Site icon Vistara News

Murder Attempt: JDS ನಾಯಕನ ಹತ್ಯೆ ತಡೆದಿದ್ದು ಒಬ್ಬ ಪೊಲೀಸ್ ಕಾನ್‌ಸ್ಟೆಬಲ್‌! ದುಷ್ಕರ್ಮಿಗಳನ್ನು ಬೆನ್ನಟ್ಟಿ ಹಿಡಿದ ಸಾಹಸಿ!

Maddur JDS murder attempt acused

ಮಂಡ್ಯ:‌ ನಿಜವೆಂದರೆ ಅವರು ಆರು ಮಂದಿ ಬಂದಿದ್ದರು. ಅತ್ಯಂತ ಅಪಾಯಕಾರಿಯಾದ ಆಯುಧಗಳೇ ಅವರ ಕೈಯಲ್ಲಿದ್ದವು. ಒಂದೆರಡು ಸೆಕೆಂಡ್‌ ಹೆಚ್ಚುವರಿ ಸಿಕ್ಕಿದ್ದರೂ ಜೆಡಿಎಸ್‌ ಮುಖಂಡನನ್ನು (JDS Leader) ಕೊಚ್ಚಿ ಕೊಂದು ಬಿಡುತ್ತಿದ್ದರು (Murder attempt). ಆದರೆ, ಹಾಗೆ ಆಗದಂತೆ ತಡೆದದ್ದು, ಕೊಲೆಯಿಂದ ಜೆಡಿಎಸ್‌ ಮುಖಂಡನನ್ನು ಬಚಾವ್‌ ಮಾಡಿದ್ದು ಯಾರು ಗೊತ್ತೇ? ಒಬ್ಬ ಪೊಲೀಸ್‌ ಕಾನ್‌ಸ್ಟೇಬಲ್‌ (Police constable). ಮಾತ್ರವಲ್ಲ ಸಿನಿಮೀಯ ಸ್ಟೈಲ್‌ನಲ್ಲಿ ದುಷ್ಕರ್ಮಿಗಳನ್ನು ಚೇಸ್‌ ಮಾಡಿ (Chased in Cinema Style) ಹಿಡಿಯುವಲ್ಲೂ ಪ್ರಮುಖ ಪಾತ್ರ ವಹಿಸಿದ್ದಾರೆ.

ಇದು ಮಂಡ್ಯದ ಮದ್ದೂರಿನ ಹೊಳೆ ಆಂಜನೇಯ ಸ್ವಾಮಿ (Madddur Hole Anjaneya Temple) ದೇವಾಲಯದಲ್ಲಿ ನಡೆದ ಜೆಡಿಎಸ್‌ ನಾಯಕ ಅಪ್ಪು ಗೌಡ (JDS Leader Appu gowda) ಅವರ ಕೊಲೆ ಯತ್ನ ಮತ್ತು ಅವರು ಬಚಾವಾಗಿ ಬಂದ ಘಟನೆಯ ನಿಜ ಕಹಾನಿ.

ಮಂಡ್ಯ ಜಿಲ್ಲೆಯ ಮದ್ದೂರಿನ ಲೀಲಾವತಿ ಬಡಾವಣೆ ನಿವಾಸಿಯಾಗಿರುವ ಅಪ್ಪು ಗೌಡ ಇತ್ತೀಚಿನವರೆಗೂ ಕಾಂಗ್ರೆಸ್‌ನಲ್ಲಿದ್ದು ಚುನಾವಣೆಯ ಸಂದರ್ಭದಲ್ಲಿ ಜೆಡಿಎಸ್‌ಗೆ ಬಂದಿದ್ದರು. ನಾಯಕನಾಗಿ ಸ್ಥಳೀಯವಾಗಿ ಜನಪ್ರಿಯತೆ ಹೊಂದಿದ್ದರು. ಅವರು ಶನಿವಾರ ಮುಂಜಾನೆ ಹೊಳೆ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಬಂದಿದ್ದಾಗ ಅವರ ಮೇಲೆ ಅಟ್ಯಾಕ್‌ ಆಗಿತ್ತು.

ಅಪ್ಪು ಗೌಡ ಅವರು ಕಾರಿನಲ್ಲಿ ದೇವಸ್ಥಾನಕ್ಕೆ ಬಂದು ದೇವರ ದರ್ಶನ ಮುಗಿಸಿ ಹೊರಗೆ ಬರುತ್ತಿದ್ದಂತೆಯೇ ಕಾದು ಕುಳಿತಿದ್ದ ಇಬ್ಬರು ಡ್ಯಾಗರ್‌ ಮತ್ತು ಲಾಂಗ್‌ ಹಿಡಿದುಕೊಂಡು ನುಗ್ಗಿದ್ದಾರೆ. ಒಬ್ಬ ಡ್ಯಾಗರ್‌ನಿಂದ ಅಪ್ಪು ಗೌಡ ಅವರಿಗೆ ಚುಚ್ಚೇ ಬಿಟ್ಟಿದ್ದಾನೆ. ಆತನ ದಾಳಿಯಿಂದ ಅಪ್ಪು ಗೌಡರು ಕೆಳಗೆ ಉರುಳಿಬಿದ್ದಿದ್ದಾರೆ. ಆಗ ಒಬ್ಬ ವ್ಯಕ್ತಿ ಎಲ್ಲಿಂದಲೋ ಧಾವಿಸಿ ಬಂದು ಅವರನ್ನು ಬೆನ್ನಟ್ಟುತ್ತಾರೆ. ಲಾಂಗ್‌, ಡ್ಯಾಗರ್‌ ಹಿಡಿದಿದ್ದರೂ ಲೆಕ್ಕಿಸದೆ ಅವರನ್ನು ಓಡಿಸುತ್ತಾರೆ. ಇದಕ್ಕೆ ಅಪ್ಪು ಗೌಡರ ಜತೆಗಿದ್ದ ಹುಡುಗರೂ ಬೆಂಬಲ ಕೊಟ್ಟಿದ್ದಾರೆ. ಅಷ್ಟು ಹೊತ್ತಿಗೆ ದುಷ್ಕರ್ಮಿಗಳಿಂದ ತಪ್ಪಿಸಿಕೊಂಡ ಅಪ್ಪು ಗೌಡ ಕಾರಿನೊಳಗೆ ಹೋಗಿ ಕೂರುತ್ತಾರೆ.

ಹಾಗೆ ಅಪ್ಪು ಗೌಡ ಅವರನ್ನು ಕೊಲ್ಲಲು ಬಂದವರನ್ನು ಬೆನ್ನಟ್ಟಿ ಓಡಿಸಿದವರು ಬೇರೆ ಯಾರೂ ಅಲ್ಲ, ದೇವಸ್ಥಾನಕ್ಕೆ ಬಂದಿದ್ದ ಮದ್ದೂರು ಪೊಲೀಸ್‌ ಠಾಣೆಯ ಕಾನ್‌ಸ್ಟೆಬಲ್‌ ಕುಮಾರ್‌. ಆರು ಜನ ಒಂದು ಟಾಟಾ ಸುಮೋದಲ್ಲಿ ಬಂದು, ಇಬ್ಬರು ಡ್ಯಾಗರ್‌, ಲಾಂಗ್‌ಗಳನ್ನು ಹಿಡಿದು ಕೊಲೆಗೆ ಮುಂದಾಗಿದ್ದರೂ ಲೆಕ್ಕಿಸದೆ ಅವರನ್ನು ಅಟ್ಟಾಡಿಸಿ ಓಡಿಸಿ ಒಂದು ಜೀವವನ್ನು ರಕ್ಷಿಸಿದವರು ಕುಮಾರ್‌.

ಇದನ್ನೂ ಓದಿ: Murder attempt : ರಾಜಕೀಯ ವೈಷಮ್ಯ; ದೇವಸ್ಥಾನದಲ್ಲೇ ಡ್ಯಾಗರ್‌ ಚುಚ್ಚಿ ಜೆಡಿಎಸ್‌ ಮುಖಂಡನ ಕೊಲೆ ಯತ್ನ

ಅವರ ಸಾಹಸ ಇಷ್ಟಕ್ಕೇ ಮುಗಿದಿಲ್ಲ!

ಅಪ್ಪು ಗೌಡ ಮತ್ತು ಟೀಮ್‌ ಒಂದು ದೊಡ್ಡ ಹೊಡೆತದಿಂದ ಬಚಾವಾದೆವು ಎಂಬ ಸಮಾಧಾನದಲ್ಲಿ ಬೇಗ ಬೇಗನೆ ಆಸ್ಪತ್ರೆಗೆ ಧಾವಿಸಿತ್ತು. ಕೊಲೆ ಮಾಡಲು ಬಂದವರು ಕೂಡಾ ಟಾಟಾ ಸುಮೋ ಹತ್ತಿ ಪರಾರಿಯಾಗಿದ್ದರು. ಆದರೆ, ಆಗಲೂ ನಿರಾಳವಾಗದೆ ಉಳಿದವರು ಒಬ್ಬರೇ. ಅವರೇ ಕಾನ್‌ಸ್ಟೇಬಲ್‌ ಕುಮಾರ್‌.

ಅಪ್ಪುಗೌಡ ಅವರನ್ನು ಕೊಲ್ಲಲು ಡ್ಯಾಗರ್‌ನಿಂದ ಚುಚ್ಚುತ್ತಿದ್ದಂತೆಯೇ ಅಟ್ಟಾಡಿಸಿ ಬೆನ್ನಟ್ಟಿದ ಕುಮಾರ್‌ ಆರೋಪಿಗಳು ಟಾಟಾ ಸುಮೋದಲ್ಲಿ ತಪ್ಪಿಸಿಕೊಂಡ ಹೋದ ನಂತರವೂ ಬಿಡಲಿಲ್ಲ.

ಆರೋಪಿಗಳಿದ್ದ ಟಾಟಾ ಸುಮೋವನ್ನು ತನ್ನ ಬೈಕ್‌ನಲ್ಲಿ ಹಿಂಬಾಲಿಸಿದ ಕುಮಾರ್‌ ಹಾಗೆ ಬೆನ್ನಟ್ಟುತ್ತಲೇ ಕಂಟ್ರೋಲ್‌ ರೂಮಿಗೂ ಮಾಹಿತಿ ನೀಡಿದರು. ಅವರ ಮಾಹಿತಿಯ ಮೇರೆಗೆ ಮದ್ದೂರು ಪೊಲೀಸರು ಹಲಗೂರು ಬಳಿ ಟಾಟಾ ಸುಮೋ ಅಡ್ಡ ಹಾಕಿ ಆರೋಪಿಗಳನ್ನು ವಶಕ್ಕೆ ಪಡೆದರು.

ಇದು ರಾಜಕೀಯ ವೈಷಮ್ಯದಿಂದ ನಡೆದ ಕೊಲೆಯತ್ನವಲ್ಲ, ಬಿಸಿನೆಸ್‌ ಮತ್ತು ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದ ಘಟನೆ ಎಂದು ತಿಳಿದುಬಂದಿದೆ. ಜೊತೆಯಲ್ಲಿ ಬ್ಯುಸಿನೆಸ್‌ ಮಾಡುತ್ತಿದ್ದ ಮಧು ಎಂಬಾತನೇ ಈ ಕೃತ್ಯದ ರೂವಾರಿ ಎಂದು ತಿಳಿದುಬಂದಿದೆ ಎಂದು ಎಸ್ ಪಿ ಯತೀಶ್ ಹೇಳಿದ್ದಾರೆ.

Exit mobile version