Site icon Vistara News

Mohan Bhagawat: ಒಬ್ಬ ವ್ಯಕ್ತಿಯಿಂದ ಭಾರತದ ಏಳಿಗೆ ಅಸಾಧ್ಯ: ಆರ್‌ಎಸ್‌ಎಸ್‌ ಸರಸಂಘಚಾಲಕ ಮೋಹನ್‌ ಭಾಗವತ್‌

#image_title

ಬಳ್ಳಾರಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ(ಆರ್‌ಎಸ್‌ಎಸ್‌) ಸರಸಂಘಚಾಲಕ ಡಾ. ಮೋಹನ್‌ ಭಾಗವತ್‌ ಅವರು ಗಣಿನಾಡು ಬಳ್ಳಾರಿಗೆ ಭಾನುವಾರ ಭೇಟಿ ನೀಡಿದ್ದರು. ಬಳ್ಳಾರಿಯಲ್ಲಿ ಆರ್‌ಎಸ್‌ಎಸ್‌ನ ನೂತನ ಕಚೇರಿಯನ್ನು ಮೋಹನ್‌ ಭಾಗವತ್‌ ಉದ್ಘಾಟಿಸಿದರು.

ಕಚೇರಿಯಲ್ಲಿ‌ ಸಾಂಪ್ರದಾಯಕವಾಗಿ ಪೂಜೆ ಸಲ್ಲಿಸಿ ಬಳಿಕ ಕಚೇರಿಯನ್ನು ಕೋಹನ್‌ ಭಾಗವತ್‌ ವೀಕ್ಷಿಸಿದರು. ಬಳಿಕ ನೆಡದ ವೇದಿಕೆ ಕಾರ್ಯಕ್ರಮದಲ್ಲಿ‌ ಭಗವಾ ದ್ವಜರೋಹಣ ನೆರವೇರಿಸಿದರು. ಕಚೇರಿಯ ಕಟ್ಟಡ ನಿರ್ಮಾಣ ಮಾಡಿದ ಅಭಿಯಂತರರು ಹಾಗೂ ಮೇಸ್ತ್ರಿಯರವರನ್ನು ಸನ್ಮಾನಿಸಲಾಯಿತು. ಈ ಕಾರ್ಯಾಲಯವು ರಾಯಚೂರು, ಕೊಪ್ಪಳ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಕಾರ್ಯಚಟುವಟಿಕೆಗಳನ್ನು ಬಲಪಡಿಸಲು ನಿರ್ಮಿಸಲಾಗಿದೆ.

ವೇದಿಕೆ ಕಾರ್ಯಕ್ರಮದಲ್ಲಿ ಮೋಹನ್ ಭಾಗವತ್ ಅವರ ಜತೆಗೆ ಕ್ಷೇತ್ರೀಯ ಸರಸಂಘಚಾಲಕ ವಿ. ನಾಗರಾಜ್‌, ಕ್ಷೇತ್ರ ಪ್ರಚಾರಕ ಸುಧೀರ, ಪ್ರಾಂತ ಸಂಘಚಾಲಕ ಖಗೇಶನ್ ಪಟ್ಟಣಶೆಟ್ಟಿ, ಸಹಪ್ರಾಂತ ಸಂಘಚಾಲಕ ಅರವಿಂದರಾವ್ ದೇಶಪಾಂಡೆ, ಬಳ್ಳಾರಿ ವಿಭಾಗ ಸಂಘಚಾಲಕ ಬಸವರಾಜ ಡಂಬಳ, ಸ್ಥಳೀಯ ಆರ್‌ಎಸ್‌ಎಸ್‌ ಮುಖಂಡರು, ರಾಜಕೀಯ ನಾಯಕರು, ಕಾರ್ಯಕರ್ತರು ಭಾಗವಹಿಸಿದ್ದರು. ನೆರೆದವರನ್ನು ಉದ್ದೇಶಿಸಿ ಮೋಹನ್‌ ಭಾಗವತ್‌ ಭಾಷಣ ಮಾಡಿದರು.

ಇದನ್ನೂ ಓದಿ: Mohan Bhagwat: ಟೀಕೆಯ ಭರದಲ್ಲಿ ಭಾರತದ ಶಕ್ತಿಗೆ ಧಕ್ಕೆ ಕೂಡದು; ರಾಹುಲ್‌ ಗಾಂಧಿಗೆ ಮೋಹನ್‌ ಭಾಗವತ್‌ ಚಾಟಿ

ಭಾರತವನ್ನು ಅಭಿವೃದ್ಧಿ ಮಾಡುವುದು ಕೇವಲ ಒಬ್ಬ ವ್ಯಕ್ತಿಯ ಕೆಲಸವಲ್ಲ. ಪರಸ್ಪರ ಪ್ರೀತಿ, ವಿಶ್ವಾಸ, ಸಹಬಾಳ್ವೆಯಿಂದಲೇ ಸಮಾಜವನ್ನು ಸಂಘಟಿಸಬೇಕಾಗಿದೆ.ಈ ಭಾವವು ನಮ್ಮ ಸಮಾಜದಲ್ಲಿ ಹಿಂದಿನಿಂದಲೂ ಹಾಸುಹೊಕ್ಕಾಗಿದೆ. ಸಮಾಜದ ಉನ್ನತಿಗೆ ಪ್ರತಿಯೊಬ್ಬರೂ ಕೊಡುಗೆ ನೀಡಬೇಕು. ಕಾರ್ಯಾಲಯಗಳಲ್ಲಿ ಸ್ವಯಂಸೇವಕರು ಸಾತ್ವಿಕ ಪ್ರೇಮ, ಆತ್ಮೀಯತೆ, ಅನ್ಯೋನ್ಯತೆ, ಪ್ರಾಮಾಣಿಕ ಹಾಗೂ ನಿಸ್ವಾರ್ಥತೆ ಗುಣಗಳಿಂದ ಎಲ್ಲರೊಂದಿಗೆ ವ್ಯವಹರಿಸುತ್ತಾರೆ. ಅನ್ಯ ಸಂಘಟನೆಗಳು ದೇಶ ಹಾಗೂ ಸಮಾಜದ ಸಮಸ್ಯೆಗಳ ಬಗ್ಗೆ ಹೆಚ್ಚು ಚರ್ಚೆ ಮಾಡುತ್ತವೆ. ಆದರೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ಸ್ವಯಂಸೇವಕರು ಸಮಸ್ಯೆ ತಿಳಿಸುವ ಜತೆಗೆ ಉಪಾಯವನ್ನೂ ಹುಡುಕುತ್ತಾರೆ. ಕೋವಿಡ್‌ ಸಂದರ್ಭದಲ್ಲಿ ಎಲ್ಲರೂ ಪರಿಸ್ಥಿತಿಯನ್ನು ವಿಶ್ಲೇಷಣೆ ಮಾಡುತ್ತಿದ್ದರೆ ಸ್ವಯಂಸೇವಕರು ಪರಿಹಾರ ಕಾರ್ಯದಲ್ಲಿ ತೊಡಗಿಕೊಂಡಿದ್ದರು ಎಂದರು.

Exit mobile version