Site icon Vistara News

Accident | 30 ಅಡಿ ಎತ್ತರದ ಸೇತುವೆಯಿಂದ ಕೆಳಗೆ ಬಿದ್ದ ಮಿನಿ ಟೆಂಪೋ; ಒಬ್ಬ ಸಾವು, ಇಬ್ಬರಿಗೆ ಗಾಯ

Accident

ಬಾಗಲಕೋಟೆ: ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಮಹಿಂದ್ರಾ ಎಕ್ಸ್‌ಯುವಿ 500 ಕಾರು ಡಿಕ್ಕಿ ಹೊಡೆದಿದ್ದರಿಂದ (Accident) ಮಹೀಂದ್ರಾ ಜೀತೊ ಮಿನಿ ಟೆಂಪೋ 30 ಅಡಿ ಎತ್ತರದ ಸೇತುವೆಯಿಂದ ಕೆಳಗೆ ಬಿದ್ದು, ಒಬ್ಬ ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಹುನಗುಂದ ಹಾಗೂ ಕೂಡಲಸಂಗಮ ನಡುವಿನ ಬೆಳಗಲ್ಲ ರಾಷ್ಟ್ರೀಯ ಹೆದ್ದಾರಿ-50ರ ಸೇತುವೆ ಮೇಲೆ ಭೀಕರ ಅಪಘಾತ ನಡೆದಿದೆ. ಮಹಿಂದ್ರಾ ಜೀತೊ ಗೂಡ್ಸ್ ವಾಹನಕ್ಕೆ ಹಿಂಬದಿಯಿಂದ ಮಹಿಂದ್ರಾ ಎಕ್ಸ್‌ಯುವಿ 500 ಗುದ್ದಿದ್ದರಿಂದ ದುರಂತ ಸಂಭವಿಸಿದೆ.

ಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದ ಮಿನಿ ಟೆಂಪೋ ಇಳಕಲ್‌ನಿಂದ ಟೈಲ್ಸ್ ತೆಗೆದುಕೊಂಡು ಹೋಗುತ್ತಿತ್ತು. ಹಿಂದಿನಿಂದ ಕಾರು ಗುದ್ದಿದ ರಭಸಕ್ಕೆ ಮಿನಿ ಟೆಂಪೋ ಸೇತುವೆ ಮೇಲಿಂದ್ದ ಕೆಳಕ್ಕೆ ಬಿದ್ದಿದ್ದರಿಂದ ಅದರಲ್ಲಿದ್ದ ಒಬ್ಬ ಸಾವಿಗೀಡಾಗಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಕಾರು ಚಾಲಕನ ಅತಿಯಾದ ವೇಗವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಅಪಘಾತದಲ್ಲಿ ಕಾರಿನಲ್ಲಿದ್ದ ಡ್ರೈವರ್, ಗಂಡ, ಹೆಂಡತಿ ಹಾಗೂ ಇಬ್ಬರು ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಹುನಗುಂದ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ | Bus Accident | ಅತಿ ವೇಗ ತಂದ ಆಪತ್ತು; ಲಾರಿಗೆ ಡಿಕ್ಕಿ ಹೊಡೆದ ಕೆಎಸ್‌ಆರ್‌ಟಿಸಿ ಬಸ್‌ ಛಿದ್ರ

Exit mobile version