Site icon Vistara News

Modi in Karnataka : ಬೆಂಗಳೂರಿನಲ್ಲಿ ಮೋದಿ ರೋಡ್‌ ಶೋ; ಜನರ ಸಂಭ್ರಮದ ಕಲರ್‌ಫುಲ್‌ ಚಿತ್ರಗಳು ಇಲ್ಲಿವೆ

modi-in-karnataka: colorful photogallery of Modi mega road Show in Bangalore

colorful photogallery of Modi mega road Show in Bangalore

ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ (ಮೇ 6) ಬೆಂಗಳೂರಿನಲ್ಲಿ 26 ಕಿ.ಮೀಟರ್‌ಗಳ ಬೃಹತ್‌ ರೋಡ್‌ ಶೋ ನಡೆಸಿದರು. ವಿಧಾನಸಭಾ ಚುನಾವಣೆಯ 13 ಕ್ಷೇತ್ರಗಳಲ್ಲಿ ಸಂಚರಿಸಿದ ಮೋದಿ ಅವರನ್ನು ನೋಡಲು ರಸ್ತೆಯ ಇಕ್ಕೆಲಗಳಲ್ಲಿ ಲಕ್ಷಾಂತರ ಜನರು ನಿಂತಿದ್ದರು. ಬೆಂಗಳೂರಿನ ಜೆ.ಪಿ. ನಗರದಿಂದ ಮಲ್ಲೇಶ್ವರದ ವರೆಗೆ ನಡೆದ ಈ ರೋಡ್‌ ಶೋನ ಕಲರ್‌ಫುಲ್‌ ಚಿತ್ರಗಳ ಸಂಚಯ ಇಲ್ಲಿದೆ.

ಪ್ರಧಾನಿ ಮೋದಿಯತ್ತ ಹೂಮಳೆಗರೆಯುತ್ತಿರುವ ದೃಶ್ಯವಿದು. ರಸ್ತೆಯ ಇಕ್ಕೆಲಗಳಲ್ಲಿ ಲಕ್ಷಾಂತರ ಜನ ನಿಂತಿದ್ದರು.
ಅಭಿಮಾನಿಗಳು ಎಸೆದ ಹೂವಿನ ಎಸಳುಗಳಿಂದ ಮುಚ್ಚಿಹೋದ ವಾಹನ, ರಸ್ತೆ
ಬೆಂಗಳೂರಿನಲ್ಲಿ ಲಕ್ಷಾಂತರ ಜನರ ನಡುವೆ ಸಾಗಿದ ಮೋದಿ
ಬೆಂಗಳೂರಿನಲ್ಲಿ ನಡೆದ ಮೋದಿ ರೋಡ್‌ ಶೋ ನಡುವೆ ಜನರ ಉತ್ಸಾಹ
ಹೂವಿನ ಅಬ್ಬರದಲ್ಲಿ ಮೋದಿ ಅಭಿಮಾನಿಗಳೇ ಕಲರ್‌ಫುಲ್‌ ಆದ ಕ್ಷಣ
ಪ್ರಧಾನಿ ನರೇಂದ್ರ ಮೋದಿ ಅವರ ಸ್ವಾಗತಕ್ಕಾಗಿ ಸಜ್ಜಾಗಿ ನಿಂತಿರುವ ಪುಟಾಣಿಗಳ ಕುತೂಹಲ, ಒಬ್ಬಾಕೆ ಬಜರಂಗಬಲಿ ಬಾವುಟ ಹಿಡಿದಿದ್ದಾಳೆ
ಮೋಡಿ ರೋಡ್‌ ಶೋದಲ್ಲಿ ಆಂಜನೇಯನ ಮುಖವಾಡ ಧರಿಸಿ ಕಾಣಿಸಿಕೊಂಡ ಮಕ್ಕಳು
ಮೋದಿಯನ್ನು ನೋಡಲು ಬಂದ ಪುಟ್ಟ ಮಗುವಿನ ಸಂಭ್ರಮ
ಮೋದಿ ಎಂದು ಬರೆದುಕೊಂಡು ಬಂದ ಪುಟ್ಟ ಬಾಲಕನ ಖುಷಿ
ಆಪ್ತ ಬಂಧುವಿನ ಹೆಗಲ ಮೇಲೆ ಕುಳಿತು ರಾಷ್ಟ್ರಬಂಧುವನ್ನು ವೀಕ್ಷಿಸುತ್ತಿರುವ ಪುಟ್ಟ ಬಾಲಕಿ
ಪ್ರಧಾನಿ ನರೇಂದ್ರ ಮೋದಿ ಅವರನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯುವ ಸಂಭ್ರಮ
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೂವಿನ ಮಳೆಗರೆಯುವ ಸಂಭ್ರಮದಲ್ಲಿ ಜನರು
ಮೋದಿ ಮೇಲಿನ ಅಭಿಮಾನಕ್ಕೆ ವಯಸ್ಸಿನ ಲೆಕ್ಕವಿಲ್ಲ.. ಕಿರಿಯರಿಂದ ಹಿರಿಯರವರೆಗೆ ಎಲ್ಲರಿಗೂ ಸಂಭ್ರಮ
ಮನೆಯ ಮಾಡಿನ ಮೇಲಿನಿಂದಲೇ ಮೋದಿ ವೀಕ್ಷಣೆಯ ಖುಷಿ
ಮರ ಹತ್ತಿ ಮೋದಿಯನ್ನು ನೋಡುವ ತವಕ, ಪ್ರಧಾನಿಯೆಡೆಗೆ ಕೈ ಬೀಸುವ ಕಾತರ
ಬಜರಂಗ ದಳ ನಿಷೇಧ ಪ್ರಸ್ತಾಪದ ಹಿನ್ನೆಲೆಯಲ್ಲಿ ಮೋದಿ ರೋಡ್‌ ಶೋನಲ್ಲಿ ಬಜರಂಗ ಬಲಿ ಬಾವುಟಗಳ ಅಬ್ಬರ

ಮೋದಿ ರೋಡ್‌ ಶೋ ವೇಳೆ ಕಾಡುಮಲ್ಲೇಶ್ವರ ದೇವಸ್ಥಾನದ ಬಳಿ ಯಲ್ಲಮ್ಮ ದೇವರನ್ನು ಹೊತ್ತು ಬಂದ ಮಹಿಳೆಯಿಂದ ಪ್ರಧಾನಿಗೆ ಆಶೀರ್ವಾದ

ಬಜರಂಗ ದಳ ನಿಷೇಧ ಪ್ರಸ್ತಾಪಕ್ಕೆ ಪ್ರತಿಯಾಗಿ ಆಂಜನೇಯನ ವೇಷ ಧರಿಸಿ ಬಂದ ಮೋದಿ ಅಭಿಮಾನಿ
ಈ ಸಲ ಕಪ್‌ ನಮ್ದೇ ಅನ್ನುವಂತೆ ಈ ಸಲ ಸರ್ಕಾರ ನಮ್ದೇ ಎಂದು ಬೋರ್ಡ್‌ ಬರೆಸಿಕೊಂಡು ಸಂಭ್ರಮಿಸಿದ ಬಿಜೆಪಿ ಕಾರ್ಯಕರ್ತ
ರೋಡ್‌ ಶೋ ವೇಳೆ ಜನರತ್ತ ಮುಗಿದ ಮೋದಿ ಕೈಗಳು ಏಕಕಾಲದಲ್ಲಿ ಆಂಜಯೇನನ್ನೂ ನಮಿಸಿದವು.
Exit mobile version