Site icon Vistara News

Karnataka Election 2023: ಸಚಿವ ನಾರಾಯಣ ಗೌಡರು ಸ್ವಲ್ಪ ಅವಸರ ಮಾಡುತ್ತಿದ್ದಾರೆ: ಕೋಟ ಶ್ರೀನಿವಾಸ ಪೂಜಾರಿ

Minister Narayana Gowda was in a bit of a hurry says Kota Srinivas Poojary Karnataka Election 2023 updates

ಹಾವೇರಿ: ವಿಧಾನಸಭಾ ಚುನಾವಣೆ (Karnataka Election 2023) ಸಮೀಪಿಸುತ್ತಿದ್ದಂತೆ ಪಕ್ಷಾಂತರ ಪರ್ವವೂ ಶುರುವಾಗತೊಡಗಿದೆ. ಈಗ ಕ್ರೀಡಾ ಸಚಿವ ಕೆ.ಸಿ. ನಾರಾಯಣ ಗೌಡ ಅವರು ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯೆ ನೀಡಿದ್ದು, ಸಾಮಾನ್ಯವಾಗಿ ನಮ್ಮ ಪಕ್ಷಕ್ಕೆ ಬಂದವರು ಬಹಳ ವಿಶ್ವಾಸದಿಂದ ಇರುತ್ತಾರೆ. ಸಚಿವ ನಾರಾಯಣ ಗೌಡ ಅವರು ನಮ್ಮ ಪಕ್ಷದಿಂದ ಗೆದ್ದು ಸಚಿವರಾಗಿದ್ದಾರೆ. ನಾವೂ ಸಹ ಉತ್ತಮವಾಗಿ ಸರ್ಕಾರವನ್ನು ನಡೆಸಿದ್ದೇವೆ. ಚುನಾವಣೆ ಹತ್ತಿರ ಬಂದಿದೆ. ಬಹುತೇಕರು ನಮ್ಮ ವಿಶ್ವಾಸದಲ್ಲಿಯೇ ಇದ್ದಾರೆ. ಅದ್ಯಾಕೋ ನಾರಾಯಣಗೌಡರು ಸ್ವಲ್ಪ ಗಡಿಬಿಡಿ ಮಾಡುತ್ತಿದ್ದಾರೆ ಎಂದು ಅನ್ನಿಸುತ್ತದೆ ಎಂದು ಹೇಳಿದರು.

ರಾಣೆಬೆನ್ನೂರು ತಾಲೂಕು ಮಾಕನೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ವಿಚಾರವಾಗಿ ಪಕ್ಷದ ನಾಯಕರು ಏನು ತೀರ್ಮಾನ ಮಾಡ್ತಾರೆ ಅದಕ್ಕೆ ನಾವು ಬದ್ಧರಾಗಿರುತ್ತೇವೆ. ಇನ್ನು ಸಚಿವ ವಿ. ಸೋಮಣ್ಣ ಕಾಂಗ್ರೆಸ್‌ ಪಕ್ಷವನ್ನು ಸೇರುವುದಿಲ್ಲ ಎಂದು ಹೇಳಿಕೊಂಡಿದ್ದಾರೆ. ಹಾಗಾಗಿ ಅವರು ಬಿಜೆಪಿಯನ್ನು ಬಿಡುವುದಿಲ್ಲ ಎಂದು ಹೇಳಿದರು.

ಇದನ್ನೂ ಓದಿ: JDS Politics: ಲಕ್ಷ್ಮೀನರಸಿಂಹ ಸ್ವಾಮಿ‌ ದೇವಾಲಯದ ಸಂಪೂರ್ಣ ಉಸ್ತುವಾರಿ ಹೊತ್ತ ಪ್ರಜ್ವಲ್‌ ರೇವಣ್ಣ; ಮುಂದುವರಿದ ಕೈ-ದಳ ಜಟಾಪಟಿ

ಎಸಿಬಿಯನ್ನು ಸೃಷ್ಟಿ ಮಾಡಿ ರಾಜಕಾರಣಿಗಳನ್ನು ಹೊರತಾಗಿ ತರುವ ಕೆಲಸವನ್ನು ಮಾಡಿದ್ದು ಹಿಂದಿನ ಕಾಂಗ್ರೆಸ್ ಸರ್ಕಾರ. ಎಸಿಬಿ ರದ್ದುಪಡಿಸಿ ಪಾರದರ್ಶಕ ಆಡಳಿತ ಬರಬೇಕು. ಭ್ರಷ್ಟಾಚಾರವನ್ನು ನಿಯಂತ್ರಣಕ್ಕೆ ತರಬೇಕು ಎಂದು ಲೋಕಾಯುಕ್ತವನ್ನು ಬಲಪಡಿಸಿದ್ದು ನಮ್ಮ ಸರ್ಕಾರ. ಕಾನೂನು ಚೌಕಟ್ಟು ಮೀರಿದವರಿಗೆ, ಅಗತ್ಯಕ್ಕಿಂತ ಹೆಚ್ಚು ಸಂಪನ್ಮೂಲ ಇಟ್ಟುಕೊಂಡವರಿಗೆ ಸಾಮಾನ್ಯವಾಗಿ ಲೋಕಾಯುಕ್ತ ದಾಳಿ ಆಗುತ್ತದೆ. ಅದು ನಮ್ಮ ಪಕ್ಷದವರಾಗಿರಲಿ, ಬೇರೆಯವರಾಗಲಿ. ನಾವು ಆಕ್ಷೇಪ ಮಾಡುವುದಿಲ್ಲ ಎಂದು ಕೋಟ ಪೂಜಾರಿ ಹೇಳಿದರು.

ಲೋಕಾಯುಕ್ತದ ಹಲ್ಲು ಕಿತ್ತವರು ಕಾಂಗ್ರೆಸ್‌ನವರಾಗಿದ್ದಾರೆ. ಲೋಕಾಯುಕ್ತದ ಅಧಿಕಾರವನ್ನು ಅನೂರ್ಜಿತ ಮಾಡಿ ಎಸಿಬಿಯನ್ನು ತಂದವರು ಕಾಂಗ್ರೆಸ್ ಪಕ್ಷದವರಾಗಿದ್ದಾರೆ. ನಮಗೆ ಹೈಕೋರ್ಟ್ ಹೇಳಿದಾಗ
ಸುಪ್ರೀಂ ಕೊರ್ಟ್‌ಗೆ ಮೇಲ್ಮನವಿ ಹೋಗುವ ಅವಕಾಶ ಇತ್ತು. ಆದರೆ, ಹೈಕೋರ್ಟ್ ನಿರ್ದೇಶನದಂತೆ
ಲೋಕಾಯುಕ್ತವನ್ನು ಜಾರಿಗೆ ತಂದಿದ್ದೇವೆ. ನಮ್ಮ ಸರ್ಕಾರವು ಪಾರದರ್ಶಕ ಆಡಳಿತಕ್ಕೆ ಬದ್ಧವಾಗಿದೆ ಎಂದು ಹೇಳಿದರು.

ಇದನ್ನೂ ಓದಿ: BJP Politics: ಬಿಜೆಪಿಯ ಅನೇಕ ಹಾಲಿ ಶಾಸಕರಿಗೆ ಟಿಕೆಟ್‌ ಮಿಸ್‌: ಬಿ.ಎಸ್‌. ಯಡಿಯೂರಪ್ಪ ಮಾತಿನಿಂದ ತಲ್ಲಣ

ನಾರಾಯಣಗೌಡ ಪಕ್ಷ ಬಿಡಲಾರರು: ಸದಾನಂದ ಗೌಡ

ಮಂಡ್ಯ: ಸಚಿವ ಕೆ.ಸಿ. ನಾರಾಯಣಗೌಡ ಅವರು ಪಕ್ಷ ಬಿಟ್ಟು ಹೋಗುವುದಿಲ್ಲ. ಮಂಗಳವಾರ ಸಂಜೆ ಅವರ ನೇತೃತ್ವದಲ್ಲೇ ರ‍್ಯಾಲಿ ನಡೆಯಲಿದೆ ಎಂದು ಕೇಂದ್ರದ ಮಾಜಿ ಸಚಿವ ಸದಾನಂದಗೌಡ ಹೇಳಿದ್ದಾರೆ. ನಮ್ಮ ಸರ್ಕಾರ ಬಹಳಷ್ಟು ಅಭಿವೃದ್ಧಿ ಮಾಡಿದೆ. ಹೀಗಾಗಿ ನಮ್ಮ ಪಕ್ಷವನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.

Exit mobile version