ಮೈಸೂರು/ವಿಜಯಪುರ: ಮಂಗಳೂರಿನಲ್ಲಿ ನಡೆದಿರುವ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿ ರಾಜಕೀಯ ನಾಯಕರ ಮಾತೂ ಸ್ಫೋಟಗೊಂಡಿದೆ. ಮೈಸೂರು ಸಂಸದ ಪ್ರತಾಪ್ ಸಿಂಹ, ಬಿಜೆಪಿ ನಾಯಕ, ವಿಜಯಪುರ ಬಿಜೆಪಿ ಶಾಸಕ ಬಸವನ ಗೌಡ ಪಾಟೀಲ್ ಅವರು ಘಟನೆಯ ಬಗ್ಗೆ ಹಿನ್ನೆಲೆಯನ್ನು ಕೆದಕಿದ್ದಾರೆ, ಮುಂದೇನು ಮಾಡಬೇಕು ಎಂದು ಹೇಳಿದ್ದಾರೆ.
ಪ್ರತಾಪ್ ಸಿಂಹ ಹೇಳಿದ್ದೇನು?
ಮಂಗಳೂರು ಸ್ಫೋಟ ಪ್ರಕರಣ ಕೇವಲ ಕುಕ್ಕರ್ ಬ್ಲಾಸ್ಟ್ ಅಲ್ಲ. ಒಂದು ಭಯೋತ್ಪಾದನಾ ಕೃತ್ಯ ಎಂದು ಸಾಬೀತಾಗಿದೆ ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ʻʻಘಟನೆಯ ಹಿಂದಿನ ಗಂಭೀರತೆ ಅರಿತು ಮುಖ್ಯಮಂತ್ರಿ ತನಿಖೆಗೆ ಸೂಚಿಸಿದ್ದರು. ಆರೋಪಿಗಳನ್ನು ಪತ್ತೆ ಹಚ್ಚಿದ ಪೊಲೀಸರಿಗೆ ಅಭಿನಂದನೆ ಸಲ್ಲಿಸುತ್ತೇನೆʼʼ ಎಂದಿದ್ದಾರೆ ಪ್ರತಾಪ್ ಸಿಂಹ.
ʻʻಪಿಎಫ್‌ಐ, ಎಸ್‌ಡಿಪಿಐ ವಿರುದ್ಧದ ಕೇಸ್್‌ಗಳನ್ನು ವಾಪಸ್ ಪಡೆಯುವ ಮೂಲಕ ಸಿದ್ದರಾಮಯ್ಯ ಭಯೋತ್ಪಾದಕರಿಗೆ ಕುಮ್ಮಕ್ಕು ನೀಡಿದ್ದರು. ಈಗ ನಮ್ಮ ಸರ್ಕಾರ ಅವರನ್ನು ಸದೆ ಬಡಿಯುತ್ತಿದೆʼʼ ಎಂದು ಪ್ರತಾಪ್ ಹೇಳಿದರು.
ಎನ್‌ಕೌಂಟರೇ ಮದ್ದು ಎಂದ ಯತ್ನಾಳ್
ಇಂಥ ಪ್ರಕರಣಗಳು ನಡೆದಾಗ ಪೊಲೀಸರಿಗೆ ಮುಕ್ತ ಅಧಿಕಾರ ಕೊಡಬೇಕು. ನಾನು ಕೂಡಾ ಗೃಹ ಮಂತ್ರಿಗಳಿಗೆ ಹಾಗೂ ಬೊಮ್ಮಾಯಿ ಅವರಿಗೆ ಪೊಲೀಸರಿಗೆ ಫ್ರೀ ಹ್ಯಾಂಡ್ ಕೊಡಿ ಎಂದು ಹೇಳಿದ್ದೇನೆ. ಉತ್ತರ ಪ್ರದೇಶದಲ್ಲಿ ಹೇಗೆ ಕಠಿಣ ಕ್ರಮ ಕೈಗೊಳ್ತಾರೋ ಹಾಗೇ ಕಠಿಣ ಕ್ರಮ ತೋರಿಸಿ. ಕೇವಲ ಬಾಯಿಂದ ಕಠಿಣ ಕ್ರಮ ಎಂದು ಹೇಳುವುದರಿಂದ ಯಾವುದೂ ಆಗಲ್ಲ. ನಾಲ್ಕಾರು ಎನ್ ಕೌಂಟರ್ ಮಾಡಿ ಬುದ್ಧಿ ಕಲಿಸದಿದ್ರೆ ಭಯೋತ್ಪಾದಕರು ರಾಜಾರೋಷವಾಗಿ ಕೆಲಸ ಮಾಡ್ತಾರೆ ಎನ್ನುವುದು ವಿಜಯಪುರ ಬಿಜೆಪಿ ಶಾಸಕ ಬಸನ ಗೌಡ ಪಾಟೀಲ್ ಯತ್ನಾಳ್ ಅವರ ಅಭಿಪ್ರಾಯ.
ʻʻಗೃಹಮಂತ್ರಿಗಳು ಒಳ್ಳೆಯವರಿದ್ದಾರೆ, ಆದ್ರೆ ಕಠೊಣ ಕ್ರಮ ಕೈಗೊಳ್ಳುತ್ತಿಲ್ಲ ಅಷ್ಟೆ. ಅವರ ಒಳ್ಳೆಯತನ, ಹೋಂ ಡಿಪಾರ್ಟ್ ಮೆಂಟ್ ಸ್ಟ್ರಾಂಗ್ ಬೇಕು. ಖಡಕ್ ಆಗಿ ನಿರ್ಣಯ ತೆಗೆದುಕೊಳ್ಳಬೇಕುʼʼ ಎಂದು ಕಿವಿಮಾತು ಹೇಳಿದರು.
ಇದನ್ನೂ ಓದಿ | ಮಂಗಳೂರು ಸ್ಫೋಟ | ಉಗ್ರರನ್ನು ಗುಂಡು ಹೊಡೆದು ಸಾಯಿಸಬೇಕು: ಗುಡುಗಿದ ಕೆ.ಎಸ್. ಈಶ್ವರಪ್ಪ