ಮಂಗಳೂರು: ಹಿಂದೆ ಮಂಗಳೂರು ವಿಧಾನಸಭಾ ಕ್ಷೇತ್ರವಾಗಿದ್ದ ಕ್ಷೇತ್ರ ಈಗ ಮಂಗಳೂರು ನಗರ ದಕ್ಷಿಣ ಕ್ಷೇತ್ರವಾಗಿ ಬದಲಾಗಿದೆ. ಬಹುತೇಕ ಬಿಜೆಪಿ ಪ್ರಾಬಲ್ಯವಿರುವ ಈ ಕ್ಷೇತ್ರದಲ್ಲಿ 2013ರಲ್ಲಿ ಕಾಂಗ್ರೆಸ್ ಗೆದ್ದಿತ್ತು. ಆದರೆ, ಕಳೆದ ಚುನಾವಣೆಯಲ್ಲಿ ಬಿಜೆಪಿಯ ಹೊಸ ಅಭ್ಯರ್ಥಿ ವೇದವ್ಯಾಸ ಕಾಮತ್ ಅವರು ಜಯಸಾಧಿಸಿದ್ದರು. ಈ ಬಾರಿಯ ಚುನಾವಣೆ ಫಲಿತಾಂಶ (Mangalore South Election Results) ಹೊರಬಿದ್ದಿದ್ದು, ಬಿಜೆಪಿ ಪಕ್ಷದ ವೇದವ್ಯಾಸ ಕಾಮತ್ ಅವರು ಜಯಗಳಿಸಿದ್ದಾರೆ.
ನೇರ ಹಣಾಹಣಿ
ಕೆಎಎಸ್ ಅಧಿಕಾರಿಯಾಗಿ ಮಂಗಳೂರು ನಗರ ಪಾಲಿಕೆ ಆಯುಕ್ತರೂ ಆಗಿದ್ದ ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್. ಲೋಬೋ ಮೂಲಕ ಕಾಂಗ್ರೆಸ್ ಅಧಿಕಾರ ಹಿಡಿದಿತ್ತು. ಅಭಿವೃದ್ಧಿ ವಿಚಾರದಲ್ಲಿ ಸಾಕಷ್ಟು ಕೆಲಸ ಮಾಡಿದ್ದರೂ ಕಳೆದ ಚುನಾವಣೆಯಲ್ಲಿ ಬಿಜೆಪಿಯ ಹೊಸ ಅಭ್ಯರ್ಥಿ ವೇದವ್ಯಾಸ ಕಾಮತ್ ಎದುರು ಲೋಬೋ ಸೋಲನುಭವಿಸಿದ್ದರು. ಈ ಬಾರಿ ಮತ್ತೆ ವೇದವ್ಯಾಸ ಕಾಮತ್ ಹಾಗೂ ಜೆ.ಆರ್. ಲೋಬೋ ನಡುವೆ ನೇರ ಹಣಾಹಣಿ ನಡೆದಿದ್ದು, ಕೊನೆಗೂ ವೇದವ್ಯಾಸ ಕಾಮರ್ ಅವರು ಜಯಗಳಿಸಿದ್ದಾರೆ.
ಗೆದ್ದು ಬೀಗಿದ ವೇದವ್ಯಾಸ ಕಾಮತ್
ಕಳೆದ ಐದು ವರ್ಷಗಳಲ್ಲಿ ಮಂಗಳೂರು ನಗರಕ್ಕೆ ದೊರೆತ ಸ್ಮಾರ್ಟ್ ಸಿಟಿ ಯೋಜನೆಯ ಅನುಷ್ಠಾನ ವೇದವ್ಯಾಸ್ ಕಾಮತ್ ಅವರಿಗೆ ಪ್ಲಸ್ ಪಾಯಿಂಟ್ ಆಗಿದೆ. ಅಲ್ಲದೆ, ಕಾರ್ಯಕರ್ತರೊಂದಿಗಿನ ಅವರ ಒಡನಾಟ ಸೇರಿದಂತೆ ಅಭಿವೃದ್ಧಿ ಕಾರ್ಯವು ಅವರ ಕೈ ಹಿಡಿದಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಜನರ ಜತೆಗಿದ್ದ ಲೋಬೋಗೆ ಒಲಿಯದ ಜಯ
ಕಳೆದ ಬಾರಿ ಸೋತರೂ ಕ್ಷೇತ್ರದಲ್ಲಿ ಓಡಾಡಿ ಜನರ ಸಮಸ್ಯೆಗಳನ್ನು ಆಲಿಸುವ ಮೂಲಕ ಜೆ.ಆರ್.ಲೋಬೋ ಜನರ ಜತೆಗಿದ್ದೇನೆ ಎಂದು ತೋರಿಸಿ ಕೊಟ್ಟಿದ್ದರು. ಆದರೆ, ಇದು ಅವರ ಗೆಲುವಿಗೆ ಸಹಕಾರಿಯಾಗಲಿಲ್ಲ. ಕ್ಷೇತ್ರದಲ್ಲಿ ಇರುವ ಹಿಂದುತ್ವದ ಅಲೆ ಅವರನ್ನು ಸೋಲುವಂತೆ ಮಾಡಿದೆ.
ಕಳೆದ ಬಾರಿಯ ಫಲಿತಾಂಶ
ಜೆ.ಆರ್.ಲೋಬೋ (ಕಾಂಗ್ರೆಸ್): 70470, ವೇದವ್ಯಾಸ ಕಾಮತ್ (ಬಿಜೆಪಿ): 86545, ಗೆಲುವಿನ ಅಂತರ: 16075
ಇದನ್ನೂ ಓದಿ: Karnataka Election Results Live Updates: ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಬೆಳವಣಿಗೆ
ಈ ಬಾರಿಯ ಫಲಿತಾಂಶ ಇಂತಿದೆ
ವೇದವ್ಯಾಸ ಕಾಮತ್ (ಬಿಜೆಪಿ): 91437 | ಜೆ.ಆರ್.ಲೋಬೋ (ಕಾಂಗ್ರೆಸ್): 67475 | ಸುಮತಿ ಎಸ್. ಹೆಗ್ಡೆ (ಜೆಡಿಎಸ್): 709 | ನೋಟಾ: 1203