Site icon Vistara News

Modi in Karnataka : ಎಲೆಕ್ಟ್ರಿಕ್‌ ಐಟಮ್‌ಗಳ ಜತೆ ಮೋದಿ ರೋಡ್‌ ಶೋ ನೋಡಲು ಬಂದ ವ್ಯಕ್ತಿಯ ವಿಚಾರಣೆ

Modi Road Show in Bangalore

Modi Road Show in Bangalore

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (prime Minister Narendra Modi) ಅವರು ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ನಡೆಸುತ್ತಿರುವ ರೋಡ್‌ ಶೋ (Modi Road Show) ವೇಳೆ ಭಾರಿ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಶನಿವಾರದ ರೋಡ್‌ ಶೋ ವೇಳೆ ಮೂರು ಬಾರಿ ಮೊಬೈಲ್‌ಗಳು ತೂರಿ ಬಂದ ಹಿನ್ನೆಲೆಯಲ್ಲಿ ಭಾನುವಾರ ಭದ್ರತೆ, ವಿಚಕ್ಷಣೆಯನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ.

ಈ ನಡುವೆ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ತಡೆ ಹಿಡಿದು ತಪಾಸಣೆ ನಡೆಸಿದಾಗ ಆತನ ಕೈಯಲ್ಲಿದ್ದ ಬ್ಯಾಗ್‌ನಲ್ಲಿ ಎಲೆಕ್ಟ್ರಿಕಲ್‌ ಐಟಂಗಳು ಇದ್ದಿದ್ದು ಕಂಡುಬಂದಿದೆ. ಬ್ಯಾಗ್‌ ಒಂದನ್ನು ಹಿಡಿದುಕೊಂಡು ಅನುಮಾನಾಸ್ಪದವಾಗಿ ಕಂಡುಬಂದ ಹಿನ್ನೆಲೆಯಲ್ಲಿ ಪೊಲೀಸರಿಗೆ ಅನುಮಾನ ಬಂದು ವಿಚಾರಣೆ ನಡೆಸಿದರು.

ಬೈಕ್‌ನಲ್ಲಿ ಬಂದಿದ್ದ ಈ ವ್ಯಕ್ತಿ ಜತೆಗೆ ಒಂದು ಬ್ಯಾಗ್‌ ಕೂಡಾ ತಂದಿದ್ದ. ಆತನ ಬಗ್ಗೆ ಸಂಶಯ ತಾಳಿದ ಪೊಲೀಸರು ಕೂಡಲೇ ತಡೆ ಹಿಡಿದು ತಪಾಸಣೆ ನಡೆಸಿದರು. ಆತನ ಬ್ಯಾಗ್‌ನಲ್ಲಿ ಕೆಲವು ಎಲೆಕ್ಟ್ರಿಕಲ್ ವಸ್ತುಗಳು, ಮಷೀನ್ ಪತ್ತೆಯಾಗಿದೆ.

ಪರಿಶೀಲನೆ ನಡೆಸಿದ ಪೊಲೀಸರು ಸ್ಥಳದಲ್ಲೇ ವ್ಯಕ್ತಿಯನ್ನು ವಿಚಾರಣೆ ನಡೆಸಿದರು. ಈ ವೇಳೆ ಆತ ಎಲೆಕ್ಟ್ರಿಷಿಯನ್, ಕೆಲಸಕ್ಕೆ ಹೋಗೋ‌ ಮಧ್ಯೆ ರೋಡ್ ಶೋ ನೋಡಲು ನಿಂತಿದ್ದ ಎನ್ನುವುದು ಸ್ಪಷ್ಟವಾಯಿತು. ವ್ಯಕ್ತಿಯನ್ನು ವಿಚಾರಣೆ ಮಾಡಿ ಕಳಿಸಿದ್ದಾರೆ ಪೊಲೀಸರು.

ಇದನ್ನೂ ಓದಿ : Modi in Karnataka : ಬೆಂಗಳೂರಿನಲ್ಲಿ ಮೋದಿ ರೋಡ್‌ ಶೋ; ಜನರ ಸಂಭ್ರಮದ ಕಲರ್‌ಫುಲ್‌ ಚಿತ್ರಗಳು ಇಲ್ಲಿವೆ

ಎರಡನೇ ದಿನದ ಮೋದಿ ಮೇಗಾ ರೋಡ್ ಶೋ ನ್ಯೂ ತಿಪ್ಪಸಂದ್ರದ ಕೆಂಪೇಗೌಡ ವೃತ್ತದಿಂದ ರೋಡ್ ಶೋ ಆರಂಭ.

ಕೆಂಪೇಗೌಡರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದ ಪಿಎಂ ಮೋದಿ.

ಬಳಿಕ ತೆರದ ವಾಹನ ಹೇರಿದ ಮೋದಿ.

ಜನರತ್ತ ಕೈ ಬೀಸುತ್ತಾ ಸಾಗುತ್ತಿರುವ ಮೋದಿ..

ಮೋದಿ ಜೊತೆಗೆ ರೋಡ್ ಶೋ ದಲ್ಲಿ ಭಾಗಿಯಾದ ಸಂಸದ ರಾಜೀವ ಚಂದ್ರಶೇಖರ್, ಪಿಸಿ ಮೋಹನ್

ಮುಗಿಲು ಮುಟ್ಟಿದ ಸಾರ್ವಜನಿಕರ ಜಯಘೋಷ

ಮೋದಿ ಮೋದಿ ಎಂದು ಘೋಷಣೆ ಕೂಗಿದ ಜನ

ಮೋದಿ ಮನೆ‌ಮಗ ಎಂದು ಪ್ಲೇ ಕಾರ್ಡ್ ಪ್ರದರ್ಶನ ಮಾಡಿದ ಜನ

ಜೈ ಶ್ರೀರಾಮ ಎಂದು ಘೋಷಣೆ

Exit mobile version