ಬೆಂಗಳೂರು: ಜೂನ್ 21 ರಂದು ನಡೆಯುವ ಅಂತರಾಷ್ಟ್ರೀಯ ಯೋಗ ದಿನದಂದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಪ್ರದಾನಿ ಮೋದಿ ಅವರು ಭಾಗಿಯಾಗಲಿದ್ದಾರೆ. ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಆಗಮವನ್ನು ಸಂಸದ ಪ್ರತಾಪ್ ಸಿಂಹ ಖಚಿತ ಪಡಿಸಿದ್ದಾರೆ.
ಇದನ್ನೂ ಓದಿ | 5-12 ವರ್ಷ ಮಕ್ಕಳಿಗೆ ಲಸಿಕೆ: ಶಾಲೆಗಳಲ್ಲಿ ವಿಶೇಷ ಅಭಿಯಾನಕ್ಕೆ ಮೋದಿ ಕರೆ
ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ ಯೋಗದಿನದಂದು ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬರುವಂತೆ ಅವರೇ ಖುದ್ದಾಗಿ ದೆಹಲಿಗೆ ತೆರಳಿ ಆಹ್ವಾನಿಸಿದ್ದರು. ಕೇಂದ್ರದ ಆಯುಷ್ ತಂಡವೂ ಏ 29 ರಂದು ಮೈಸೂರಿಗೆ ಭೇಟಿ ನೀಡಿ ಅಗತ್ಯ ವ್ಯವಸ್ಥೆಗಳನ್ನು ಪರಿಶೀಲಿಸಿತ್ತು. ಈಗ ಮೈಸೂರಿಗೆ ಪ್ರಧಾನಿ ಮೋದಿ ಅವರು ಬರುವುದು ಖಚಿತಗೊಂಡಿದೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್‌ಗೆ ಪ್ರಧಾನಿ ಕಾರ್ಯಾಲಯ ಪತ್ರ ಬರೆದಿದೆ.
2015 ರಿಂದ ಜೂನ್ 21 ರಂದು ಆಯುಷ್ ಸಚಿವಾಲಯ ಆಚರಿಸಿಕೊಂಡು ಬರುತ್ತಿದೆ. ಮೋದಿ ಅವರು ಪ್ರತಿವರ್ಷ ಒಂದೊಂದು ರಾಜ್ಯಕ್ಕೆ ತೆರಳಿ ಯೋಗಾಸನ ಮತ್ತು ಭಂಗಿಗಳನ್ನು ಮಾಡುವ ಮೂಲಕ ಯೋಗದ ಮಹತ್ವವನ್ನು ಸಾರುವ ಕೆಲಸ ಮಾಡುತ್ತಿದ್ದಾರೆ.
ಈ ಹಿಂದೆ 2015 ರಲ್ಲಿ ದೆಹಲಿಯ ರಾಜಪಥದಲ್ಲಿ , 2016 ರಲ್ಲಿ ಚಂಡೀಗಢ, 2018ರಲ್ಲಿ ಉತ್ತರಖಂಡದ ಡೆಹ್ರಾಡೂನ್, 2019ರಲ್ಲಿ ಜಾರ್ಖಂಡ್‌ನ ರಾಂಚಿಯಲ್ಲಿ ಯೋಗ ದಿನಾಚರಣೆ ಪ್ರಧಾನಿ ಅವರ ಸಮ್ಮುಖದಲ್ಲಿ ನಡೆದಿತ್ತು.
ಯೋಗ ಫೆಡರೇಶನ್, ಅಸೋಸಿಯೇಷನ್ ಹಾಗೂ ಎಲ್ಲ ಸಂಸ್ಥೆಗಳು ಮೈಸೂರಿನಲ್ಲಿ ಯೋಗ ದಿನಾಚರಣೆ ನಡೆಸಲು ಸಿದ್ದತೆ ನಡೆಸುತ್ತಿದೆ. ಆಯುಷ್ ಸಚಿವಾಲಯವು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಮೈಸೂರಿನ ರೇಸ್ ಕೋರ್ಸ್ ಆವರಣದಲ್ಲಿ ಆಚರಿಸಲು ಭರ್ಜರಿ ಸಿದ್ಧತೆಮಾಡಲಾಗುತ್ತಿದೆ. ಎರಡು ಲಕ್ಷ ಜನರನ್ನು ಸೇರಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ.
ಇದನ್ನೂ ಓದಿ | ಮುಂದಿನ ಅವಧಿಗೂ ನಾನೇ ಪ್ರಧಾನಿಯೆಂದು ಪರೋಕ್ಷವಾಗಿ ಹೇಳಿದರಾ ನರೇಂದ್ರ ಮೋದಿ?