Site icon Vistara News

Modi in Karnataka : ಇಂದು ಬಳ್ಳಾರಿ, ತುಮಕೂರಿನಲ್ಲಿ ಮೋದಿ ಹವಾ, ಮೇ 6, 7 ಬೆಂಗಳೂರಿನಲ್ಲಿ ರೋಡ್‌ ಶೋ

Narendra modi

modi-in-karnataka: Modi hawa in Bellary and tumkur today

ಬೆಂಗಳೂರು: ಈಗಾಗಲೇ ಎರಡು ಹಂತಗಳಲ್ಲಿ ನಾಲ್ಕು ದಿನಗಳ ಕಾಲ ರಾಜ್ಯದಲ್ಲಿ ಚುನಾವಣಾ ಪ್ರಚಾರ (Karnataka Election 2023) ನಡೆಸಿರುವ ಪ್ರಧಾನಿ ನರೇಂದ್ರ ಮೋದಿ (Prime minister Narendra Modi) ಅವರು ಇದೀಗ ಮೂರನೇ ಹಂತದ ಮೂರು ದಿನಗಳ ಪ್ರವಾಸಕ್ಕಾಗಿ ಶುಕ್ರವಾರ (ಮೇ 5) ಪ್ರವೇಶ ಪಡೆಯಲಿದ್ದಾರೆ. ಶುಕ್ರವಾರ ಬಳ್ಳಾರಿ ಮತ್ತು ತುಮಕೂರು ಗ್ರಾಮಾಂತರದಲ್ಲಿ ನಡೆಯುವ ಬೃಹತ್‌ ಸಮಾವೇಶಗಳಲ್ಲಿ ಭಾಗವಹಿಸಲಿದ್ದಾರೆ.

ಹೇಗಿದೆ ಟೂರ್‌ ಪ್ರೋಗ್ರಾಂ?

ಶುಕ್ರವಾರ ಬೆಳಗ್ಗೆ 11.05ಕ್ಕೆ ದಿಲ್ಲಿ ವಿಮಾನ ನಿಲ್ದಾಣದಿಂದ ಹೊರಡುವ ಮೋದಿ ಅವರು ಮಧ್ಯಾಹ್ನ 1.35ಕ್ಕೆ ಚಿತ್ರದುರ್ಗದ ಚಳ್ಳಕೆರೆ ಕುದಾಪುರದಲ್ಲಿರುವ ಡಿಆರ್‌ಡಿಒ ವಿಮಾನ ನಿಲ್ದಾಣ ತಲುಪಲಿದ್ದಾರೆ. ಅಲ್ಲಿಂದ 1.40ಕ್ಕೆ ಹೆಲಿಕಾಪ್ಟರ್‌ ಮೂಲಕ ಹೊರಟು ಮಧ್ಯಾಹ್ನ 2.20ಕ್ಕೆ ಬಳ್ಳಾರಿ ಹೆಲಿಪ್ಯಾಡ್‌ಗೆ ತಲುಪುತ್ತಾರೆ.

ಮಧ್ಯಾಹ್ನ 2.20ರಿಂದ 3.20ರವರೆಗೆ ಬಳ್ಳಾರಿಯಲ್ಲಿ ನಡೆಯುವ ಸಮಾವೇಶದಲ್ಲಿ ಭಾಗವಹಿಸುವ ಮೋದಿ ಅವರು, 3.30ಕ್ಕೆ ಬಳ್ಳಾರಿ ಹೆಲಿಪ್ಯಾಡ್‌ ತಲುಪುತ್ತಾರೆ. ಅಲ್ಲಿಂದ ಹೆಲಿಕಾಪ್ಟರ್‌ ಮೂಲಕ ಸಂಜೆ 4.45ಕ್ಕೆ ತುಮಕೂರು ಹೆಲಿಪ್ಯಾಡ್‌ ತಲುಪುವರು.

ಸಂಜೆ 5.00ರಿಂದ 5.50ರವರೆಗೆ ತುಮಕೂರು ಗ್ರಾಮಾಂತರದಲ್ಲಿ ಸಮಾವೇಶ ನಡೆಯಲಿದೆ. ಇಲ್ಲಿನ ಕಾರ್ಯಕ್ರಮ ಮುಗಿಸಿ ಅವರು, ಸಂಜೆ 6 ಗಂಟೆಗೆ ತುಮಕೂರು ಹೆಲಿಪ್ಯಾಡ್‌ನಿಂದ ಹೆಲಿಕಾಪ್ಟರ್‌ ಮೂಲಕ ಬೆಂಗಳೂರಿನ ಎಚ್‌ಎಎಲ್‌ಗೆ ತೆರಳುತ್ತಾರೆ. ಸಂಜೆ 6.40ಕ್ಕೆ ಎಚ್‌ಎಎಲ್‌ನಲ್ಲಿ ಇಳಿಯುವ ಅವರು ಮಾರ್ಗ ಮೂಲಕ ಸಾಗಿ 6.55ಕ್ಕೆ ರಾಜಭವನ ತಲುಪುತ್ತಾರೆ.

ಬೆಂಗಳೂರಿನ ರೋಡ್‌ ಶೋದಲ್ಲಿ ಬದಲಾವಣೆ

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ (Karnataka Election 2023) ಕಣದ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಕ್ಕಾಗಿ ರಾಜಧಾನಿಯಲ್ಲಿ ನಡೆಯಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರ ರೋಡ್‌ ಶೋದಲ್ಲಿ ಮತ್ತೆ ಅದಲು ಬದಲು ಮಾಡಲಾಗಿದೆ.

ಭಾನುವಾರ ಬೆಳಗ್ಗೆ ನಿಗದಿಯಾಗಿದ್ದ ರೋಡ್ ಶೋ ಶನಿವಾರಕ್ಕೆ ಹಾಗೂ ಶನಿವಾರ ಬೆಳಗ್ಗೆ ನಿಗದಿಯಾಗಿದ್ದ ರೋಡ್ ಶೋ ಭಾನುವಾರಕ್ಕೆ ನಿಗದಿ ಮಾಡಲಾಗಿದೆ. ನೀಟ್ ಪರೀಕ್ಷೆ ನಡೆಯಲಿರುವ ಹಿನ್ನೆಲೆಯಲ್ಲಿ ಪ್ರಧಾನಿ ಕಚೇರಿ ನಿರ್ದೇಶನದಂತೆ ರೋಡ್ ಶೋ ಬದಲಾವಣೆ ಮಾಡಲಾಗಿದೆ.

ಶನಿವಾರ ಬೆಳಗ್ಗೆ ಎಲ್ಲಿ ರೋಡ್‌ ಶೋ?

ಶನಿವಾರ ಬೆಳಗ್ಗೆ 10 ಗಂಟೆಯಿಂದ 12.30ರವರೆಗೆ ರೋಡ್ ಶೋ ನಡೆಯಲಿದೆ. ಜೆ.ಪಿ. ನಗರ ಬ್ರಿಗೇಡ್ ಮಿಲೇನಿಯಂನಿಂದ ಮಲ್ಲೇಶ್ವರಂ ಸರ್ಕಲ್ ಮಾರಮ್ಮ ಟೆಂಪಲ್‌ವರೆಗೆ ರೋಡ್ ಶೋ ಪ್ರಯಾಣಿಸಲಿದೆ.

ಭಾನುವಾರ ಬೆಳಗ್ಗೆ ಎಲ್ಲಿ ರೋಡ್‌ ಶೋ

ಭಾನುವಾರ ಬೆಳಗ್ಗೆ 10 ಗಂಟೆಯಿಂದ 11.30ರವರೆಗೆ ಸುರಂಜನ್ ದಾಸ್ ಸರ್ಕಲ್‌ನಿಂದ ಟ್ರಿನಿಟಿ ಸರ್ಕಲ್‌ವರೆಗೆ ರೋಡ್‌ ಶೋ ನಡೆಯಲಿದೆ. ಭಾನುವಾರ ನಡೆಯುವ ರೋಡ್ ಶೋದ ಉದ್ದವನ್ನು 4 ಕಿ.ಮೀ‌. ಕಡಿತಗೊಳಿಸಲಾಗಿದೆ. ಈ ಮೊದಲು ಎರಡೂ ದಿನ ಬೆಳಗ್ಗೆ 10ರಿಂದ 1.30ರವರೆಗೆ ರೋಡ್‌ ಶೋ ನಿಗದಿಯಾಗಿತ್ತು.

ಇದನ್ನೂ ಓದಿ : Modi in Karnataka: ಮೋದಿ ರೋಡ್‌ ಶೋಗೆ ಕಾಂಗ್ರೆಸ್‌ ಕ್ಯಾತೆ; ಅನುಮತಿ ಕೊಡ್ಲೇಬೇಡಿ ಎಂದು ಎಲೆಕ್ಷನ್‌ ಕಮಿಷನ್‌ಗೆ ಮನವಿ

Exit mobile version