ಮಂಡ್ಯ: ಚುನಾವಣೆ ಹತ್ತಿರವಾಗುತ್ತಿದ್ದಂತೆ ಸಕ್ಕರೆನಾಡು ಮಂಡ್ಯದಲ್ಲಿ ಅಲ್ಲಲ್ಲಿ ರಾಜಕೀಯ ಅಭ್ಯರ್ಥಿಗಳು ತಡರಾತ್ರಿ ರಸಮಂಜರಿ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದ್ದಾರೆ. ಇದರಲ್ಲಿ ಹುಡುಗಿಯರನ್ನು ಕರೆಸಿ ಅರೆನಗ್ನ ಸ್ಥಿತಿಯಲ್ಲಿ ಡ್ಯಾನ್ಸ್ ಮಾಡಿಸುತ್ತಿರುವುದು ಹೆಚ್ಚಾಗುತ್ತಿದೆ.
ನಾಗಮಂಗಲ ಕ್ಷೇತ್ರದಲ್ಲಿ ಮತ್ತೆ ʼನಂಗಾನಾಚ್ʼ ಸದ್ದು ಮಾಡಿದೆ. ನಾಗಮಂಗಲ ತಾಲೂಕಿನ ಟಿ.ಚೆನ್ನಾಪುರ ಗ್ರಾಮದಲ್ಲಿ ತಡರಾತ್ರಿ ರಸಮಂಜರಿ ಹೆಸರಿನಲ್ಲಿ ಈ ನಾಚ್ ಏರ್ಪಡಿಸಲಾಗಿತ್ತು. ನಾಗಮಂಗಲ ಕ್ಷೇತ್ರದ ಶಾಸಕ ಸುರೇಶ್ ಗೌಡರ ಅಧ್ಯಕ್ಷತೆಯಲ್ಲಿ, ಅವರ ಬೆಂಬಲಿಗರಿಂದ ಈ ನೃತ್ಯ ಆಯೋಜನೆಯಾಗಿದೆ. ಈ ಡ್ಯಾನ್ಸ್‌ನಲ್ಲಿ ಗ್ರಾಮದ ಬಾಲಕನೊಬ್ಬನನ್ನು ಅರೆಬೆತ್ತಲೆ ಸುಂದರಿಯೊಬ್ಬಳು ವೇದಿಕೆ ಮೇಲೆ ಬಲವಂತವಾಗಿ ಎಳೆದು ತಂದು ಮುತ್ತಿಟ್ಟು ಮುದ್ದಾಡಿ ನೋಡುಗರಿಗೆ ʼಮಜಾ ಕೊಟ್ಟಿದ್ದಾಳೆ.ʼ ಗ್ರಾಮದೇವತೆ ಮಂಚಮ್ಮ ದೇವಿ ಹಬ್ಬದ ಪ್ರಯುಕ್ತ ರಸಮಂಜರಿ ಹೆಸರಿನಲ್ಲಿ ಈ ಕಾರ್ಯಕ್ರಮ ನಡೆದಿದೆ.
ತೆಲಂಗಾಣ, ಆಂಧ್ರಪ್ರದೇಶ ಹಾಗೂ ಉತ್ತರ ಭಾರತದಲ್ಲಿ ಮತದಾರರನ್ನು ಸೆಳೆಯಲು ರಾಜಕಾರಣಿಗಳು ಏರ್ಪಡಿಸುವುದು ಸಾಮಾನ್ಯವಾಗಿದೆ. ಇದೀಗ ಈ ನಂಗಾನಾಚ್‌ಗಳು ಕರ್ನಾಟಕಕ್ಕೂ ಹಬ್ಬಿದಂತಿದೆ. ಸಾಮಾನ್ಯವಾಗಿ ಬೆಂಗಳೂರು ಸೇರಿದಂತೆ ಬೇರೆಡೆಯಿಂದ ಹುಡುಗಿಯರನ್ನು ಕರೆಸಿ ಗ್ರಾಮದ ಪಡ್ಡೆ ಹುಡುಗರ ಮನ ಗೆಲ್ಲುವಂತೆ ಡ್ಯಾನ್ಸ್ ಮಾಡಿಸಲಾಗುತ್ತಿದೆ. ಇದು ತಡರಾತ್ರಿ ನಡೆಯುವುದು ವಿಶೇಷ.
ಇದನ್ನೂ ಓದಿ: Viral Video : ರೈಲಿನಲ್ಲೇ ಸಿಗರೇಟ್ ಸೇದಿದ ಯುವತಿ; ವೈರಲ್ ಆಗ್ತಿದೆ ಈ ವಿಡಿಯೊ ನೋಡಿ