ಮಂಡ್ಯ: ತಾಯಿಯೊಬ್ಬಳು ತನ್ನ ಮೂವರು ಮಕ್ಕಳಿಗೆ ವಿಷ ಹಾಕಿ ತಾನೂ ನೇಣಿಗೆ ಶರಣಾದ ಘೋರ ದುರಂತವೊಂದು (Mass suicide) ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣದಲ್ಲಿ ನಡೆದಿದೆ.
ಉಸ್ನಾ ಕೌಸರ್ (30 ವರ್ಷ) ಅವರೇ ತನ್ನ ಮೂವರು ಮಕ್ಕಳಿಗೆ ವಿಷ ಉಣಿಸಿ ಆತ್ಮಹತ್ಯೆ ಮಾಡಿಕೊಂಡವರು. ಇವರು ಅಕಿಲ್ ಎಂಬವರ ಪತ್ನಿ. ಹ್ಯಾರಿಸ್ (೭), ಅಲೀಸಾ (4) ಅನಮ್ ಫಾತಿಮಾ (2) ಅಮ್ಮನೊಂದಿಗೆ ಪ್ರಾಣ ಕಳೆದುಕೊಂಡ ಪುಟಾಣಿಗಳು.
ಉಸ್ನಾ ಕೌಸರ್ ಅವರ ಪತಿ ಅಕಿಲ್ ಅವರು ಕಾರು ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದಾರೆ. ಇವರು ಮಂಡ್ಯ ಜಿಲ್ಲೆ ಮದ್ದೂರಿನ ಹೊಳೆ ಬೀದಿಯಲ್ಲಿ ವಾಸ ಮಾಡುತ್ತಿದ್ದರು. ಗುರುವಾರ ಗಂಡ ಕೆಲಸಕ್ಕೆ ಹೋಗಿದ್ದ ವೇಳೆ ಮನೆಯಲ್ಲಿ ಯಾರು ಇಲ್ಲದಾಗ ಕೌಸರ್ ಈ ಅತಿರೇಕದ ಕೃತ್ಯಕ್ಕೆ ಮುಂದಾಗಿದ್ದಾರೆ. ಮದ್ದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ | Student suicide | ಪರೀಕ್ಷೆಯಲ್ಲಿ 10 ಮಾರ್ಕ್ಸ್ ಕಡಿಮೆ ಆಗಿದ್ದಕ್ಕೆ ನಿಂದಿಸಿದ ಪ್ರಿನ್ಸಿಪಾಲ್: ಪಿಯು ವಿದ್ಯಾರ್ಥಿನಿ ಆತ್ಮಹತ್ಯೆ