ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ ೨ರಂದು ಮಂಗಳೂರಿಗೆ ಆಗಮಿಸಲಿದ್ದಾರೆ. ೩೮೦೦ ಕೋಟಿ ರೂ. ಮೊತ್ತದ ಪ್ರಮುಖ ಯೋಜನೆಗಳ ಲೋಕಾರ್ಪಣೆ ಕಾರ್ಯಕ್ರಮ ಇದಾಗಿದೆ. ಆದರೆ, ರಾಜ್ಯದಲ್ಲಿ ಮುಂದಿನ ವರ್ಷದ ಮೇ ತಿಂಗಳಲ್ಲಿ ವಿಧಾನಸಭಾ ಚುನಾವಣೆಯೂ ನಡೆಯುತ್ತಿರುವುದರಿಂದ ಇದನ್ನು ಕೇವಲ ಸರಕಾರಿ ಕಾರ್ಯಕ್ರಮವೆಂದು ಪರಿಗಣಿಸಲಾಗಿಲ್ಲ. ಚುನಾವಣೆಯ ಹವಾ ಸೃಷ್ಟಿಸುವ ಕಾರ್ಯಕ್ರಮವೂ ಇದಾಗಿ ಗಮನ ಸೆಳೆಯಲಿದೆ.
ಮೋದಿ ಅವರು ಗುರುವಾರ ಸಂಜೆಯೇ ದಿಲ್ಲಿಯಿಂದ ಹೊರಟು ಕೊಚ್ಚಿ ತಲುಪಲಿದ್ದಾರೆ. ಅಲ್ಲಿಂದ ಶುಕ್ರವಾರ ಮಧ್ಯಾಹ್ನ ಹೊರಟು ೧.೩೦ಕ್ಕೆ ಮಂಗಳೂರು ತಲುಪಲಿದ್ದಾರೆ. ಮಂಗಳೂರಿನಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮತ್ತೆ ೪ ಗಂಟೆ ಹೊತ್ತಿಗೆ ನವದೆಹಲಿ ವಿಮಾನ ಹತ್ತಲಿದ್ದಾರೆ. ಅಂದರೆ ಮೋದಿ ಅವರು ೧.೩೦ಕ್ಕೆ ವಿಮಾನ ಇಳಿಯುವಲ್ಲಿಂದ ೪ ಗಂಟೆಗೆ ವಿಮಾನ ಹತ್ತುವವರೆಗೆ ಸುಮಾರು ಎರಡೂವರೆ ಗಂಟೆ (೧೫೦ ನಿಮಿಷ) ಮಂಗಳೂರಿನಲ್ಲಿ ಇರುತ್ತಾರೆ. ಈ ಅವಧಿಯ ಅವರ ಚಟುವಟಿಕೆಗಳ ನಿಮಿಷ ನಿಮಿಷಗಳ ವಿವರ ಇಲ್ಲಿದೆ.
ವಿಮಾನ ನಿಲ್ದಾಣದಿಂದ ವಿಮಾನ ನಿಲ್ದಾಣಕ್ಕೆ!
ಮಧ್ಯಾಹ್ನ 1.30- ಕೊಚ್ಚಿಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮನ
ಮಧ್ಯಾಹ್ನ 1.35- ಮಂಗಳೂರು ಏರ್ ಪೋರ್ಟ್‌ನಿಂದ ಹೆಲಿಕಾಪ್ಟರ್ ಮೂಲಕ ನಿರ್ಗಮನ
ಮಧ್ಯಾಹ್ನ 1.50- ಎನ್.ಎಂ.ಪಿ.ಎ ಹೆಲಿಪ್ಯಾಡ್(ಬರ್ತ್ ನಂ.4)ನಲ್ಲಿ ಲ್ಯಾಂಡಿಂಗ್
ಮಧ್ಯಾಹ್ನ 1.54- ಹೆಲಿಪ್ಯಾಡ್ ನಿಂದ ರಸ್ತೆ ಮಾರ್ಗವಾಗಿ ನಿರ್ಗಮನ
ಮಧ್ಯಾಹ್ನ 2.00- ಸಮಾವೇಶ ನಡೆಯುವ ಗೋಲ್ಡ್ ಪಿಂಚ್ ಮೈದಾನ ತಲುಪಲಿರುವ ಮೋದಿ
ಮಧ್ಯಾಹ್ನ 3.35- ವೇದಿಕೆಯಿಂದ ನಿರ್ಗಮಿಸಿ ಹೆಲಿಪ್ಯಾಡ್ ತಲುಪಲಿದ್ದಾರೆ.
ಸಂಜೆ ೪.೦೦- ವಿಮಾನ ಮೂಲಕ ನಿರ್ಗಮನ
========
ವೇದಿಕೆಯಲ್ಲಿ ೮೦ ನಿಮಿಷ ಇರಲಿದ್ದಾರೆ ಪ್ರಧಾನಿ
ಮಧ್ಯಾಹ್ನ 2.00- ಎನ್.ಎಂ.ಪಿ.ಎ ಹೆಲಿಪ್ಯಾಡ್‌ನಿಂದ ಮೈದಾನಕ್ಕೆ ಮೋದಿ ಆಗಮನ
ಮಧ್ಯಾಹ್ನ 2.10 – ವೇದಿಕೆಗೆ ಆಗಮನ, ಗಣ್ಯರು ಮತ್ತು ಅಧಿಕಾರಿಗಳಿಂದ ಸ್ವಾಗತ
ಮಧ್ಯಾಹ್ನ 2.13- ಕೇಂದ್ರ ಸಚಿವ ಸರ್ಬಾನಂದ್ ಸೋನಾವಾಲಾರಿಂದ 5 ನಿಮಿಷ ಸ್ವಾಗತ ಭಾಷಣ
ಮಧ್ಯಾಹ್ನ 2.18- ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರಿಂದ 5 ನಿಮಿಷ ಭಾಷಣ
ಮಧ್ಯಾಹ್ನ 2.23- ಮೋದಿ ಅವರಿಂದ ಭೂಮಿ ಪೂಜೆ, ಶಿಲಾನ್ಯಾಸದ ವರ್ಚುವಲ್ ಲೋಕಾರ್ಪಣೆ- 22 ನಿಮಿಷಗಳ ಕಾರ್ಯಕ್ರಮ
ಮಧ್ಯಾಹ್ನ 2.23- ಫಲಾನುಭವಿಗಳಿಗೆ ಕಿಸಾನ್ ಕಾರ್ಡ್, ಆಳ ಸಮುದ್ರ ಮೀನುಗಾರಿಕೆ ಅನುಮತಿ ಪತ್ರ ವಿತರಣೆ (5 ನಿಮಿಷ)
ಮಧ್ಯಾಹ್ನ 2.28- ನವಮಂಗಳೂರು ಬಂದರಿನ(ಎನ್.ಎಂ.ಪಿ.ಎ) ಯೋಜನೆಗಳ ಕಿರುಚಿತ್ರ ಪ್ರದರ್ಶನ (4 ನಿಮಿಷ)
ಮಧ್ಯಾಹ್ನ 2.32- ಬಟನ್ ಒತ್ತುವ ಮೂಲಕ 281 ಕೋ. ರೂ. ವೆಚ್ಚದ ನವ ಮಂಗಳೂರು ಬಂದರಿನ 14ನೇ ಬರ್ತ್ ಯಾಂತ್ರೀಕರಣ ಕಾಮಗಾರಿಗೆ ಚಾಲನೆ
1) 100 ಕೋಟಿ ವೆಚ್ಚದಲ್ಲಿ ಬಿಟುಮಿನ್(ಡಾಮರ್) ಸಂಗ್ರಹಗಾರ ನಿರ್ಮಾಣ
2) 100 ಕೋಟಿ ವೆಚ್ಚದಲ್ಲಿ ಸಂತೋಷಿ ಮಾತಾ ಕಂಪೆನಿಯ ಖಾದ್ಯ ತೈಲ ಸಂಗ್ರಹಗಾರ
3) 500 ಕೋಟಿ ವೆಚ್ಚದ ಎಲ್ ಪಿಜಿ ಸ್ಟೋರೇಜ್ ವ್ಯವಸ್ಥೆ ಘಟಕದ ಕಾಮಗಾರಿಗೆ ಚಾಲನೆ
ಮಧ್ಯಾಹ್ನ 2.38- ಕುಳಾಯಿ ಮೀನುಗಾರಿಕಾ ಜೆಟ್ಟಿ ನಿರ್ಮಾಣದ ಭೂಮಿ ಪೂಜೆ(ವರ್ಚುವಲ್)
ಮಧ್ಯಾಹ್ನ 2.40- ಎಂ.ಆರ್.ಪಿ.ಎಲ್ ನ ಯೋಜನೆಗಳ ಕಿರು ಚಿತ್ರ ಪ್ರದರ್ಶನ (3 ನಿಮಿಷ)
ಮಧ್ಯಾಹ್ನ 02.43- ಎಂಆರ್‌ಪಿಎಲ್‌ನ ಎರಡು ಯೋಜನೆಗಳಿಗೆ ಚಾಲನೆ
1) 677 ಕೋಟಿ ವೆಚ್ಚದಲ್ಲಿ ರಾಜ್ಯದ ಮೊದಲ ಡಿಸಲೈನೇಶನ್ ಪ್ಲಾಂಟ್ ಗೆ ಚಾಲನೆ
2) 1829 ಕೋಟಿ ಮೊತ್ತದ ಬಿಎಸ್6 ಇಂಧನ ಸ್ಥಾವರಕ್ಕೆ ಶಂಕುಸ್ಥಾಪನೆ
ಮಧ್ಯಾಹ್ನ 2.45- ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಷಣ( 45 ನಿಮಿಷ)
ಮಧ್ಯಾಹ್ನ 3.30- ಗೋಲ್ಡ್ ಪಿಂಚ್ ಮೈದಾನದಿಂದ ಪ್ರಧಾನಿ ನರೇಂದ್ರ ಮೋದಿ ನಿರ್ಗಮನ
ಇದನ್ನೂ ಓದಿ| ಮೋದಿ ಮಂಗಳೂರಿಗೆ ಬರುತ್ತಿರುವುದು ಯಾಕೆ? ಯಾವ್ಯಾವ ಯೋಜನೆಗಳಿಗೆ ಚಾಲನೆ? ಇಲ್ಲಿದೆ Full details