Site icon Vistara News

Mangalore North Election Results: ಭರತ್‌ ಶೆಟ್ಟಿಗೇ ಸಿಕ್ಕಿತು ಮಂಗಳೂರು ನಗರ ಉತ್ತರ!

Mangalore North Election results Bharath Shetty

ಮಂಗಳೂರು: ಮಂಗಳೂರು ನಗರ ಉತ್ತರ ಕ್ಷೇತ್ರದ ಚುನಾವಣಾ ಫಲಿತಾಂಶ (Mangalore North Election Results) ಹೊರಬಿದ್ದಿದ್ದು, ತೀವ್ರ ಪೈಪೋಟಿ ನಡುವೆ ಬಿಜೆಪಿ ಪಕ್ಷದ ಭರತ್‌ ಶೆಟ್ಟಿ ಅವರು ಜಯ ಸಾಧಿಸಿದ್ದಾರೆ. ಅವರು 1,03,531 ಮತಗಳನ್ನು ಪಡೆಯುವ ಮೂಲಕ ಸಮೀಪ ಸ್ಪರ್ಧಿ ಕಾಂಗ್ರೆಸ್‌ನ ಇನಾಯತ್‌ ಅಲಿ ವಿರುದ್ಧ 32,922 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಗೆದ್ದು ಬೀಗಿದ ಭರತ್‌ ಶೆಟ್ಟಿ

ಬಿಜೆಪಿಯಿಂದ ಶಾಸಕರಾಗಿದ್ದ ಡಾ.ವೈ.ಭರತ್ ಶೆಟ್ಟಿ ಅವರೇ ಮತ್ತೆ ಸ್ಪರ್ಧೆ ಮಾಡಿದ್ದರು. ಪ್ರವೀಣ್ ನೆಟ್ಟಾರು ಹತ್ಯೆಯ ಬೆನ್ನಲ್ಲೇ ನಡೆದ ಫಾಸೀಲ್ ಹತ್ಯೆಯ ವೇಳೆ ಶಾಸಕ ಭರತ್ ಶೆಟ್ಟಿ ಅವರು ನಡೆದುಕೊಂಡ ರೀತಿ ಕ್ಷೇತ್ರದ ಜನರಲ್ಲಿ ತೀವ್ರವಾದ ಅಸಮಾಧಾನ ಮೂಡಿಸಿತ್ತು. ಅಭಿವೃದ್ಧಿ ವಿಚಾರದಲ್ಲೂ ಕೊನೆಯ ಕ್ಷಣದಲ್ಲಿ ಫೀಲ್ಡ್‌ಗೆ ಇಳಿದಿದ್ದ ಭರತ್ ಶೆಟ್ಟಿ ಬಗ್ಗೆ ಸ್ವಪಕ್ಷೀಯರಲ್ಲೇ ಅಸಮಧಾನ ಮನೆ ಮಾಡಿತ್ತು. ಆದರೆ, ಈ ಎಲ್ಲವನ್ನೂ ಎದುರಿಸಿ ಅವರು ಭಾರಿ ಅಂತರದಲ್ಲಿ ಜಯಗಳಿಸಿದ್ದಾರೆ. ಇನ್ನೊಂದೆಡೆ ಕಳೆದ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿ ಪೈಪೋಟಿ ನೀಡಿದ್ದ ಮೊಯಿದ್ದೀನ್ ಬಾವ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ಕೈತಪ್ಪಿದ್ದರಿಂದ ಅವರು ಜೆಡಿಎಸ್‌ನಿಂದ ಸ್ಪರ್ಧೆ ಮಾಡಿದ್ದರಿಂದ ಕಾಂಗ್ರೆಸ್‌ ಸಾಂಪ್ರದಾಯಿಕ ಮತಗಳು ಸೇರಿದಂತೆ ಮುಸ್ಲಿಂ ಮತಗಳು ವಿಭಜನೆಯಾಗಿರುವುದು ಸಹ ಇವರ ಗೆಲುವಿಗೆ ಕಾರಣವಾಗಿದೆ.

ಮಂಗಳೂರು ಉತ್ತರ ಕ್ಷೇತ್ರದ ಚುನಾವಣಾ ಫಲಿತಾಂಶ

ತೀವ್ರ ಸ್ಪರ್ಧೆಯೊಡ್ಡಿದ ಇನಾಯತ್ ಅಲಿ

ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಅಲಿ ಅವರು ತೀವ್ರ ಸ್ಪರ್ಧೆಯೊಡ್ಡಿದ್ದಾರಾದರೂ ಮೊಯಿದ್ದೀನ್ ಬಾವ ಅವರು ಜೆಡಿಎಸ್‌ನಿಂದ ಸ್ಪರ್ಧೆ ಮಾಡಿರುವುದೇ ಸೋಲಿಗೆ ಕಾರಣವಾಗಿದೆ. ಇಲ್ಲವಾದಲ್ಲಿ ಈ ಬಾರಿ ಇವರು ಗೆಲುವು ಸಾಧಿಸುವ ಸಾಧ್ಯತೆ ಹೆಚ್ಚಿತ್ತು ಎಂದು ವಿಶ್ಲೇಷಿಸಲಾಗುತ್ತಿದೆ. ಇವರು 70609 ಮತಗಳನ್ನು ಪಡೆದುಕೊಂಡಿದ್ದಾರೆ.

ಕಳೆದ ಬಾರಿಯ ಫಲಿತಾಂಶ
ಡಾ.ವೈ.ಭರತ್ ಶೆಟ್ಟಿ (ಬಿಜೆಪಿ): 98648, ಮೊಯಿದ್ದೀನ್ ಬಾವ (ಕಾಂಗ್ರೆಸ್‌): 72000, ಗೆಲುವಿನ ಅಂತರ: 26648

ಈ ಬಾರಿಯ ಚುನಾವಣಾ ಫಲಿತಾಂಶ
ಡಾ.ವೈ.ಭರತ್ ಶೆಟ್ಟಿ (ಬಿಜೆಪಿ): 103531 | ಇನಾಯತ್ ಅಲಿ (ಕಾಂಗ್ರೆಸ್‌): 70609 | ಗೆಲುವಿನ ಅಂತರ: 32,922 | ನೋಟಾ: 1194

ಕ್ಷೇತ್ರ ವಿಶೇಷ

ಮಂಗಳೂರು ನಗರ ಉತ್ತರ ಕ್ಷೇತ್ರವು 2008ರಲ್ಲಿ ಉಡುಪಿ ಲೋಕಸಭಾ ಕ್ಷೇತ್ರದಿಂದ ಮಂಗಳೂರು ಲೋಕಸಭಾ ಕ್ಷೇತ್ರಕ್ಕೆ ಸೇರ್ಪಡೆಗೊಂಡಿತ್ತು. ಜಿಲ್ಲೆಯ ಅತಿ ಸೂಕ್ಷ್ಮ ಮತಗಟ್ಟೆಗಳು ಇಲ್ಲಿವೆ. ಮಾಜಿ ಸಚಿವ ಕೃಷ್ಣ ಜೆ. ಪಾಲೇಮಾರ್ ನಿರಂತರ ಎರಡು ಬಾರಿ ಆಯ್ಕೆಯಾಗಿದ್ದರು. ಆದರೆ ಒಮ್ಮೆ ಕ್ಷೇತ್ರ ಉಡುಪಿ ಲೋಕಸಭಾ ಕ್ಷೇತ್ರಕ್ಕೆ ಒಳಪಟ್ಟಿತ್ತು ಹಾಗೂ ಮತ್ತೊಮ್ಮೆ ಆಯ್ಕೆಯಾದಾಗ ಮಂಗಳೂರು ಲೋಕಸಭಾ ಕ್ಷೇತ್ರಕ್ಕೆ ಒಳಪಟ್ಟಿತ್ತು.

Exit mobile version