ವಿಜಯಪುರ/ಬೆಳಗಾವಿ: ರಾಜ್ಯದಲ್ಲಿ ವಿಧಾನಸಭಾ ಚುನಾವಣಾ (Karnataka Election 2023) ಪ್ರಚಾರದಲ್ಲಿ ನಿರತರಾಗಿರುವ ಪ್ರಧಾನಿ ನರೇಂದ್ರ ಮೋದಿ (Modi in Karnataka) ಅವರು ವಿಜಯಪುರದಲ್ಲಿ ಮಧ್ಯಾಹ್ನ ಜವಾರಿ ಶೈಲಿಯ ಊಟ ಮಾಡಿದರು. ಬೆಳಗಾವಿಯಲ್ಲಿ ಅವರಿಗೆ ಬೆಲ್ಲದ ಪ್ರತಿಮೆಯನ್ನು ನೀಡಲಾಗಿದೆ.
ವಿಜಯಪುರ ನಗರದ ಸೈನಿಕ ಶಾಲೆ ಆವರಣದಲ್ಲಿ ನಡೆದ ಚುನಾವಣಾ ಸಮಾವೇಶದ ಬಳಿಕ ಮಧ್ಯಾಹ್ನದ ಭೋಜನ ಸವಿದಿದ್ದಾರೆ ಪ್ರಧಾನಿ ಮೋದಿ. ಫುಲ್ಕಾ ದಾಲ್ ಜೊತೆ ಇಲ್ಲಿನ ಶೇಂಗಾ ಹೊಳಿಗೆ, ಜೋಳದ ರೊಟ್ಟಿ, ಎಣ್ಣೆಬದನೆಕಾಯಿ ಇನ್ನಿತರ ಖಾದ್ಯಗಳನ್ನು ಅವರಿಗಾಗಿ ವ್ಯವಸ್ಥೆ ಮಾಡಲಾಗಿತ್ತು.
ಮೋದಿ ಅವರ ಜೊತೆ ಭೋಜನ ಮಾಡಲು ಆಯ್ದ ಕೆಲ ಜನರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಈ ನಡುವೆ ಸ್ಪೂರ್ತಿ ರೆಸಾರ್ಟ್ ನಿಂದ ಊಟವನ್ನು ಹೊತ್ತು ತಂದಿದ್ದ ವಾಹನವನ್ನು ಸೂಕ್ತ ಪಾಸ್ ಇಲ್ಲದ ಕಾರಣ ಒಳಗೆ ಬಿಡದೆ ಸ್ವಲ್ಪ ಸಮಯ ಸಮಸ್ಯೆ ಆಯಿತು.
ಮೋದಿ ಅವರಿಗೆ ಬೆಲ್ಲದ ಪ್ರತಿಮೆ
ವಿಜಯಪುರದಿಂದ ಕುಡಚಿಗೆ ತೆರಳಿದ ಬಳಿಕ ಅಲ್ಲಿಂದ ಬೆಳಗಾವಿಗೆ ತಲುಪುವ ಪ್ರಧಾನಿ ಮೋದಿ ಅವರಿಗೆ ವಿಶೇಷ ಗಿಫ್ಟ್ ಕಾಗಿದೆ. ವಿಮಾನ ನಿಲ್ದಾಣದಲ್ಲಿ ಅವರನ್ನು ಸ್ವಾಗತಿಸುವ ವೇಳೆ ಇದನ್ನು ನೀಡಲಾಗುತ್ತದೆ.
ವಿಶೇಷ ಗಿಫ್ಟ್ ಏನೆಂದರೆ ಇದು ಕಲಾವಿದನ ಕೈಚಳಕ, ಬೆಲ್ಲದಲ್ಲಿ ಅರಳಿರುವ ನರೇಂದ್ರ ಮೋದಿಯ ಪ್ರತಿಮೆ. ಕುಡಚಿ ಶಾಸಕ ಪಿ.ರಾಜೀವ್ ಅವರು ಬೆಲ್ಲದಲ್ಲಿ ಕೆತ್ತನೆ ಮಾಡಲಾದ ಮೋದಿ ಅವರ ಪ್ರತಿರೂಪವನ್ನು ಗಿಫ್ಟ್ ಆಗಿ ನೀಡಲಿದ್ದಾರೆ.
ಸುಮಾರು ಎಂಟು ಕೆ.ಜಿ ಸಾವಯವ ಬೆಲ್ಲದಲ್ಲಿ ಮೋದಿ ಪ್ರತಿರೂಪ ಕೆತ್ತನೆ ಮಾಡಲಾಗಿದೆ. ರಾಯಬಾಗದ ಕಲಾವಿದ ಬಾಬುರಾವ್ ನಿಡೋಣಿ ಸಿದ್ಧಪಡಿಸಿರುವ ಕಲಾಕೃತಿ ಇದಾಗಿದೆ. 7 ದಿನಗಳ ಸತತ ಪ್ರಯತ್ನ ಮೂಲಕ ಕಲಾಕೃತಿಯನ್ನು ತಯಾರಿಸಲಾಗಿದೆ.
ಇದನ್ನೂ ಓದಿ : Modi in Karnataka : ಕಾಂಗ್ರೆಸ್ ಕಾಲದಲ್ಲಿ ಇದ್ದಿದ್ದು 85% ಸರ್ಕಾರ; 40% ಕಮಿಷನ್‌ಗೆ ಮೋದಿ ತಿರುಗೇಟು