Site icon Vistara News

Sumalatha Ambarish : ಬಿಜೆಪಿ ಟಿಕೆಟ್‌ ಸಿಗದಿದ್ರೆ ಪ್ಲ್ಯಾನ್‌ ಬಿ ರೆಡಿ ಎಂದ ಸುಮಲತಾ ಅಂಬರೀಷ್‌

parliament Election Sumalatha Ambarish Mandya

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ (Mandya Lokasabha ticket) ಟಿಕೆಟನ್ನು ಬಿಜೆಪಿಗೆ ಕೊಡಬೇಕು ಎಂದು ನಾನು ಕೇಳಿದ್ದೇನೆ. ಮೈತ್ರಿ ಅಭ್ಯರ್ಥಿಯಾಗಿ (BJP-JDS Candidate) ನಾನು ಚುನಾವಣೆ ಕಣಕ್ಕಿಳಿಯಬೇಕು ಎಂಬ ಇರಾದೆ ಹೊಂದಿದ್ದೇನೆ. ಮೈತ್ರಿ ಟಿಕೆಟ್‌ ಸಿಗದೆ ಹೋದರೆ ಮುಂದೇನು ಎನ್ನುವುದನ್ನು ಸಮಯ ಬಂದಾಗ ಹೇಳ್ತೇನೆ. ಯಾಕೆಂದರೆ ಚುನಾವಣೆಯಲ್ಲಿ ಇರಬೇಕೇ? ಬೇಡವೇ ಎಂದು‌ ನಿರ್ಧರಿಸುವವಳು ನಾನಲ್ಲ. ಜನ ನಿರ್ಧಾರ ಮಾಡಬೇಕು ಎಂದು ಹೇಳಿದ್ದಾರೆ ಮಂಡ್ಯ ಲೋಕಸಭಾ ಕ್ಷೇತ್ರದ ಸಂಸದೆ ಸುಮಲತಾ ಅಂಬರೀಷ್‌ (Sumalatha Ambarish).

ಬಾಲಗಂಗಾಧರನಾಥ ಸ್ವಾಮೀಜಿ ಜಯಂತೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಮಂಡ್ಯಕ್ಕೆ ಆಗಮಿಸಿದ ವೇಳೆ ಅವರು ಮಾಧ್ಯಮಗಳ ಜತೆ ಮಾತನಾಡಿದರು. ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್‌ ವಿಚಾರದಲ್ಲಿ ಅವರು ಹಲವು ವಿಚಾರಗಳನ್ನು ಹಂಚಿಕೊಂಡರು.

ʻʻಬಿಜೆಪಿ ವರಿಷ್ಠರನ್ನ ಭೇಟಿ ಮಾಡಿದಾಗ ನಾನು ಜನರಲ್ ಆಗಿ ಮಾತಾಡಿದ್ದೀನಿ‌. ನಾನು ನನಗಾಗಿ ಯಾವತ್ತೂ ಟಿಕೆಕ್‌ ಕೇಳಿಲ್ಲ ಕೇಳೋದು ಇಲ್ಲ. ಆದ್ರೆ ಜಿಲ್ಲೆಯಲ್ಲಿ ಬಿಜೆಪಿಗೆ ಚೆನ್ನಾಗಿದೆ. ನಮ್ಮ‌ ಪಕ್ಷಕ್ಕೆ ಟಿಕೆಟ್ ಕೊಟ್ಟಿದ್ದೆ ಆದ್ರೆ ಪಕ್ಷ ಸಂಘಟನೆಗೆ ಅನುಕೂಲವಾಗುತ್ತೆ ಎಂದು ಹೇಳಿದ್ದೇನೆ. ಆದರೆ ಏನ್ಮಾಡ್ತಾರೋ ನೋಡೋಣ.ʼʼ ಎಂದು ಸುಮಲತಾ ಅಂಬರೀಷ್‌ ಹೇಳಿದರು.

ʻʻನಾನು ಮಂಡ್ಯ ಬಿಟ್ಟು ಎಲ್ಲೂ ಹೋಗಲ್ಲ. ಇಲ್ಲಿಗೆ ಬಂದರೆ ಅಂಬರೀಶ್ ನನ್ನ ಜೊತೆ ಇರ್ತಾರೆ ಎಂಬ ಭಾವನೆ ಇದೆ. ಅಂಬರೀಶ್ ಗೆ ಎಲ್ಲಾ ಕಡೆ ಅಭಿಮಾನಿಗಳಿದ್ದರೂ ಅವರು ಮಂಡ್ಯ ಬಿಟ್ಟು ಹೋಗಲಿಲ್ಲ. ನಾನ್ಯಾಕೆ ಈಗ ಹೋಗಲಿ?
ಬಿಜೆಪಿಗೆ ಮಂಡ್ಯ ಉಳಿಸಿಕೊಳ್ಳಿ ಎಂದು ಹೇಳಿದ್ದೀನಿ ಪಾಸಿಟಿವ್ ಆಗಿದ್ದಾರೆ. ಅವರು ಮಂಡ್ಯವನ್ನು ಬಿಜೆಪಿ ಉಳಿಸಿಕೊಳ್ಳದಿದ್ದರೆ ನಾನು ಪಕ್ಷೇತರವಾಗಿ ನಿಂತುಕೊಳ್ಳಬೇಕೇ ಎಂದು ಆಗ ನಿರ್ಧಾರ ಮಾಡ್ತೇನೆ ಎಂದವರು ಹೇಳಿದರು.

ʻʻನಾನು ಪಕ್ಷೇತರ ಸಂಸದೆಯಾಗಿರುವುದರಿಂದ ನಾನು ಅಧಿಕೃತವಾಗಿ ಪಕ್ಷ ಸೇರಲಾಗುವುದಿಲ್ಲ.. ನನಗೆ ಜೆ.ಪಿ ನಡ್ಡಾ ಅವರೇ ನನಗೆ ಬಾಹ್ಯ ಬೆಂಬಲ ಕೊಡಿ ಎಂದಿದ್ದರು. ಪಕ್ಷ ಸೇರುವವರೆಗೆ ನಾನಾಗಿ ಪಕ್ಷದ‌‌ ಕಚೇರಿಗೆ ಹೋಗಲು ಆಗುವುದಿಲ್ಲ. ಆದರೆ, ಪಕ್ಷ ಕರೆದಾಗ ನಾನು ಹೋಗ್ತೀನಿ ʼʼ ಎಂದು ಸುಮಲತಾ ನುಡಿದರು.

ಬಿಜೆಪಿಯಲ್ಲಿ ಸುಮಲತಾ ಅವರ ವಿರುದ್ಧ ಷಡ್ಯಂತ್ರ ನಡೆಯುತ್ತಿದೆಯಾ ಎಂಬ ಪ್ರಶ್ನೆಗೆ, ಷಡ್ಯಂತ್ರ ಅನ್ನೋದು ದೊಡ್ಡ ಮಾತು ಆದ್ರೆ ಸಣ್ಣ ಪುಟ್ಟ ವಿಚಾರಗಳು ಇರ್ತದೆ ಎಂದರು.

ಮಂಡ್ಯಕ್ಕೆ ನಾಟಿ ಸ್ಟೈಲ್ ಅಭ್ಯರ್ಥಿ!

ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನ ನೀಡಿದ್ದಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್‌ ನಾಯಕರು ಸಿಕ್ಕಾಗ ನೀವು ಯಾಕೆ ನಮ್ಮ‌ ಪಕ್ಷಕ್ಕೆ ಬರಬಾರದು ಅಂತ ಕೇಳ್ತಾರೆ. ಆದರೆ ಅದನ್ನು ಅಧಿಕೃತ ಆಹ್ವಾನ ಎನ್ನಲಾಗಲ್ಲ ಎಂದು ಹೇಳಿದರು.

ಮಂಡ್ಯದಲ್ಲಿ ನಾಟಿ ಸ್ಟೈಲ್ ಅಭ್ಯರ್ಥಿ ಆಗ್ತಾರೆ ಎಂಬ ಸಚಿವ ಚೆಲುವರಾಯಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾಟಿ ಅನ್ನೋದು ನಮ್ಮ‌ ಮನೆಯ ಅಡುಗೆ ಕೋಣೆಯಲ್ಲಿರಬೇಕು. ಇದು ಪಾರ್ಲಿಮೆಂಟ್. ಅಲ್ಲಿಗೆ ಹೋಗಲು ಒಂದಷ್ಟು ಅರ್ಹತೆ ಇರಬೇಕು ಎಂದರು.

ಇದನ್ನೂ ಓದಿ : Sumalatha Ambareesh: ಸುಮಲತಾ ಅಂಬರೀಷ್‌ ಪಕ್ಷೇತರ ಅಭ್ಯರ್ಥಿ? ಮಂಡ್ಯ ಮಣ್ಣಿನ ಋಣದ ಬಗ್ಗೆ ಆಡಿದ ಮಾತೇನು?

ಒಂದೇ ವೇದಿಕೆಯಲ್ಲಿ ಮೂರೂ ಪಕ್ಷಗಳ ಸಂಭಾವ್ಯ ಅಭ್ಯರ್ಥಿಗಳು

ಈ ನಡುವೆ ಬಾಲಗಂಗಾಧರ ನಾಥ ಸ್ವಾಮಿ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಒಂದೇ ವೇದಿಕೆಯಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸಂಭಾವ್ಯ ಅಭ್ಯರ್ಥಿಗಳೆಂದೇ ಬಿಂಬಿತವಾಗಿರುವ ನಾಯಕರು‌ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು.

ಒಕ್ಕಲಿಗರ ಸಂಘದ ವತಿಯಿಂದ ಮಂಡ್ಯದ ರೈತ ಸಭಾಂಗಣದಲ್ಲಿ ನಡೆಯುತ್ತಿರುವ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಸುಮಲತಾ ಅಂಬರೀಷ್‌, ಡಾ.ಸಿ.ಎನ್.ಮಂಜುನಾಥ್, ಉದ್ಯಮಿ ಸ್ಟಾರ್ ಚಂದ್ರು ಭಾಗವಹಿಸಿದ್ದರು.

ಡಾ. ಸಿ.ಎನ್‌. ಮಂಜುನಾಥ್ ಅವರನ್ನು ಮಂಡ್ಯದ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಮಾಡಲು ದಳಪತಿಗಳು ಪ್ಲ್ಯಾನ್‌ ಮಾಡಿದ್ದಾರೆ. ಮತ್ತೊಂದೆಡೆ ಬಿಜೆಪಿ ಟಿಕೆಟ್ ಗೆ ಪಟ್ಟು ಹಿಡಿದಿರುವ ಸಂಸದೆ ಸುಮಲತಾ‌ ಇದ್ದಾರೆ. ಇನ್ನೊಂದೆಡೆ ಮಂಡ್ಯದ ಕಾಂಗ್ರೆಸ್‌ ಸಂಭಾವ್ಯ ಅಭ್ಯರ್ಥಿ ಎಂದೆ ಬಿಂಬಿತವಾಗಿರುವ ಸ್ಟಾರ್ ಚಂದ್ರು ಭಾಗವಹಿಸಿದ್ದಾರೆ.

Exit mobile version