Site icon Vistara News

Modi in Karnataka: ಸಫಾರಿ ಡ್ರೆಸ್‌ನಲ್ಲಿ ಮಿಂಚಿದ ಪ್ರಧಾನಿ ಮೋದಿ, ಬಂಡಿಪುರ ಅರಣ್ಯದಲ್ಲಿ ನಮೋ ಪಯಣ ಆರಂಭ

Modi

#image_title

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಹುಲಿ ಸಂರಕ್ಷಣೆ ಯೋಜನೆಗೆ 50 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಬಂಡಿಪುರ ರಾಷ್ಟ್ರೀಯ ಉದ್ಯಾನಕ್ಕೆ ಭಾನುವಾರ ಆಗಮಿಸುತ್ತಿದ್ದು, ಮೈಸೂರು-ಚಾಮರಾಜನಗರ ಜಿಲ್ಲೆಯಲ್ಲಿ ನಾನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಬಂಡಿಪುರ ಅಭಯಾರಣ್ಯದಲ್ಲಿ ಎರಡು ಗಂಟೆ ಕಾಲ ಹುಲಿ ಸಫಾರಿಯಲ್ಲಿ ಮೋದಿ ಭಾಗವಹಿಸಲಿದ್ದಾರೆ. 20 ಕಿ.ಮೀ ಸಫಾರಿ ನಡೆಯಲಿದೆ. ಹುಲಿ ವೀಕ್ಷಣೆಯನ್ನು ಮಾಡಲಿದ್ದಾರೆ.

ಸಫಾರಿಗೆ ಸೂಕ್ತವಾಗುವಂತೆ ವಿಶೇಷ ಉಡುಪಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಯಣ ಆರಂಭಿಸಿದ್ದಾರೆ. ಮೇಲುಕಾಮನಹಳ್ಳಿ ಹೆಲಿಪ್ಯಾಡ್‌ಗೆ ಆಗಮಿಸಿದ್ದಾರೆ. ಬಂಡಿಪುರಕ್ಕೆ ಪ್ರಧಾನಿಯೊಬ್ಬರು ಬರುತ್ತಿರುವುದು ಇದೇ ಮೊದಲು. ಹೀಗಾಗಿ ಈ ಭಾಗದಲ್ಲಿ ಜನತೆ ಸಂಭ್ರಮದಿಂದ ಪ್ರಧಾನಿಯವರನ್ನು ಸ್ವಾಗತಿಸಿದ್ದಾರೆ. ಭಾರತ್‌ ಮಾತಾ ಕಿ ಜೈ ಘೋಷಣೆಗಳ ಮೂಲಕ ಸ್ಥಳೀಯರು ಹರ್ಷ ವ್ಯಕ್ತಪಡಿಸಿದ್ದಾರೆ. ಹಲವಾರು ಹುಲಿ ಸಂರಕ್ಷಿತ ಪ್ರದೇಶಗಳು ಭಾರತದಲ್ಲಿ ಇದ್ದರೂ, ಬಂಡಿಪುರವನ್ನು ಭೇಟಿಗೆ ಪ್ರಧಾನಿ ಆಯ್ಕೆ ಮಾಡಿರುವುದಕ್ಕೆ ಜನತೆ ಸಂತಸ ವ್ಯಕ್ತಪಡಿಸಿದ್ದಾರೆ.

ಹುಲಿಗಳ ಸಂರಕ್ಷಣೆ ಕುರಿತ ಯೋಜನೆಯ (Project Tiger) ಸುವರ್ಣ ಸಂಭ್ರಮ (50 ವರ್ಷ) ಹಿನ್ನೆಲೆಯಲ್ಲಿ ಮೈಸೂರು, ಚಾಮರಾಜನಗರದಲ್ಲಿ ಇಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುತ್ತಿದ್ದಾರೆ. ( Modi in Karnataka) ಇಂದು ಬೆಳಗ್ಗೆ 9.40ರವರೆಗೆ ಬಂಡೀಪುರ ರಾಷ್ಟ್ರೀಯ ಉದ್ಯಾನಕ್ಕೆ ಅವರು ಭೇಟಿ ನೀಡಲಿದ್ದಾರೆ. ಸಫಾರಿ ಮಾಡುವ ಮೂಲಕ ಹುಲಿ ಸಂರಕ್ಷಣೆಯ ಸಂದೇಶ ಸಾರಲಿದ್ದಾರೆ.
ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ಭಾಗವಹಿಸುವಿಕೆಗೆ ನಿರ್ಬಂಧ ವಿಧಿಸಲಾಗಿದೆ. ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಬಂಡೀಪುರ ಮಾರ್ಗವಾಗಿ ಕೇರಳಕ್ಕೆ ತೆರಳುವ ವಾಹನ ಸಂಚಾರಕ್ಕೆ ತಾತ್ಕಾಲಿಕ ಬ್ರೇಕ್ ಹಾಕಲಾಗಿದೆ.


ಬಂಡೀಪುರ, ಮಧುಮಲೈ ಕಾಡಿಗೆ ಭೇಟಿ ನೀಡಿದ ಬಳಿಕ ಪ್ರಧಾನಿ ಮೋದಿಯವರು ಮೈಸೂರಿಗೆ ವಾಪಸಾಗಲಿದ್ದಾರೆ.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ಹುಲಿ ಯೋಜನೆ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ವಿದೇಶಗಳ ಆಹ್ವಾನಿತರು, ದೇಶದ ಅರಣ್ಯಾಧಿಕಾರಿಗಳು, ಅರಣ್ಯ ಮತ್ತು ಹುಲಿ ಸಂರಕ್ಷಣೆಯಲ್ಲಿ ತೊಡಗಿರುವವರು ಪಾಲ್ಗೊಳ್ಳಲಿದ್ದಾರೆ. ಪ್ರಧಾನ ಭಾಷಣವನ್ನು ನರೇಂದ್ರ ಮೋದಿ ಮಾಡಲಿದ್ದಾರೆ.

ಪ್ರಧಾನಿಯೊಬ್ಬರು ಹುಲಿಗಳ ಸಂರಕ್ಷಣೆಯ ಸಲುವಾಗಿ ಯೋಜನೆಗೆ ಪುಷ್ಟಿ ತುಂಬಲು ಬಂಡಿಪುರಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು. (Modi in Karnataka) ಆದ್ದರಿಂದ ಬಂಡಿಪುರದ ಸ್ಥಳೀಯ ಜನತೆ, ಪರಿಸರ ಸಂರಕ್ಷಣೆಯ ಚಿಂತಕರು, ಹೋರಾಟಗಾರರು ಸಂತಸ ವ್ಯಕ್ತಪಡಿಸಿದ್ದಾರೆ. ಹುಲಿಗಳ ಸಂರಕ್ಷಣೆ ಬಗ್ಗೆ ಪ್ರಧಾನಿಯವರು ವಹಿಸಿರುವ ಕಾಳಜಿ ಮಹತ್ವಪೂರ್ಣ ಎನ್ನುತ್ತಾರೆ. ಸಫಾರಿ ಸಂದರ್ಭ ಪ್ರಧಾನಿ ಮೋದಿಯವರು ಹುಲಿಯನ್ನು ವೀಕ್ಷಣೆ ಮಾಡುವ ನಿರೀಕ್ಷೆ ಇದೆ.

ಬಂಡಿಪುರ ಕ್ಯಾಂಪ್‌ನಲ್ಲಿ ಪ್ರಧಾನಿ ಮೋದಿಯವರಿಗೆ ಅರಣ್ಯಾಧಿಕಾರಿಗಳು ಸ್ವಾಗತ ಕೋರಿದ್ದಾರೆ. ತಮಿಳುನಾಡಿನ ಮಧುಮಲೈನ ತೆಪ್ಪಕಾಡು ಆನೆ ಶಿಬಿರದಲ್ಲಿ, ದಿ ಎಲಿಫೆಂಟ್‌ ವಿಸ್ಬರ್ಸ್‌ (Elephant whispers) ಖ್ಯಾತಿಯ ಬೊಮ್ಮನ್‌ ಮತ್ತು ಬೆಳ್ಳಿ ದಂಪತಿಗೆ ಸನ್ಮಾನವೂ ನಡೆಯಲಿದೆ. ಬಳಿಕ ಅಧಿಕಾರಿಗಳೊಂದಿಗೆ ಕೆಲ ಹೊತ್ತು ಚರ್ಚಿಸಲಿದ್ದಾರೆ. ಬಳಿಕ ಹೆಲಿಕಾಪ್ಟರ್‌ ಮೂಲಕ ಮೈಸೂರಿಗೆ ಆಗಮಿಸಲಿದ್ದಾರೆ.

Exit mobile version