ಬೆಂಗಳೂರು: ವೈಟ್‌ಫೀಲ್ಡ್ ಟು ಕೆ.ಆರ್.ಪುರ ಮೆಟ್ರೋ ಹೊಸ ಮಾರ್ಗ ಉದ್ಘಾಟನೆಯನ್ನು (Modi In Karnataka) ಪ್ರಧಾನಿ ನರೇಂದ್ರ ಮೋದಿ ಮಾ.25ರಂದು ನೆರೆವೇರಿಸುತ್ತಿದ್ದಾರೆ. ಬೆಂಗಳೂರಿಗೆ ಶನಿವಾರ ಮಧ್ಯಾಹ್ನ 12.55ಕ್ಕೆ ಮೋದಿ ತಲುಪಲಿದ್ದು, ಈ ವೇಳೆ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಜತೆಗೆ ಮಾರ್ಗ ಬದಲಾವಣೆ ಮಾಡಲಾಗಿದೆ.
ವಾಹನ ಸಂಚಾರ ನಿರ್ಬಂಧ ಮಾಡಿದ ರಸ್ತೆಗಳಿವು
ಮಧ್ಯಾಹ್ನ 12ರಿಂದ 2:30ರವರೆಗೆ ಹೂಡಿ-ವರ್ತೂರು ರಸ್ತೆ ಹಾಗೂ ವರ್ತೂರು ಕೋಡಿಯಿಂದ ಸತ್ಯ ಸಾಯಿ ಆಶ್ರಮ, ಗ್ರಾಫೈಟ್ ಇಂಡಿಯಾಯಿಂದ ವೈದೇಹಿ ಆಸ್ಪತ್ರೆ ರಸ್ತೆ, ಬಿಗ್‌ಬಜಾರ್ ಜಂಕ್ಷನ್ ಜತೆಗೆ ಹೋಪ್ ಫಾರಂ ಜಂಕ್ಷನ್‌ನಿಂದ ಚನ್ನಸಂದ್ರವರೆಗೆ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.
ಪರ್ಯಾಯ ಮಾರ್ಗಗಳು ಹೀಗಿವೆ
ವರ್ತೂರು ಕೋಡಿಯಿಂದ ಕುಂದಲಹಳ್ಳಿ ಬ್ರಿಡ್ಜ್ ಮೂಲಕ ಹಳೇ ಏರ್ಪೋರ್ಟ್ ರಸ್ತೆ ಮೂಲಕ ತಲುಪಬಹುದಾಗಿದೆ. ಚನ್ನಸಂದ್ರ ಸರ್ಕಲ್‌ನಿಂದ ನಾಗೊಂಡನಹಳ್ಳಿ, ಇಮ್ಮಡಿಹಳ್ಳಿ ಹಗದೂರು ಮೂಲಕ ವರ್ತೂರು ಕೋಡಿ ತಲುಪಬಹುದು. ಕಾಟಂನಲ್ಲೂರು ಕ್ರಾಸ್‌ನಿಂದ ಶಿಗೇಹಳ್ಳಿ ಗೇಟ್, ಕಾಡುಗೋಡಿ ನಾಲಾರಸ್ತೆ ಮೂಲಕ ಚನ್ನಸಂದ್ರ ಹೋಗಬಹುದು. ಹೂಡಿ ಸರ್ಕಲ್‌ನಿಂದ ಗ್ರಾಫೈಟ್ ರಸ್ತೆ ಮೂಲಕ ಕುಂದಲಹಳ್ಳಿ ತಲುಪಬಹುದು. ಹೂಡಿ ಸರ್ಕಲ್‌ನಿಂದ ಅಯ್ಯಪ್ಪನಗರ, ಭಟ್ಟರಹಳ್ಳಿ-ಮೇಡಹಳ್ಳಿ ಮೂಲಕ ಕಾಟಂನಲ್ಲೂರು ಕ್ರಾಸ್ ತಲುಪುಬಹುದಾಗಿದೆ.
ಬೆಳಗ್ಗೆಯಿಂದಲೇ ಭಾರಿ ಗಾತ್ರದ ವಾಹನಗಳ ಸಂಚಾರ
ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ ಹಾಕಲಾಗಿದೆ.
- ಕಾಟಂನಲ್ಲೂರು ಕ್ರಾಸ್‌ನಿಂದ ಕಾಡುಗೋಡಿ ಹೋಪ್ ಫಾರಂ ಸರ್ಕಲ್ – ವರ್ತೂರು ಕೋಡಿ ವರೆಗೆ.
- ಗುಂಜೂರು- ವರ್ತೂರು – ವೈಟ್ ಫೀಲ್ಡ್ – ಹೋಫ್ ಫಾರಂ ವೃತ್ತ – ಕಾಡುಗೋಡಿ – ಕಾಟಂನಲ್ಲೂರು ಕ್ರಾಸ್ ಕಡೆಗೆ
- ತಿರುಮಶೆಟ್ಟಿಹಳ್ಳಿ ಕ್ರಾಸ್ ನಿಂದ ಚನ್ನಸಂದ್ರ – ಹೋಫ್ ಫಾರಂ ವೃತ್ತದ ಕಡೆಗೆ.
- ಟಿನ್ ಫ್ಯಾಕ್ಟರಿ ಕಡೆಯಿಂದ ಹೂಡಿ – ಐ.ಟಿ.ಪಿ.ಎಲ್ ಮುಖ್ಯರಸ್ತೆ – ಹೋಫ್ ಫಾರಂ ವೃತ್ತ ಕಡೆಗೆ
- ಮಾರತಹಳ್ಳಿ ಬ್ರಿಡ್ಜ್ – ಕುಂದಲಹಳ್ಳಿ ವರ್ತೂರು ಕೋಡಿ, ವೈಟ್ ಫೀಲ್ಡ್ ಕಡೆಗೆ.
ನಿರ್ಬಂಧಿಸಿದ ರಸ್ತೆಗಳಿಗೆ ಪರ್ಯಾಯ ಮಾರ್ಗಗಳು ಹೀಗಿವೆ
- ಹೊಸಕೋಟೆ, ದೊಡ್ಡಗಟ್ಟಿಗನಬ್ಬಿ, ತಿರುಮಲಶೆಟ್ಟಿಹಳ್ಳಿ, ಚಿಕ್ಕತಿರುಪತಿ ಮೂಲಕ ಸರ್ಜಾಪುರ ತಲುಪುವುದು. ಸರ್ಜಾಪುರ ಗುಂಜೂರು ಶ್ರೀ ರಾಮ ದೇವಸ್ಥಾನ, ನೆರಿಗೆ ರಸ್ತೆ, ತಿರುಮಶೆಟ್ಟಿಹಳ್ಳಿ, ದೊಡ್ಡಗಟ್ಟಿಗನಬ್ಬಿ ಮೂಲಕ , ಹೊಸಕೋಟೆ ಹೋಗಬಹುದು.
- ಟಿನ್ ಫ್ಯಾಕ್ಟರಿ ಭಟ್ಟರಹಳ್ಳಿ ಮೂಲಕ ಹೊಸಕೋಟೆ ಹೋಗಬಹುದಾಗಿದೆ.
- ಮಾರತಹಳ್ಳಿ ಯಿಂದ ದೊಡೇನಕುಂದಿ, ಮಹದೇವಪುರ ಟಿನ್ ಫ್ಯಾಕ್ಟರಿ ಭಟ್ಟರಹಳ್ಳಿ ಕಡೆಗೆ ತಲುಪುವುದು.
ರಾಜ್ಯದ ಪ್ರಮುಖ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ