ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಮಧ್ಯಾಹ್ನ ೧.೩೦ಕ್ಕೆ ಸರಿಯಾಗಿ ಕರಾವಳಿಗೆ ಕಾಲಿಟ್ಟಿದ್ದಾರೆ. ಕೊಚ್ಚಿಯಲ್ಲಿದ್ದ ಮೋದಿ ಅವರು ವಿಮಾನ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಇಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಪ್ರಮುಖರು ಅವರನ್ನು ಸ್ವಾಗತಿಸಿದರು.
ವಿಮಾನದಿಂದ ಇಳಿದ ಅವರು ಹೆಲಿಕಾಪ್ಟರ್ ಮೂಲಕ ಎನ್‌ಎಂಪಿಟಿಯ ಹೆಲಿಪ್ಯಾಡ್‌ಗೆ ಸಾಗಿದ್ದಾರೆ. ಅಲ್ಲಿಂದ ಸಭಾ ಕಾರ್ಯಕ್ರಮ ನಡೆಯಲಿರುವ ಕೂಳೂರಿನ ಗೋಲ್ಡ್ ಫಿಂಚ್ ಮೈದಾನಕ್ಕೆ ವಾಹನದಲ್ಲಿ ಸಾಗಲಿದ್ದಾರೆ. ಈ ದಾರಿಯ ಉದ್ದಕ್ಕೂ ಸಾವಿರಾರು ಮಂದಿ ನೆರೆದಿದ್ದರು ಮೋದಿ ಅವರನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ.
ಇತ್ತ ಮೈದಾನದಲ್ಲಿ ಈಗಾಗಲೇ ಕೇಂದ್ರ ಯೋಜನೆಗಳ ೭೦,೦೦೦ಕ್ಕೂ ಅಧಿಕ ಫಲಾನುಭವಿಗಳು, ಬಿಜೆಪಿ ಕಾರ್ಯಕರ್ತರು ಹಾಗೂ ಇತರರು ಕಾಯುತ್ತಿದ್ದಾರೆ.
ಪ್ರಧಾನಿ ಮೋದಿ ಅವರು ನವಮಂಗಳೂರು ಬಂದರು ಮಂಡಳಿ ಮತ್ತು ಎಂಆರ್‌ಪಿಎಲ್‌ಗೆ ಸಂಬಂಧಿಸಿದ ಸುಮಾರು ೩,೮೦೦ ಕೋಟಿ ರೂ. ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ಮತ್ತು ಶಿಲಾನ್ಯಾಸ ಮಾಡಲಿದ್ದಾರೆ.
ಇದನ್ನೂ ಓದಿ| Modi in Mangalore | ವಿಕಾಸವೋ, ವಿನಾಶವೋ? ಮೋದಿಜಿ ಉತ್ತರ ಕೊಡಿ, ಸಿದ್ದರಾಮಯ್ಯ ಸರಣಿ ಪ್ರಶ್ನಾ ದಾಳಿ