ಬೆಂಗಳೂರು: ಇತ್ತೀಚೆಗೆ ಮದುವೆಯ ಆಮಂತ್ರಣ ಪತ್ರಿಕೆಗಳನ್ನು (Marriage Invitation) ಜನರು ಭಿನ್ನ-ವಿಭಿನ್ನವಾಗಿ ಮುದ್ರಿಸುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಪಾಸ್‌ಪೋರ್ಟ್, ರೇಷನ್ ಕಾರ್ಡ್, ಆಧಾರ್ ಕಾರ್ಡ್, ದಿನಪತ್ರಿಕೆ, ಮೊಬೈಲ್ ಅಪ್ಲಿಕೇಷನ್ ಮಾದರಿಯ ವೆಡ್ಡಿಂಗ್ ಕಾರ್ಡ್ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಈಗ ಫಾರ್ಮಾಸಿಸ್ಟ್- ನರ್ಸ್ ಜೋಡಿಯ ವಿವಾಹ ಆಹ್ವಾನ ಪತ್ರಿಕೆಯೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ತಮಿಳನಾಡಿನ ವಧು-ವರರ ಇನ್ವಿಟೇಶನ್ ಕಾರ್ಡ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಟ್ಯಾಬ್ಲೆಟ್ ಶೀಟ್ ಮಾದರಿಯಲ್ಲಿನ ಆಮಂತ್ರಣ ಪತ್ರಿಕೆ ವೈರಲ್ ಆಗಿದೆ. ಈ ಆಮಂತ್ರಣ ಪತ್ರಿಕೆ ತಮಿಳುನಾಡಿನ ತಿರುವಣ್ಣಾಮಲೈಯಲ್ಲಿ ಮುದ್ರಣವಾಗಿದೆ.
ವರ ಎಜಿಲರಸನ್ ಎಂಬುವವರು ಫಾರ್ಮಾಸಿಸ್ಟ್ ಹಾಗೂ ವಧು ವಸಂತಕುಮಾರಿ ನರ್ಸ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ಇವರ ಮದುವೆ ಆಮಂತ್ರಣ ಪತ್ರಿಕೆಯನ್ನು ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಪ್ರಿಂಟ್ ಮಾಡಿಸಲಾಗಿದೆ.
ಇದನ್ನೂ ಓದಿ | Crazy Star | ಕ್ರೇಜಿಸ್ಟಾರ್ ರವಿಚಂದ್ರನ್ ಮನೆಯಲ್ಲಿ ಇಂದು ಮದುವೆಯ ಸಂಭ್ರಮ
ಮಾತ್ರೆ ಆಮಂತ್ರಣ ಕಾರ್ಡ್ನಲ್ಲಿ ಏನಿದೆ?
ತಿರುವಣ್ಣಾಮಲೈನ ವರ ಎಜಿಲರಸನ್ ಮತ್ತು ವಿಲ್ಲುಪುರಂ ಜಿಲ್ಲೆಯ ಗೆಂಜಿಯ ವಧು ವಸಂತಕುಮಾರಿ ಅವರ ಮದುವೆ ಸೆಪ್ಟೆಂಬರ್ 5ರಂದು ನಿಶ್ಚಯವಾಗಿದೆ. ಎಲ್ಲ ಸ್ನೇಹಿತರು ಮತ್ತು ಬಂಧುಗಳು ತಪ್ಪದೇ ವಿವಾಹ ಸಮಾರಂಭಕ್ಕೆ ಆಗಮಿಸಬೇಕು ಎಂದು ತಿಳಿಸಲಾಗಿದೆ. ಮ್ಯಾನುಫ್ಯಾಕ್ಚರ್ ವಿಭಾಗದಲ್ಲಿ ವರ-ವಧುವಿನ ತಂದೆ-ತಾಯಿ ಹೆಸರಿನ ಜತೆ ವಿಳಾಸವನ್ನು ಮುದ್ರಿಸಲಾಗಿದೆ. ಬ್ಲೂ ಕಲರ್‌ನಲ್ಲಿ ಮದುವೆ ಮತ್ತು ಆರತಕ್ಷತೆ ದಿನಾಂಕ ಮತ್ತು ಸಮಯ ಮುದ್ರಿಸಲಾಗಿದೆ.
ಮತ್ತೊಂದು ವಿಶೇಷ ಎಂದರೆ ಮದುವೆ ದಿನ ಶಿಕ್ಷಕರ ದಿನ ಮತ್ತು ಮದರ್ ತೆರೇಸಾ ಸ್ಮರಣೆ ದಿನವಾಗಿದ್ದು, ಮದುವೆ ಕರೆಯೋಲೆ ಪತ್ರಿಕೆಯಲ್ಲಿ ವಧು-ವರನ ಹೆಸರು ದೊಡ್ಡ ಅಕ್ಷರದಲ್ಲಿದ್ದು, ಪಕ್ಕದಲ್ಲೇ ಇಬ್ಬರ ಶಿಕ್ಷಣದ ವಿವರವೂ ಇದೆ. ಕೆಂಪು ಬಣ್ಣದಲ್ಲಿ, ಎಚ್ಚರಿಕೆ ಎಂದು ಮುದ್ರಿಸಲಾಗಿದ್ದು, ಮದುವೆಗೆ ಆಗಮಿಸುವುದನ್ನು ತಪ್ಪಿಸಲೇಬೇಡಿ ಎಂದಿದ್ದಾರೆ. ಮಾತ್ರೆ ಶೀಟ್ ಮಾದರಿಯ ಈ ಮದುವೆ ಕಾರ್ಡ್ ಅನೇಕರ ಮೆಚ್ಚುಗೆ ಗಳಿಸಿದೆ.
ಇದನ್ನೂ ಓದಿ | Aadhar Card | ಮೈನರ್ ಹುಡ್ಗಿ-ಮೇಜರ್ ಹುಡುಗ; ಮದುವೆಗಾಗಿ ಹುಡುಗಿ ಆಧಾರ್ ಕಾರ್ಡ್‌ನಲ್ಲೇ ತಿದ್ದುಪಡಿ!