Site icon Vistara News

Murder case : ಆಸ್ತಿಗಾಗಿ ಪತ್ನಿಯನ್ನೇ ಕೊಂದ ಗಂಡ; ಮುಖಕ್ಕೆ ದಿಂಬು ಇಟ್ಟು ಉಸಿರುಗಟ್ಟಿಸಿದ!

Mandya Murder Case

ಮಂಡ್ಯ: ಪತ್ನಿ ಮಲಗಿದ್ದ ವೇಳೆ ಮುಖಕ್ಕೆ ದಿಂಬು ಇಟ್ಟು, ಬೆಡ್‌ ಶೀಟ್‌ನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ ಘಟನೆ (Murder Case) ಮಂಡ್ಯದ (Mandya News) ವಿ.ವಿ. ನಗರ ಬಡಾವಣೆಯಲ್ಲಿ ಘಟನೆ (Man kills wife) ನಡೆದಿದೆ. ಎಸ್.ಶೃತಿ(32) ಕೊಲೆಯಾದ ಗೃಹಿಣಿ. ಟಿ.ಎನ್.ಸೋಮಶೇಖರ್(41) ಎಂಬಾತನೇ ಕೊಲೆ ಮಾಡಿದ ಪತಿರಾಯ.

ದಿಂಬು ಮತ್ತು ಬೆಡ್‌ ಶೀಟ್‌ನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ ಗಂಡ ಇದೊಂದು ಸಹಜ ಸಾವೆಂದು ಬಿಂಬಿಸಲು ಸಾಕಷ್ಟು ಪ್ರಯತ್ನಪಟ್ಟಿದ್ದ. ಆದರೆ ಆತನ ಹಿನ್ನೆಲೆ, ಆತ ನೀಡುತ್ತಿದ್ದ ಕಿರುಕುಳಗಳ ಹಿನ್ನೆಲೆಯಲ್ಲಿ ಆತನ ವಿಚಾರಣೆ ನಡೆಸಿದಾಗ ಸತ್ಯ ಹೊರಬಿದ್ದಿದೆ.

ಶ್ರುತಿಯ ಹೆಸರಿನಲ್ಲಿ ಕೋಟ್ಯಂತರ ರೂ. ಮೌಲ್ಯದ ಆಸ್ತಿ ಇದೆ ಎನ್ನಲಾಗಿದೆ. ಅದರಲ್ಲಿ ಒಂದು ಭಾಗವನ್ನು ಮಾರಾಟ ಮಾಡಲು ಶ್ರುತಿ ಮುಂದಾಗಿದ್ದರು. ಆದರೆ, ಪತಿ ಸೋಮಶೇಖರ್‌ ಇದನ್ನು ವಿರೋಧಿಸಿದ್ದ. ಹಾಗಂತ ಅವನು ಒಳ್ಳೆಯ ಕಾರಣಕ್ಕಾಗಿ ಹೀಗೆ ಮಾಡಿದ್ದಲ್ಲ. ಅವನಿಗೆ ಇದ್ದದ್ದು ಎಲ್ಲ ಆಸ್ತಿಯನ್ನು ತನ್ನದಾಗಿಸಿಕೊಳ್ಳುವ ಉದ್ದೇಶ ಎನ್ನಲಾಗಿದೆ. ಇದೀಗ ಪತ್ನಿಯನ್ನು ಕೊಂದಾದರೂ ಸರಿ ಭೂಮಿ ಮತ್ತು ಆಸ್ತಿಯನ್ನು ಕಬಳಿಸಲು ಮುಂದಾಗಿದ್ದಾನೆ.

ಸೋಮಶೇಖರ್‌ ಆಸ್ತಿ ವಿಚಾರದಲ್ಲಿ ಜಗಳ ಮಾಡುವುದು ಹೊಸತೇನಲ್ಲ. ಹಲವು ಬಾರಿ ರಾಜೀ ಪಂಚಾಯಿತಿ ನಡೆಸಿದ್ದರು ಕಿರುಕುಳ ಮುಂದುವರಿಸಿದ್ದ. ಹೀಗಾಗಿ ಆತನ ಮೇಲೆ ಎಲ್ಲರಿಗೂ ಸಂಶಯವಿತ್ತು. ಶ್ರುತಿ ಸಾವನ್ನಪ್ಪಿದ ಬಳಿಕ ಸಂಬಂಧಿಯೊಬ್ಬರು ಪತಿಯ ಮೇಲೆ ದೂರು ನೀಡಿದ್ದರು. ಯಾವ ಕಾರಣಕ್ಕೂ ಸತ್ಯವನ್ನು ಒಪ್ಪಿಕೊಳ್ಳಲು ನಿರಾಕರಿಸಿದ ಆರೋಪಿ ಕೊನೆಗೆ ಪೊಲೀಸ್‌ ಟ್ರೀಟ್‌ಮೆಂಟ್‌ಗೆ ಹೆದರಿ ಉಸಿರುಗಟ್ಟಿಸಿ ಕೊಂದಿರುವುದಾಗಿ ಒಪ್ಪಿದ್ದಾನೆ. ಮಂಡ್ಯದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : Murder Case: ಕಲಾಸಿಪಾಳ್ಯದಲ್ಲಿ ಕೊಲೆ; ಪತ್ನಿಗೆ ಬೇರೆ ಮದುವೆ ಮಾಡಿಸಿದವನನ್ನು ಕೊಂದು ಸುಟ್ಟು ಹಾಕಿದ

6 ವರ್ಷದ ಹಿಂದೆ ತಾಯಿಯ ಕೊಂದವನನ್ನು ಕಲ್ಲಿನಿಂದ ಜಜ್ಜಿ ಮುಗಿಸಿದ ಮಗ

ಆನೇಕಲ್: 3 ವರ್ಷದ ಹಿಂದೆ ತನ್ನ ತಾಯಿಯನ್ನು ಕೊಂದ ಆರೋಪಿಯನ್ನು ಮಗ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ (murder case) ಮಾಡಿದ್ದಾನೆ. ಅತ್ತಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಯ ಸಮಂದೂರಿನಲ್ಲಿ ಘಟನೆ ನಡೆದಿದೆ.

ಬೆಂಗಳೂರು ಹೊರವಲಯ (Bangalore rural news) ಆನೇಕಲ್ ತಾಲ್ಲೂಕಿನ ಸಮಂದೂರಿನಲ್ಲಿ ನಡೆದ ಈ ಘಟನೆಯಲ್ಲಿ ನಾರಾಯಣಪ್ಪ (52) ಮೃತಪಟ್ಟ ವ್ಯಕ್ತಿ. ಮಧು (37) ಮಾರಣಾಂತಿಕವಾಗಿ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ನಾರಾಯಣಪ್ಪ ತಲೆ ಮೇಲೆ ಮಧು ಕಲ್ಲನ್ನು ಎತ್ತಿ ಹಾಕಿದ್ದು, ಇದರಿಂದ ತೀವ್ರವಾಗಿ ಗಾಯಗೊಂಡ ನಾರಾಯಣಪ್ಪ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಆರು ವರ್ಷದ ಹಿಂದೆ ಮಧುವಿನ ತಾಯಿಯನ್ನು ನಾರಾಯಣಪ್ಪ ಕೊಂದಿದ್ದ. ನಂತರ ಜೈಲುಪಾಲಾಗಿ, ಮೂರು ವರ್ಷದ ಹಿಂದೆ ಜೈಲಿನಿಂದ ರಿಲೀಸ್ ಆಗಿ ಹೊರಬಂದಿದ್ದ. ನಿನ್ನೆ ಸಂಜೆ ಕುಡಿದು ಚಿತ್ತಾಗಿ ಮಧುವಿನ ಮನೆ ಬಳಿ ತೆರಳಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಾಜ್ ಹಾಕಿದ್ದ. ಈ ವೇಳೆ ಮಧು ಮತ್ತು ನಾರಾಯಣಪ್ಪ ನಡುವೆ ಗಲಾಟೆ ನಡೆದಿದ್ದು, ಗಲಾಟೆ ವಿಕೋಪಕ್ಕೆ ತಿರುಗಿ ನಾರಾಯಣಪ್ಪ ತಲೆ ಮೇಲೆ ಮಧು ಕಲ್ಲನ್ನು ಎತ್ತಿ ಹಾಕಿದ್ದಾನೆ.

ಗಂಭೀರವಾಗಿ ಗಾಯಗೊಂಡ ನಾರಾಯಣಪ್ಪನನ್ನು ಆನೇಕಲ್ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲ ನೀಡದೆ ಮೃತಪಟ್ಟಿದ್ದಾನೆ. ಘಟನಾ ಸ್ಥಳಕ್ಕೆ ಅತ್ತಿಬೆಲೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆನೇಕಲ್ ಸರ್ಕಾರಿ ಶವಗಾರಕ್ಕೆ ಮೃತದೇಹ ರವಾನಿಸಲಾಗಿದೆ. ಆರೋಪಿ ಮಧು ಪತ್ತೆಗೆ ಬಲೆ ಬೀಸಲಾಗಿದೆ.

Exit mobile version