನಡೆಸಿದ್ದಾರೆ. ರಸ್ತೆಯ ಎರಡು ಕಡೆ ಮರ , ಕಾಂಪೌಂಡ್ , ಮನೆಗಳ ಸಾರ್ವಜನಿಕರು ನಿಲ್ಲಲು ಅವಕಾಶ ಇರುವುದಿಲ್ಲ.

ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆ ಕಾಲೋನಿಯ ಬಳಿ ನಡೆಯುವ ಮಾನ್ಯ ಪ್ರದಾನ ಮಂತ್ರಿಗಳ ಕಾರ್ಯಕ್ರಮದಲ್ಲಿ ಭಾಗವಹಿಸಲು ಬರುವ ವಾಹನಗಳಿಗೆ ಈ ಕೆಳಕಂಡಂತೆ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಮಳವಳ್ಳಿ ಕಡೆಯಿಂದ ಬರುವ ವಾಹನಗಳು ಕೆ.ಎಂ.ದೊಡ್ಡಿ-ಹುಣ್ಣನದೊಡ್ಡಿ, ಬೋರಾಪರ ಗೇಟ್ ಮಾರ್ಗವಾಗಿ ಮದ್ದೂರಿಗೆ 04 ಕಿಲೋ ಮೀಟರ್ ಹಿಂದಕ್ಕೆ ಎಡಗಡೆ ಕುದುರುಗುಂಡಿ ಕಾಲೋನಿಗೆ ಹೋಗುವ ಮಾರ್ಗದಲ್ಲಿ ಹೋಗಿ ಪಾರ್ಕಿಂಗ್ ಸ್ಥಳಕ್ಕೆ ತೆರಳುವುದು.

ಮದ್ದೂರು ಮತ್ತು ಸುತ್ತಮುತ್ತಲ ಕಡೆಯಿಂದ ತೆರಳುವ ವಾಹನಗಳು, ಮದ್ದೂರು- ಐ.ಬಿ.ವೃತ್ತ- ಮಳವಳ್ಳಿ
ರಸ್ತೆಯಿಂದ ಸುಮಾರು 04 ಕಿ.ಮೀ ಮುಂದಕ್ಕೆ ಹೋಗಿ ಬಲಗಡೆಗೆ ಕುದುರುಗುಂಡಿ ಕಾಲೋನಿಗೆ ಹೋಗುವ ಮಾರ್ಗದಲ್ಲಿ ಹೋಗಿ ಪಾರ್ಕಿಂಗ್ ಸ್ಥಳಕ್ಕೆ ತೆರಳುವುದು.

ಗೆಜ್ಜಲಗೆರೆ ಸುತ್ತಮುತ್ತಲ ಗ್ರಾಮಗಳಿಂದ ತೆರಳುವವರು ಗೆಜ್ಜಲಗೆರೆ ಅಂಡರ್‍ಪಾಸ್‍ನಿಂದ ಕುದುರುಗುಂಡಿ ಗ್ರಾಮ, ಸಾದೋಳಲು ಕುದುರುಗುಂಡಿ ಕಾಲೋನಿ ಮಾರ್ಗವಾಗಿ ಪಾರ್ಕಿಂಗ್ ಜಾಗಕ್ಕೆ ತೆರಳುವುದು

ಮಂಡ್ಯ ಕಡೆಯಿಂದ ಬರುವ ವಾಹನಗಳು ಹನಕೆರೆ ಸರ್ವೀಸ್ ರೋಡ್‍ನಿಂದ ಗೆಜ್ಜಲಗೆರೆ ಗ್ರಾಮದ ಬಳಿಬಂದು ಗೆಜ್ಜಲಗೆರೆ ಅಂಡರ್‍ಪಾಸ್‍ನಿಂದ ಕುದುರುಗುಂಡಿ ಗ್ರಾಮ, ಸಾದೋಳಲು ಕುದುರುಗುಂಡಿ ಕಾಲೋನಿ ಮಾರ್ಗವಾಗಿ ಪಾರ್ಕಿಂಗ್ ಜಾಗಕ್ಕೆ ತೆರಳುವುದು. ಸಾರ್ವಜನಿಕರು ಸಹಕರಿಸಬೇಕೆಂದು ಮಂಡ್ಯ ಜಿಲ್ಲೆಯ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version