Site icon Vistara News

Missing Case | ದೇಗುಲ ಮಠದಿಂದ ಮಿಸ್‌ ಆಗಿದ್ದ ಮೂವರು ಬಾಲಕರು ಪ್ರತ್ಯಕ್ಷ; ನಿಟ್ಟುಸಿರು ಬಿಟ್ಟ ಪೋಷಕರು

ರಾಮನಗರ: ಇಲ್ಲಿನ ಕನಕಪುರ ನಗರದ ದೇಗುಲ ಮಠದಿಂದ ಕಳೆದ ಮಂಗಳವಾರ (ನ.೮) ನಾಪತ್ತೆಯಾಗಿದ್ದ (Missing Case) ಮೂವರು ಬಾಲಕರು ಭಾನುವಾರ ರಾತ್ರಿ ಮಠಕ್ಕೆ ವಾಪಸಾಗಿದ್ದಾರೆ. 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಶಿವಕುಮಾರ್ (15), ಪ್ರತಾಪ್ (16) ಕಾರ್ತಿಕ್ (15) ವಾಪಸ್‌ ಆದವರು.

ನವೆಂಬರ್‌ 8ರ ರಾತ್ರಿ ದೇಗುಲ ಮಠದ ನಿರ್ವಾಣಸ್ವಾಮಿ ಹಾಸ್ಟೆಲ್‌ನಲ್ಲಿ ಊಟ ಮುಗಿಸಿದ ವಿದ್ಯಾರ್ಥಿಗಳು ನಂತರ ಎಲ್ಲೂ ಕಂಡಿಲ್ಲ. 2 ದಿನಗಳ ಕಾದಿದ್ದ ಸಿಬ್ಬಂದಿ ಆ ಬಳಿಕ ಕನಕಪುರ ನಗರ ಠಾಣೆಗೆ ದೂರು ನೀಡಿದ್ದರು. ಜತೆಗೆ ಮಾಧ್ಯಮಗಳಲ್ಲಿಯೂ ಸುದ್ದಿ ಪ್ರಸಾರವಾಗಿದ್ದವು. ವಿಷಯ ತಿಳಿಯುತ್ತಿದ್ದಂತೆ ಭಾನುವಾರ ರಾತ್ರಿ ಮಠಕ್ಕೆ ವಿದ್ಯಾರ್ಥಿಗಳು ವಾಪಸ್‌ ಆಗಿದ್ದಾರೆ. ಪೋಷಕರು, ಸಿಬ್ಬಂದಿ ವಿಚಾರಿಸಿದಾಗ, ಸ್ನೇಹಿತರೊಬ್ಬರ ಮನೆಗೆ ತೆರಳಿದ್ದಾಗಿ ಹೇಳಿದ್ದಾರೆ.

ಏನಿದು ನಾಪತ್ತೆ ಪ್ರಕರಣ?
ನವೆಂಬರ್‌ 8ರ ರಾತ್ರಿ ದೇಗುಲ ಮಠದ ನಿರ್ವಾಣಸ್ವಾಮಿ ಹಾಸ್ಟೆಲ್‌ನಲ್ಲಿ ಊಟ ಮುಗಿಸಿದ ಮೂವರು ವಿದ್ಯಾರ್ಥಿಗಳು ನಂತರ ಎಲ್ಲೂ ಕಂಡಿಲ್ಲ. ತುಂಬಾ ಸಮಯದ ನಂತರ ಪತ್ತೆಯಾಗದೇ ಇದ್ದಾಗ ಮಠದ ಸಿಬ್ಬಂದಿ ಮಹದೇವಸ್ವಾಮಿ ಎಂಬುವವರು ಕನಕಪುರ ನಗರ ಠಾಣೆಗೆ ದೂರು ನೀಡಿದ್ದರು. ನವೆಂಬರ್‌ 8ರಂದು ಬಾಲಕರು ನಾಪತ್ತೆಯಾಗಿದ್ದು, ನವೆಂಬರ್ 11 ರಂದು ಕಾಣೆಯಾಗಿರುವ ಸಂಬಂಧ ದೂರು ದಾಖಲಾಗಿತ್ತು. ಬಾಲಕರಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿರುವಾಗಲೇ ನವೆಂಬರ್‌ 13ರಂದು ಬಾಲಕರು ವಾಪಸ್‌ ಆಗಿದ್ದಾರೆ. ಪೋಷಕರು ಇದರಿಂದ ನಿಟ್ಟುಸಿರು ಬಿಟ್ಟಿದ್ದಾರೆ.

ಇದನ್ನೂ ಓದಿ | Children’s Day | ಮಕ್ಕಳು ನೋಡಲೇಬೇಕಾದ ಅತ್ಯುತ್ತಮ ಮಕ್ಕಳ ಚಿತ್ರಗಳಿವು!

Exit mobile version