ಮಂಡ್ಯ: ಇಲ್ಲಿನ ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಗ್ರಾಮದ ವೈನ್ ಸ್ಟೋರ್ ಬಳಿ ಕತ್ತು ಕೊಯ್ದು ಯುವಕನೊಬ್ಬನನ್ನು ಬರ್ಬರವಾಗಿ (Murder Case) ಹತ್ಯೆಗೈಯಲಾಗಿದೆ. ಬೆಳಗೊಳದ ಸೀಬಯ್ಯನ ಮಂಟಿ ನಿವಾಸಿ ರವಿ (22) ಕೊಲೆಯಾದ ಯುವಕ ಎಂದು ತಿಳಿದು ಬಂದಿದೆ.
ಬೆಳಗೊಳದ ವೈನ್ಸ್ ಸ್ಟೋರ್ನಲ್ಲಿ ರವಿ ಕೆಲಸ ಮಾಡುತ್ತಿದ್ದು, ಬುಧವಾರ ರಾತ್ರಿ ವೈನ್ ಸ್ಟೋರ್ ಮುಂದೆಯೇ ಶರತ್ ಎಂಬಾತ ಮಚ್ಚಿನಿಂದ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ಈ ಎಲ್ಲ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರಯಾಗಿದೆ. ಶರತ್ ಮಾತನಾಡುವ ನೆಪದಲ್ಲಿ ರವಿ ಹಿಂಬದಿ ನಿಂತು ಮಚ್ಚಿನಿಂದ ಇರಿದು ಕೊಲೆ ಮಾಡಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ರವಿಯನ್ನು ಸ್ಥಳೀಯರು ತಕ್ಷಣವೇ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ರವಿ ಮೃತಪಟ್ಟಿದ್ದಾರೆ.
ಕೊಲೆಯಾದ ರವಿಯು ಶರತ್ ಅತ್ತೆ ಜತೆ ಅಕ್ರಮ ಸಂಬಂಧ ಹೊಂದಿದ್ದ ಎಂಬ ಶಂಕೆ ವ್ಯಕ್ತವಾಗಿದ್ದು, ಹತ್ಯೆಗೆ ಇದುವೇ ಕಾರಣ ಎನ್ನಲಾಗುತ್ತಿದೆ. ಹತ್ಯೆ ಬಳಿಕ ಆರೋಪಿ ನಾಪತ್ತೆಯಾಗಿದ್ದು, ಶೋಧ ನಡೆಸಲಾಗುತ್ತಿದೆ. ಪ್ರಕರಣ ಸಂಬಂಧ ಕೆಆರ್ಎಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ | ಮಂಡ್ಯ ಪೊಲೀಸರನ್ನು ಪೂರ್ತಿ ಹೈರಾಣಾಗಿಸಿದ ಅರ್ಧ ದೇಹ: ಊರೂರು ಅಲೆಯುತ್ತಿರುವ ಖಾಕಿ ಪಡೆ