Site icon Vistara News

Modi in Karnataka: ಬಂಡೀಪುರ ಕಾಡಲ್ಲಿ 22 ಕೀ.ಮೀ. ದೂರ 2 ಗಂಟೆ ಸುತ್ತಿದರೂ ಮೋದಿಗೆ ಕಾಣದ ಹುಲಿ!

Modi in Karnataka updates 22 km in the forest of Bandipur Modi cant see tiger even after 2 hours

ಮೈಸೂರು/ಚಾಮರಾಜನಗರ: ಪ್ರಾಜೆಕ್ಟ್‌ ಟೈಗರ್‌ನ (Project Tiger) 50ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಆಯೋಜಿಸಿರುವ ಹುಲಿ ಸಂರಕ್ಷಣೆ ಸಂಬಂಧಿತ ಕಾರ್ಯಕ್ರಮ ಮತ್ತು ಹುಲಿಗಣತಿ ಬಿಡುಗಡೆ ಸೇರಿದಂತೆ ಹಲವು ಕಾರಣಗಳಿಗೆ ರಾಜ್ಯಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ (Modi in Karnataka) ಅವರು ಭಾನುವಾರ ಮುಂಜಾನೆಯಿಂದಲೇ ಸಖತ್‌ ಆ್ಯಕ್ಟಿವ್‌ ಆಗಿದ್ದಾರೆ. ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಸುಮಾರು 22 ಕಿ.ಮೀ. ಟೈಗರ್‌ ಸಫಾರಿಯನ್ನು ಮಾಡಿರುವ ಮೋದಿ ಅವರಿಗೆ ಹುಲಿಯೇ ಕಾಣಿಸಿಕೊಳ್ಳದೆ ನಿರಾಸೆ ಮೂಡಿಸಿದೆ.

ಸಫಾರಿಯಲ್ಲಿ ಮಿಂಚಿದ ಪ್ರಧಾನಿ ಮೋದಿ

ಬಂಡೀಪುರ ಅಭಯಾರಣ್ಯದ ಸೊಬಗಿನ ಜತೆಗೆ ಕಾಲ ಕಳೆದ ಮೋದಿ ಅವರು ವನ್ಯಜೀವಿ, ನೈಸರ್ಗಿಕ ಸೌಂದರ್ಯವನ್ನು ವೀಕ್ಷಿಸಿ ಖುಷಿಪಟ್ಟರು. ಸುದೀರ್ಘ 2 ಗಂಟೆ 15 ನಿಮಿಷ ಟೈಗರ್ ಸಫಾರಿ ನಡೆಸಲಾಗಿದ್ದು, ಕಾಡಿನ ಎಲ್ಲ ಕಡೆ ಮೋದಿ ಸುತ್ತಾಟ ನಡೆಸಿದರೂ ಅವರಿಗೆ ಹುಲಿ ಕಾಣಿಸಿಕೊಳ್ಳದೆ ನಿರಾಸೆ ಮೂಡಿಸಿದೆ. ಸಫಾರಿಯಲ್ಲಿ ಟೈಗರ್ ಸೈಟ್‌ಗಾಗಿ ಮಾಡಿದ ಪ್ರಯತ್ನಗಳೂ ವಿಫಲವಾದವು. ಹೀಗಾಗಿ ಉಳಿದ ಪ್ರಾಣಿ, ಪಕ್ಷಿಗಳನ್ನು ವೀಕ್ಷಿಸಿ ತೆರಳುವಂತಾಯಿತು. ಒಟ್ಟಾರೆ ಟೈಗರ್‌ ಸಫಾರಿ ಮೂಲಕ ಹುಲಿ ಸಂರಕ್ಷಣೆಯ ಸಂದೇಶವನ್ನು ಸಾರಿದರು.

ಇದನ್ನೂ ಓದಿ: Modi in Karnataka : ಬಂಡಿಪುರದಲ್ಲಿ 20 ಕಿ.ಮೀ ಟೈಗರ್ ಸಫಾರಿ, ತೆಪ್ಪಕಾಡಿನಲ್ಲಿ ಆನೆಗಳಿಗೆ ಕಬ್ಬು ತಿನ್ನಿಸಿದ ಪ್ರಧಾನಿ ಮೋದಿ

ಮೋದಿ ಸಫಾರಿ ವೇಳೆ ಕಾಣಿಸಿಕೊಂಡ ಕಾಡೆಮ್ಮೆಗಳು

ಈ ವೇಳೆ ಆನೆಗಳ ಹಿಂಡು, ಜಿಂಕೆ, ಕಾಡೆಮ್ಮೆ ಸೇರಿದಂತೆ ವಿವಿಧ ಪ್ರಾಣಿ ಪಕ್ಷಿಗಳ ಫೋಟೊವನ್ನು ಸಹ ಕ್ಲಿಕ್ಕಿಸಿ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಕಾಣಿಸಿಕೊಂಡ ಜಿಂಕೆಗಳು

ಸಫಾರಿ ಡ್ರೆಸ್‌ನಲ್ಲಿ ಮೋದಿ

ಅರಣ್ಯ ಇಲಾಖೆಯ ಜೀಪ್‌ನಲ್ಲಿ ಸಫಾರಿ ನಡೆಸಿದ ಮೋದಿ ಅವರು, ಅರಣ್ಯದಲ್ಲಿ ಹೊಂದಿಕೊಳ್ಳುವಂತಹ ಸಫಾರಿ ಡ್ರೆಸ್‌ನಲ್ಲಿ ಮಿಂಚಿದರು. ಸಫಾರಿ ಉಡುಪಿನಲ್ಲಿ ಬಂಡಿಪುರ ಲೋಗೊ ಇರುವುದು ವಿಶೇಷವಾಗಿತ್ತು. ಅಲ್ಲದೆ, ಕಪ್ಪು ಬಣ್ಣದ ಟೋಪಿ ಹಾಕಿಕೊಂಡು, ಕೈಯಲ್ಲಿ ಕ್ಯಾಮೆರಾ ಹಿಡಿದು ಮಿಂಚಿದರು.

ಆನೆ ಕ್ಯಾಂಪ್‌ನಲ್ಲಿ ಸಂಭ್ರಮ

ಬಂಡೀಪುರದಲ್ಲಿ ಟೈಗರ್‌ ಸಫಾರಿ ಮುಗಿಸಿದ ಬಳಿಕ ತಮಿಳುನಾಡಿನ ಮಧುಮಲೈ ಕಾಡಿಗೆ ಭೇಟಿ ನೀಡಿ, ತೆಪ್ಪಕಾಡು ಆನೆ ಕ್ಯಾಂಪ್‌ಗೆ ಭೇಟಿ ನೀಡಿ ಅಲ್ಲಿ ಆನೆಗಳನ್ನು ವೀಕ್ಷಣೆ ಮಾಡಿದರು. ತೆಪ್ಪಕಾಡು ಏಷ್ಯಾದ ಮೊದಲ ಆನೆ ಶಿಬಿರ ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಬಂಡೀಪುರದ ಕೆಕ್ಕೆನಹಳ್ಳ ರಸ್ತೆ ಮೂಲಕ ಆನೆ ಕ್ಯಾಂಪ್‌ಗೆ ಭೇಟಿ ನೀಡಿದ ಮೋದಿ ಅವರು, ಕೆಕ್ಕನಹಳ್ಳದಿಂದ 8 ಕಿ.ಮೀ. ಸಫಾರಿ ವಾಹನದಲ್ಲಿಯೇ ರಸ್ತೆ ಮೂಲಕ ಪ್ರಯಾಣಿಸಿದ್ದಾರೆ.

ಪಶ್ಚಿಮ ಘಟ್ಟದ ಬಂಡಿಪುರ ಅಭಯಾರಣ್ಯಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಮಧುಮಲೈ ಟೈಗರ್ ರಿಸರ್ವ್ ವ್ಯಾಪ್ತಿಗೆ ಸೇರಿದ ತೆಪ್ಪಕಾಡು ಶಿಬಿರದಲ್ಲಿ ಆನೆಗಳಿಗೆ ಕಬ್ಬು ತಿನ್ನಿಸಿದರು. ಕರ್ನಾಟಕದಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಮೋದಿಯವರ ಜತೆಗೆ ರಾಜಕಾರಣಿಗಳ ದಂಡು ಇದ್ದಿರಲಿಲ್ಲ. ಅರಣ್ಯಾಧಿಕಾರಿಗಳ ಜತೆಗೆ ಪ್ರಧಾನಿ ಮೋದಿಯವರು ಬಂಡಿಪುರ ಅರಣ್ಯದಲ್ಲಿ ಭಾನುವಾರ ಬೆಳಗ್ಗೆ ಟೈಗರ್ ಸಫಾರಿ ನಡೆಸಿದರು.

https://twitter.com/narendramodi/status/1644946227598098432?s=20

ಆನೆಗೆ ಕಬ್ಬು ತಿನ್ನಿಸಿ ಮೈದಡವಿದರು

ತೆಪ್ಪಕಾಡು ಆನೆಗಳ ಶಿಬಿರದಲ್ಲಿ ಪ್ರಧಾನಿ ಮೋದಿಯವರು ಆನೆಗಳಿಗೆ ಕಬ್ಬು ತಿನ್ನಿಸಿ ಪ್ರೀತಿಯಿಂದ ಮೈದಡವಿದರು. ಆನೆಗಳೂ ಸೊಂಡಿಲನ್ನೆತ್ತಿ ಕಬ್ಬನ್ನು ಸ್ವೀಕರಿಸಿದವು. ಮಾವುತರು ಹಾಗೂ ಕಾವಡಿಗಳೊಂದಿಗೆ ಮಾತನಾಡಿದರು. ಈ ತೆಪ್ಪಕಾಡು ಶಿಬಿರದಲ್ಲಿ ಎಲಿಫೆಂಟ್‌ ವಿಸ್ಪರರ್ಸ್‌ (Elephant Whisperers) ಎಂಬ ಆಸ್ಕರ್ ಪ್ರಶಸ್ತಿ ವಿಜೇತ ಡಾಕ್ಯುಮೆಂಟರಿಯಲ್ಲಿ ತೋರಿಸಲಾಗಿರುವ ಆನೆಗಳ ರಕ್ಷಕರಾದ ಬೊಮ್ಮನ್ ಮತ್ತು ಬೆಳ್ಳಿ ಅವರ ಜತೆ ಮೋದಿ ಕುಶಲೋಪರಿ ನಡೆಸಿದರು.

ಏನಿದು ಹುಲಿ ಯೋಜನೆ?

ಇದನ್ನೂ ಓದಿ: Karnataka Election 2023: ಸೌಭಾಗ್ಯ ಬಸವರಾಜನ್‌ ಪಕ್ಷೇತರವಾಗಿ ಕಣಕ್ಕೆ; ಕಾಂಗ್ರೆಸ್‌ನಲ್ಲಿ ಮತ್ತೊಂದು ಬಂಡಾಯ

ಜನಪ್ರತಿನಿಧಿಗಳಿಗಿರಲಿಲ್ಲ ಪ್ರವೇಶ

ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ಭಾಗವಹಿಸುವಿಕೆಗೆ ನಿರ್ಬಂಧ ವಿಧಿಸಲಾಗಿತ್ತು. ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಬಂಡೀಪುರ ಮಾರ್ಗವಾಗಿ ಕೇರಳಕ್ಕೆ ತೆರಳುವ ವಾಹನ ಸಂಚಾರಕ್ಕೆ ತಾತ್ಕಾಲಿಕ ಬ್ರೇಕ್ ಹಾಕಲಾಗಿದೆ.

Exit mobile version