ಬೆಂಗಳೂರು: ರಾಜ್ಯ ಪ್ರವಾಸಕ್ಕಾಗಿ ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದು, ಬೆಂಗಳೂರಿನ ಕೊಮ್ಮಘಟ್ಟದಲ್ಲಿ ನಡೆದ ಸಾರ್ವಜನಿಕ ಸಮಾವೇಶದ ನಂತರ ಉಕ್ರೇನ್‌ನಲ್ಲಿ ಮೃತಪಟ್ಟ ಎಂಬಿಬಿಎಸ್ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ಅವರ ತಂದೆ ಶೇಖರಪ್ಪ ಗ್ಯಾನಗೌಡರ್ ಕುಟುಂಬವನ್ನು ಭೇಟಿ ಮಾಡಿದರು.
ಇದನ್ನೂ ಓದಿ | Modi In Karnataka | 40 ವರ್ಷದಲ್ಲಿ ಆಗದ ಕೆಲಸವನ್ನು 40 ತಿಂಗಳಲ್ಲಿ ಮಾಡುವೆ ಎಂದ ಮೋದಿ
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಾಥ್ ಕೊಟ್ಟಿದ್ದು, ಸಹೋದರ ಹರ್ಷ ಈ ಕುರಿತ ಫೋಟೊ ತೆಗೆದುಕೊಂಡಿದ್ದಾರೆ.
ಫೋನ್ ಕರೆ ಮೂಲಕ ಸಾಂತ್ವನ ಹೇಳಿದ್ದ ಮೋದಿ
ಮಗನ ಮೃತ ದೇಹ ಬರುವುದೋ ಇಲ್ಲವೋ ಎಂಬ ಆತಂಕದಲ್ಲಿದ್ದ ನವೀನ್ ಪೋಷಕರಿಗೆ 20 ದಿನಗಳ ಬಳಿಕ ಮೃತದೇಹ ಕೈ ಸೇರಿತ್ತು. ಮಗ ತೀರಿಕೊಂಡ ದಿನವೇ ಪ್ರಧಾನಿ ಅವರು ಫೋನ್ ಮಾಡಿ ಸಾಂತ್ವನ ಹೇಳಿದ್ದರು. ಇದೀಗ ಮೋದಿ ಭೇಟಿಗೆ ಹತ್ತು ನಿಮಿಷ ಅವಕಾಶ ಸಿಕ್ಕಿತ್ತು. ತೀರಿಕೊಂಡ ಮಗನ ಹೆಸರಿನಲ್ಲಿ ಸಮಾಜಮುಖಿ ಕಾರ್ಯ ಮಾಡಲು ಬಯಸಿರುವ ಮೃತ ನವೀನ್ ಪೋಷಕರು, ಈ ಕುರಿತ ಪ್ರತಿಷ್ಠಾನ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ | Modi in karnataka | ಮೋದಿ ಮೈಸೂರು ಕಾರ್ಯಕ್ರಮಕ್ಕೆ ಮಳೆ ಅಡ್ಡಿ ಸಾಧ್ಯತೆ