Site icon Vistara News

Modi In Karnataka: ಮೈಸೂರಿನಲ್ಲಿ ರೋಡ್‌ ಶೋ ವೇಳೆ ಮೊಬೈಲ್‌ ಎಸೆತ; ವಾಪಸ್‌ ಕೊಡಿ ಎಂದು ಮೋದಿ ಸೂಚನೆ

Mobile Thrown During Mysore Road Show; Modi said give it back

Mobile Thrown During Mysore Road Show; Modi said give it back

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿನಲ್ಲಿ (Modi In Karnataka) ಭರ್ಜರಿ ರೋಡ್‌ ಶೋ ನಡೆಸುತ್ತಿದ್ದಾಗ ಮೊಬೈಲ್‌ ಎಸೆದ ಪ್ರಕರಣವೀಗ ಭಾರಿ ಸುದ್ದಿಯಾಗಿದೆ. ಮೋದಿ ಅವರ ವಾಹನಕ್ಕೆ ಮೊಬೈಲ್‌ ಎಸೆದಿದ್ದು ಭದ್ರತಾ ವೈಫಲ್ಯ ಎಂದು ಹೇಳುತ್ತಿರುವ ಬೆನ್ನಲ್ಲೇ, ಮೊಬೈಲ್‌ಅನ್ನು ಎಸೆದವರಿಗೆ ವಾಪಸ್‌ ಕೊಡಿ ಎಂಬುದಾಗಿ ಮೋದಿ ಹೇಳಿದ್ದಾರೆ. ಮೊಬೈಲ್‌ ಎಸೆಯುತ್ತಲೇ ಅದನ್ನು ಮೋದಿ ಗಮನಿಸಿದ್ದಾರೆ. ಬಳಿಕ ಅಲ್ಲಿರುವ ಸಿಬ್ಬಂದಿಗೆ, ಮೊಬೈಲ್‌ ವಾಪಸ್‌ ಕೊಡಿ ಎಂಬುದಾಗಿ ಸನ್ನೆ ಮಾಡಿದ್ದಾರೆ.

ಮೋದಿ ಸನ್ನೆ ಮಾಡಿದ ವಿಡಿಯೊ ಇಲ್ಲಿದೆ

ನರೇಂದ್ರ ಮೋದಿ ಅವರು ರೋಡ್‌ ಶೋ ವೇಳೆ ಜನರತ್ತ ಕೈಬೀಸುತ್ತಿದ್ದರು. ಹಾಗೆಯೇ, ವಾಹನವು ನಿಧಾನವಾಗಿ ಚಲಿಸುತ್ತಿತ್ತು. ಜನ ಮೋದಿ ಅವರ ಮೇಲೆ ರಾಶಿ ರಾಶಿ ಹೂ ಎಸೆಯುತ್ತಿದ್ದರು. ಇದೇ ವೇಳೆ ಮೋದಿ ಅವರತ್ತ ಗುಂಪಿನಲ್ಲಿದ್ದವರು ಮೊಬೈಲ್‌ ಎಸೆದಿದ್ದಾರೆ. ಮೊಬೈಲ್‌ ಮೋದಿ ಸೇರಿ ಯಾರಿಗೂ ತಾಗದೆ, ವಾಹನಕ್ಕೆ ಬಡಿದು ಕೆಳಗೆ ಬಿದ್ದಿದೆ. ಮೊಬೈಲ್‌ ಬೀಳುವುದನ್ನು ಮೋದಿ ಅವರು ಕೂಡ ಗಮನಿಸಿದ್ದರು.

ಮೋದಿ ರೋಡ್‌ ಶೋ ವೇಳೆ ಮೊಬೈಲ್‌ ಎಸೆದಿರುವುದು ಭದ್ರತಾ ವೈಫಲ್ಯ ಎಂದೇ ಹೇಳಲಾಗುತ್ತಿದೆ. ಆದಾಗ್ಯೂ, ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೋದಿ ರೋಡ್‌ ಶೋ ಸಾಗುವಾಗ ಹೂವುಗಳನ್ನೇ ಎಸೆಯುವ ಭರದಲ್ಲಿ, ಮೊಬೈಲ್‌ ಎಸೆದಿರುವ ಸಾಧ್ಯತೆಯೂ ಇದೆ ಎಂದು ತಿಳಿದುಬಂದಿದೆ.

ಮೊಬೈಲ್‌ ಎಸೆದ ವಿಡಿಯೊ ಹೀಗಿದೆ

ಇದನ್ನೂ ಓದಿ: Modi In Karnataka: ಮೈಸೂರಿನಲ್ಲಿ ರೋಡ್‌ ಶೋ ವೇಳೆ ಮೋದಿ ವಾಹನದ ಮೇಲೆ ಮೊಬೈಲ್‌ ಎಸೆತ, ಇಲ್ಲಿದೆ ವಿಡಿಯೊ

ಇನ್ನು ಪ್ರಧಾನಿಯವರ ರೋಡ್‌ ಶೋ ಸಾಗುವ ರಸ್ತೆಯುದಕ್ಕೂ ಸಾವಿರಾರು ಜನ ನೆರೆದಿದ್ದು, ಮೋದಿ, ಮೋದಿ ಎಂಬ ಘೋಷಣೆ ಕೂಗಿದ್ದಾರೆ. ಇಡೀ ನಗರವೇ ಕೇಸರಿಮಯವಾಗಿದ್ದು, ಮೋದಿ ರೋಡ್‌ ಶೋಗೆ ಸಾಂಸ್ಕೃತಿಕ ಕಲಾ ತಂಡಗಳು ಕೂಡ ಮೆರುಗು ನೀಡಿದವು. ಬಿಜೆಪಿ ಕಾರ್ಯಕರ್ತರು ಪಕ್ಷದ ಬಾವುಟ ಹಿಡಿದು ಸಾಗಿದರು.

Exit mobile version