Mohan Bhagwat: ಟೀಕೆಯ ಭರದಲ್ಲಿ ಭಾರತದ ಶಕ್ತಿಗೆ ಧಕ್ಕೆ ಕೂಡದು; ರಾಹುಲ್‌ ಗಾಂಧಿಗೆ ಮೋಹನ್‌ ಭಾಗವತ್‌ ಚಾಟಿ Vistara News

ದೇಶ

Mohan Bhagwat: ಟೀಕೆಯ ಭರದಲ್ಲಿ ಭಾರತದ ಶಕ್ತಿಗೆ ಧಕ್ಕೆ ಕೂಡದು; ರಾಹುಲ್‌ ಗಾಂಧಿಗೆ ಮೋಹನ್‌ ಭಾಗವತ್‌ ಚಾಟಿ

Mohan Bhagwat: ನಾಗ್ಪುರದಲ್ಲಿ ನಡೆದ ಆರ್‌ಎಸ್‌ಎಸ್‌ ಕಾರ್ಯಕ್ರಮದಲ್ಲಿ ಮೋಹನ್‌ ಭಾಗವತ್‌ ಮಾತನಾಡಿದರು. ಭಾರತದ ಒಗ್ಗಟ್ಟು, ಸಂಸ್ಕೃತಿ, ಆಚಾರ-ವಿಚಾರ, ರಾಜಕೀಯ, ಕೇಂದ್ರ ಸರ್ಕಾರದ ಸಾಧನೆ ಸೇರಿ ಹಲವು ವಿಷಯಗಳ ಕುರಿತು ಮಾತನಾಡಿದರು.

VISTARANEWS.COM


on

Mohan Bhagwat At Nagpur RSS Programme
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನಾಗ್ಪುರ: ಬೇರೆ ದೇಶಗಳಲ್ಲಿ ಭಾರತದ ಕುರಿತು, ಭಾರತದ ಪ್ರಜಾಪ್ರಭುತ್ವದ ಕುರಿತು ಮಾತನಾಡುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್‌ ಭಾಗವತ್‌ (Mohan Bhagwat) ಪರೋಕ್ಷವಾಗಿ ಚಾಟಿ ಬೀಸಿದ್ದಾರೆ. “ಟೀಕೆ, ರಾಜಕೀಯದ ಭರದಲ್ಲಿ ಭಾರತದ ಒಗ್ಗಟ್ಟನ್ನು ಒಡೆಯಬಾರದು ಹಾಗೂ ದೇಶದ ಜನರಲ್ಲಿ ಭಿನ್ನಾಭಿಪ್ರಾಯ ಬಿತ್ತಬಾರದು” ಎಂದು ಹೇಳಿದರು.

ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ ತೃತೀಯ ವರ್ಷದ ಸಂಘ ಶಿಕ್ಷಾವರ್ಗದ ಸಮಾರೋಪ ಸಮಾರಂಭದಲ್ಲಿ ಮೋಹನ್‌ ಭಾಗವತ್ ಮಾತನಾಡಿದರು. “ನಮ್ಮ ದೇಶದ ಸ್ವಾತಂತ್ರ್ಯವನ್ನು ಹಾಳು ಮಾಡಲು ಶತ್ರು ಕಾದು ಕುಳಿತಿದ್ದಾನೆ. ಆದರೆ, ನಾವು ನಮ್ಮ ಶಕ್ತಿ ಪ್ರದರ್ಶನ ಮಾಡುವ ಬದಲು, ನಾವೇ ಕಚ್ಚಾಡುತ್ತಿದ್ದೇವೆ. ನಾವು ಒಬ್ಬರ ನಡುವೆ ಒಬ್ಬರು ಸೆಣಸಾಡುತ್ತಿದ್ದೇವೆ. ರಾಜಕಾರಣಕ್ಕೂ ಒಂದು ಸೀಮೆ ಇರಬೇಕು. ಪರಸ್ಪರ ಆರೋಪ ಮಾಡಿಕೊಳ್ಳುವಷ್ಟು ರಾಜಕೀಯ ಇರಲಿ. ಆದರೆ, ದೇಶದ ಜನರ ನಡುವೆಯೇ ಭಿನ್ನಾಭಿಪ್ರಾಯ ಬಿತ್ತುವ ಕೆಲಸ ಮಾಡಬಾರದು. ನಮ್ಮ ಜಗಳದಿಂದ ಶತ್ರುಗಳ ಉತ್ಸಾಹ ಹೆಚ್ಚಾಗುತ್ತದೆ” ಎಂದು ಹೇಳಿದರು.

ಅಮೆರಿಕ ಪ್ರವಾಸದಲ್ಲಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಕೇಂದ್ರೀಯ ತನಿಖಾ ಸಂಸ್ಥೆಗಳ ದುರ್ಬಳಕೆಯಾಗುತ್ತಿದೆ ಎಂದು ಹೇಳಿದ್ದರು. ಇದಕ್ಕೂ ಮೊದಲು ಕೂಡ ರಾಹುಲ್‌ ಗಾಂಧಿ ವಿದೇಶದಲ್ಲಿ ಇಂತಹ ಹೇಳಿಕೆ ನೀಡಿದ್ದರು. ಹಾಗಾಗಿ, ಮೋಹನ್‌ ಭಾಗವತ್‌ ಅವರು ರಾಹುಲ್‌ ಗಾಂಧಿ ಹೆಸರು ಉಲ್ಲೇಖಿಸದೆ ಅಸಮಾಧಾನ ವ್ಯಕ್ತಪಡಿಸಿದರು.

ನಾಗ್ಪುರದಲ್ಲಿ ನಡೆದ ತೃತೀಯ ವರ್ಷದ ಸಂಘ ಶಿಕ್ಷಾವರ್ಗದ ಸಮಾರೋಪ ಸಮಾರಂಭ

ಭಾರತದಲ್ಲಿ ಇಸ್ಲಾಂ ಸುರಕ್ಷಿತ

“ಭಾರತವು ಮಾತೃಭೂಮಿಯಾಗಿದ್ದು, ಎಲ್ಲರೂ ಇದನ್ನೇ ಅಳವಡಿಸಿಕೊಳ್ಳಬೇಕು. ಸ್ಪೇನ್‌ನಿಂದ ಹಿಡಿದು ಮಂಗೋಲಿಯಾತನಕ ಇಸ್ಲಾಂ ದಾಳಿ ನಡೆದಿದೆ. ಕಾಲದ ನಂತರ ಆಕ್ರಮಣಕಾರರನ್ನು ಆಯಾ ದೇಶಗಳು ಹೊರದಬ್ಬಿದವು. ಭಾರತದಿಂದ ಬ್ರಿಟಿಷರು ಹೋದರು. ಆದರೆ, ಭಾರತದಲ್ಲೇ ಉಳಿದ ಮುಸ್ಲಿಮರು ಇಂದಿಗೂ ಸುರಕ್ಷಿತರಾಗಿದ್ದಾರೆ. ಭಾರತದಲ್ಲಿ ಇಸ್ಲಾಂ ಆಚರಣೆಯು ಸುರಕ್ಷಿತವಾಗಿದೆ. ನಾವು ಬೇರೆ ಬೇರೆ ರೀತಿ ಕಾಣಬಹುದು, ಆಚಾರ-ವಿಚಾರಗಳು ಬೇರೆ ಬೇರೆ ಇರಬಹುದು, ವಿದೇಶಿ ಆಚರಣೆಗಳು ಕೂಡ ಇರಬಹುದು. ಆದರೂ, ಇದನ್ನು ಹೊರತಾಗಿ ನಾವು ಒಗ್ಗಟ್ಟಾಗಿ ಇರಬೇಕು. ನಮ್ಮ ವೈವಿಧ್ಯತೆಯ ಮಧ್ಯೆಯೂ ಏಕತೆಯನ್ನು ಮೆರೆಯಬೇಕು. ಇದು ನಮ್ಮ ಸಂಸ್ಕೃತಿಯಾಗಿದ್ದು, ಇದನ್ನು ಮರೆಯಬಾರದು” ಎಂದು ಹೇಳಿದರು.

ಭಾಗವತ್‌ ಭಾಷಣದ ವಿಡಿಯೊ

ಇದನ್ನೂ ಓದಿ: Mohan Bhagwat: ಭಾರತ ವಿಶ್ವಗುರು ಆಗುವುದನ್ನು ತಡೆಯಲು ಷಡ್ಯಂತ್ರ: ಮೋಹನ್‌ ಭಾಗವತ್‌

ಕೇಂದ್ರ ಸರ್ಕಾರಕ್ಕೆ ಮೆಚ್ಚುಗೆ

ಕೊರೊನಾ ನಿರ್ವಹಣೆ, ಜಿ-20 ಸಭೆಯ ಅಧ್ಯಕ್ಷತೆ, ಹೊಸ ಸಂಸತ್‌ ಭವನ ನಿರ್ಮಾಣ ಸೇರಿ ಹಲವು ವಿಷಯಗಳನ್ನು ಪ್ರಸ್ತಾಪಿಸಿ ಕೇಂದ್ರ ಸರ್ಕಾರಕ್ಕೆ ಆರ್‌ಎಸ್‌ಎಸ್‌ ಮೆಚ್ಚುಗೆ ಸೂಚಿಸಿತು. “ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತವು ವಿಶ್ವದಲ್ಲಿಯೇ ಮಾದರಿಯಾಗಿ ನಿರ್ವಹಣೆ ಮಾಡಿದೆ. ಜಿ-20 ಸಭೆಗಳ ಅಧ್ಯಕ್ಷತೆ ಭಾರತಕ್ಕೆ ಸಿಕ್ಕಿದೆ. ಇನ್ನು, ನೂತನ ಸಂಸತ್‌ ಭವನ, ಅಲ್ಲಿರುವ ಚಿತ್ರಗಳನ್ನು ನೋಡಿದರೆ ದೇಶದಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗುತ್ತಿದೆ. ಇದರಿಂದ ಜನಸಾಮಾನ್ಯರಿಗೆ ಸಂತಸ ಎನಿಸುತ್ತದೆ” ಎಂದು ಮೋಹನ್‌ ಭಾಗವತ್‌ ಹೇಳಿದರು. ಸಮಾರೋಪ ಕಾರ್ಯಕ್ರಮದಲ್ಲಿ ಕರ್ನಾಟಕದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಭಾಗಿಯಾಗಿದ್ದರು.

ದೇಶದ ಮತ್ತಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ದೇಶ

ಮುಸ್ಲಿಮರಿಂದ ಹತ್ಯೆಗೀಡಾದ ಯುವಕನ ತಂದೆ 7 ಬಾರಿಯ ಕಾಂಗ್ರೆಸ್ ಶಾಸಕನನ್ನು ಸೋಲಿಸಿದರು!

ಛತ್ತೀಸ್‌ಗಢದಲ್ಲಿ ಬಿಜೆಪಿಯ ಈಶ್ವರ್‌ ಸಾಹು ಅವರು ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ, ಕಾಂಗ್ರೆಸ್‌ನ ರವೀಂದ್ರ ಚೌಬೆ ಅವರನ್ನು ಸೋಲಿಸುವ ಮೂಲಕ ರಾಜ್ಯಾದ್ಯಂತ ಸುದ್ದಿಯಾಗಿದ್ದಾರೆ. ಇವರು ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಎಂಬುದು ಗಮನಾರ್ಹ ಸಂಗತಿಯಾಗಿದೆ.

VISTARANEWS.COM


on

Ishwar Sahu
Koo

ರಾಯ್‌ಪುರ: ತೆಲಂಗಾಣದ ಕಾಮರೆಡ್ಡಿ ಕ್ಷೇತ್ರದಲ್ಲಿ ಬಿಜೆಪಿಯ ಕೆ. ವೆಂಕಟರಮಣ ರೆಡ್ಡಿ ಅವರು ಹಾಲಿ ಸಿಎಂ ಕೆ.ಚಂದ್ರಶೇಖರ್‌ ರಾವ್‌ ಹಾಗೂ ಭಾವಿ ಸಿಎಂ ರೇವಂತ್‌ ರೆಡ್ಡಿ ಅವರನ್ನು ಸೋಲಿಸಿ ಅಚ್ಚರಿ (Election Results 2023) ಮೂಡಿಸಿದಂತಹ ಫಲಿತಾಂಶವು ಛತ್ತೀಸ್‌ಗಢದಲ್ಲೂ (Chhattisgarh Assembly Election Result) ಲಭ್ಯವಾಗಿದೆ. ಉದ್ರಿಕ್ತ ಮುಸ್ಲಿಮರ ಗುಂಪಿನಿಂದ ಹತ್ಯೆಗೀಡಾಗಿದ್ದ ಯುವಕನ ತಂದೆಯು ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದವರನ್ನು ಸೋಲಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಛತ್ತೀಸ್‌ಗಢದ ಸಾಜಾ ಕ್ಷೇತ್ರದಲ್ಲಿ ಬಿಜೆಪಿಯ ಈಶ್ವರ್‌ ಸಾಹು (Ishwar Sahu) ಅವರು ಕಾಂಗ್ರೆಸ್‌ನ ರವೀಂದ್ರ ಚೌಬೆ (Ravindra Choubey) ಅವರನ್ನು ಸೋಲಿಸಿದ್ದಾರೆ.

ಈಶ್ವರ್‌ ಸಾಹು ಅವರ ಕುರಿತು ಬಿಜೆಪಿ ಐಟಿ ವಿಭಾಗದ ರಾಷ್ಟ್ರೀಯ ಉಸ್ತುವಾರಿ ಅಮಿತ್‌ ಮಾಳವಿಯ ಅವರು ಮಾಹಿತಿ ನೀಡಿದ್ದಾರೆ. “ಇವರು ಈಶ್ವರ್‌ ಸಾಹು. ಕಾರ್ಮಿಕರಾಗಿದ್ದ ಇವರೀಗ ಛತ್ತೀಸ್‌ಗಢದಲ್ಲಿ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇವರ ಮಗ ಮುಸ್ಲಿಮರಿಂದ ಹತ್ಯೆಗೀಡಾಗಿದ್ದಾನೆ. ಬಿಜೆಪಿಯು ಈಶ್ವರ್‌ ಸಾಹು ಅವರಿಗೆ ಟಿಕೆಟ್‌ ನೀಡಿತು. ಆದರೆ, ಕಾಂಗ್ರೆಸ್‌ ಕೊಲೆಗಾರರ ಪರವಾಗಿ ನಿಂತಿತು. ಆದರೂ, ಈಶ್ವರ್‌ ಸಾಹು ಅವರು ಏಳು ಬಾರಿಯ ಶಾಸಕ ರವೀಂದ್ರ ಚೌಬೆ ಅವರನ್ನು ಸೋಲಿಸಿದ್ದಾರೆ” ಎಂದು ಈಶ್ವರ್‌ ಸಾಹು ಅವರ ಫೋಟೊ ಸಮೇತ ಪೋಸ್ಟ್‌ ಮಾಡಿದ್ದಾರೆ.

ಈಶ್ವರ್‌ ಸಾಹು ಅವರು ಇದಕ್ಕೂ ಮೊದಲು ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಇವರು ಚುನಾವಣೆಯಲ್ಲಿ 1,01,789 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್‌ ಶಾಸಕ ರವೀಂದ್ರ ಚೌಬೆ ಅವರು 96,593 ಮತಗಳನ್ನು ಪಡೆದರು. ಇದರೊಂದಿಗೆ ಈಶ್ವರ್‌ ಸಾಹು ಅವರು 5,196 ಮತಗಳಿಂದ ಗೆಲುವು ಸಾಧಿಸಿದ್ದಾರೆ. ರವೀಂದ್ರ ಚೌಬೆ ಅವರು 1985ರಿಂದ ಇದುವರೆಗೆ ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇವರು ಭೂಪೇಶ್‌ ಬಘೇಲ್‌ ಸರ್ಕಾರದಲ್ಲಿ ಸಂಸದೀಯ ವ್ಯವಹಾರಗಳ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಇವರನ್ನು ಈಶ್ವರ್‌ ಸಾಹು ಅವರು ಸೋಲಿಸಿರುವುದು ಭಾರಿ ಸುದ್ದಿಯಾಗಿದೆ.

ಇದನ್ನೂ ಓದಿ: ತೆಲಂಗಾಣದಲ್ಲಿ ಹಾಲಿ, ಭಾವಿ ಸಿಎಂಗಳನ್ನೇ ಸೋಲಿಸಿದ ಬಿಜೆಪಿಯ ವೆಂಕಟರಮಣ ರೆಡ್ಡಿ; ಯಾರಿವರು?

ಈಶ್ವರ್‌ ಸಾಹು ಪುತ್ರನ ಕೊಲೆ

ಈಶ್ವರ್‌ ಸಾಹು ಅವರ ಪುತ್ರ ಭುವನೇಶ್ವರ್‌ ಸಾಹು ಅವರನ್ನು 2023ರ ಏಪ್ರಿಲ್‌ನಲ್ಲಿ ಮುಸ್ಲಿಮರ ಗುಂಪೊಂದು ಹತ್ಯೆ ಮಾಡಿದೆ. ಬೆಮೆತಾರ ಜಿಲ್ಲೆಯ ಬಿರಾನ್‌ಪುರ ಗ್ರಾಮದಲ್ಲಿ ಏಪ್ರಿಲ್‌ 8ರಂದು ನಡೆದ ಗಲಾಟೆಯ ವೇಳೆ ಮುಸ್ಲಿಮರ ಗುಂಪೊಂದು ಕತ್ತಿ, ಖಡ್ಗ ಸೇರಿ ಹಲವು ಮಾರಕಾಸ್ತ್ರಗಳಿಂದ ಕೊಚ್ಚಿ ಭುವನೇಶ್ವರ್‌ ಸಾಹು ಅವರನ್ನು ಕೊಲೆ ಮಾಡಿತ್ತು. ಇದಾದ ಬಳಿಕ ಬಿಜೆಪಿಯು ಈಶ್ವರ್‌ ಸಾಹು ಅವರಿಗೆ ಟಿಕೆಟ್‌ ನೀಡಿತ್ತು. ಚುನಾವಣೆ ವೇಳೆ ಈಶ್ವರ್‌ ಸಾಹು ಅವರು ರವೀಂದ್ರ ಚೌಬೆ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅಲ್ಲದೆ, ಅಬ್ಬರದ ಪ್ರಚಾರ ಕೈಗೊಂಡಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಪಂಚ ರಾಜ್ಯಗಳ ಚುನಾವಣೆ ಫಲಿತಾಂಶದ ಕುತೂಹಲಕರ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ: https://vistaranews.com/tag/assembly-election-2023

Continue Reading

ದೇಶ

ತೆಲಂಗಾಣದಲ್ಲಿ ಹಾಲಿ, ಭಾವಿ ಸಿಎಂಗಳನ್ನೇ ಸೋಲಿಸಿದ ಬಿಜೆಪಿಯ ವೆಂಕಟರಮಣ ರೆಡ್ಡಿ; ಯಾರಿವರು?

ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶವೊಂದು ಲಭ್ಯವಾಗಿದೆ. ಕಾಮರೆಡ್ಡಿ ಕ್ಷೇತ್ರದಲ್ಲಿ ಬಿಜೆಪಿಯ ಕೆ. ವೆಂಕಟರಮಣ ರೆಡ್ಡಿ ಅವರು ಕಾಂಗ್ರೆಸ್‌ ಹಾಗೂ ಬಿಆರ್‌ಎಸ್‌ನ ದೈತ್ಯರನ್ನು ಸೋಲಿಸುವ ಮೂಲಕ ರಾಜ್ಯಾದ್ಯಂತ ಸುದ್ದಿಯಾಗಿದ್ದಾರೆ.

VISTARANEWS.COM


on

Venkataramana Reddy
Koo

ಹೈದರಾಬಾದ್:‌ ಚುನಾವಣೆಗಳು ಎಂದರೇನೇ ಹಾಗೆ. ಬಲಿಷ್ಠ ನಾಯಕರು ಎನಿಸಿಕೊಂಡವರು, ಅಹಂಕಾರದಿಂದ ಮೆರೆದವರು, ಸೋಲೇ ಕಾಣದವರು ಕೂಡ ಸೋಲನುಭವಿಸುತ್ತಾರೆ. ಹಾಗೆಯೇ, ಹೆಚ್ಚು ಸುದ್ದಿಯಾಗದವರು, ಸಾಮಾನ್ಯ ಹಿನ್ನೆಲೆ ಹೊಂದಿದವರು ಕೂಡ ಭರ್ಜರಿ ಗೆಲುವು ಸಾಧಿಸಿ ಅಚ್ಚರಿ ಮೂಡಿಸುತ್ತಾರೆ. ತೆಲಂಗಾಣದಲ್ಲಿ ಹೀಗೆ ಬಲಿಷ್ಠರನ್ನು ಸೋಲಿಸುವ ಮೂಲಕ ಬಿಜೆಪಿಯ ಕೆ. ವೆಂಕಟರಮಣ ರೆಡ್ಡಿ ಅವರು ಅಚ್ಚರಿ ಮೂಡಿಸಿದ್ದಾರೆ. ಇವರು ಹಾಲಿ ಮುಖ್ಯಮಂತ್ರಿ, ಬಿಆರ್‌ಎಸ್‌ನ ಕೆ. ಚಂದ್ರಶೇಖರ್‌ ರಾವ್‌ ಹಾಗೂ ಭಾವಿ ಸಿಎಂ ಎಂದೇ ಹೇಳಲಾಗುತ್ತಿರುವ ಕಾಂಗ್ರೆಸ್‌ನ ರೇವಂತ್‌ ರೆಡ್ಡಿ ಅವರನ್ನು ಸೋಲಿಸುವ ಮೂಲಕ ಸುದ್ದಿಯಾಗಿದ್ದಾರೆ.

ಹೌದು, ಕೆ. ವೆಂಕಟರಮಣ ರೆಡ್ಡಿ ಅವರು ಕಾಮರೆಡ್ಡಿ ವಿಧಾಣಸಭೆ ಕ್ಷೇತ್ರದಲ್ಲಿ ಕೆಸಿಆರ್‌ ಹಾಗೂ ತೆಲಂಗಾಣ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ರೇವಂತ್‌ ರೆಡ್ಡಿ ಅವರನ್ನು ಸೋಲಿಸಿದ್ದಾರೆ. ಇವರು ಕೆಸಿಆರ್‌ ಅವರಿಗಿಂತ 6,741 ಅಧಿಕ ಮತಗಳನ್ನು ಪಡೆಯುವ ಮೂಲಕ ಗೆಲುವಿನ ನಗೆ ಬೀರಿದ್ದಾರೆ. ಅಲ್ಲದೆ, ಘಟಾನುಘಟಿಗಳನ್ನೇ ಸೋಲಿಸಿ ದೇಶಾದ್ಯಂತ ಸುದ್ದಿಯಾಗಿದ್ದಾರೆ. ಇದರಿಂದಾಗಿ ಅವರು ರಾಜ್ಯದಲ್ಲಿ ಬಿಜೆಪಿ ಪ್ರಮುಖ ನಾಯಕರಾಗಿಯೂ ಹೊರಹೊಮ್ಮಿದ್ದಾರೆ.

ಯಾರಿವರು ವೆಂಕಟರಮಣ ರೆಡ್ಡಿ?

ಕೆವಿಆರ್‌ ಎಂದೇ ಖ್ಯಾತಿಯಾಗಿರುವ ಕಾಟಿಪಳ್ಳಿ ವೆಂಕಟರಮಣ ರೆಡ್ಡಿ ಅವರು ಕಾಮರೆಡ್ಡಿ ವಿಧಾನಸಭೆ ಕ್ಷೇತ್ರದ ನಾಯಕರಾಗಿದ್ದಾರೆ. ಕೆ. ಚಂದ್ರಶೇಖರ್‌ ರಾವ್‌ ಅವರ ತೆಲಂಗಾಣ ರಾಷ್ಟ್ರ ಸಮಿತಿ (ಈಗ ಬಿಆರ್‌ಎಸ್)‌ ಪಕ್ಷದಲ್ಲಿದ್ದ ಇವರು ಬಳಿಕ ಬಿಜೆಪಿ ಸೇರಿದ್ದರು. ಉದ್ಯಮಿಯಾಗಿದ್ದ ಇವರು ರಾಜಕೀಯ ಪ್ರವೇಶಿಸಿ, ಟಿಆರ್‌ಎಸ್‌ ಬಿಟ್ಟು, ಬಿಜೆಪಿ ಸೇರಿ ಈಗ ಇತಿಹಾಸ ಸೃಷ್ಟಿಸಿದ್ದಾರೆ.

ಇವರ ಗೆಲುವಿಗೆ ಕಾರಣವೇನು?

ಕೆ. ವೆಂಕಟರಮಣ ರೆಡ್ಡಿ ಅವರು ಕಾಮರೆಡ್ಡಿ ಕ್ಷೇತ್ರದಲ್ಲಿ ಭರ್ಜರಿ ಗೆಲುವು ಸಾಧಿಸಲು ಹಲವು ಕಾರಣಗಳಿವೆ. ಕೆ. ಚಂದ್ರಶೇಖರ್‌ ರಾವ್‌ ಹಾಗೂ ರೇವಂತ್‌ ರೆಡ್ಡಿ ಅವರು ಸ್ಥಳೀಯರಲ್ಲ. ಆದರೆ, 53 ವರ್ಷದ ಕೆ. ವೆಂಕಟರಮಣ ರೆಡ್ಡಿ ಅವರು ಸ್ಥಳೀಯ ನಾಯಕರಾಗಿದ್ದಾರೆ. ಅಲ್ಲದೆ, ಬಿರುಸಿನ ಪ್ರಚಾರ, ಕೆಸಿಆರ್‌ ಹಾಗೂ ರೇವಂತ್‌ ರೆಡ್ಡಿ ಅವರು ಹೊರಗಿನವರು, ಅವರಿಂದ ಕ್ಷೇತ್ರದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಜನರಿಗೆ ಮನವರಿಕೆ ಮಾಡಿದ್ದರಿಂದ ಮುನ್ನಡೆ ಸಾಧಿಸಲು ಸಾಧ್ಯವಾಗಿದೆ ಎಂದು ವಿಶ್ಲೇಷಿಸಲಾಗಿದೆ.

ಇದನ್ನೂ ಓದಿ: ತೆಲಂಗಾಣ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆ ಹಕ್ಕು ಮಂಡಿಸಿದ ಕಾಂಗ್ರೆಸ್

“ನಾನು ಇಲ್ಲಿಯೇ ಹುಟ್ಟಿದ್ದೇನೆ ಹಾಗೂ ಸಾಯುವತನಕ ಇಲ್ಲಿಯೇ ಇರುತ್ತೇನೆ. ಹೊರಗಿನವರಿಗೆ ಮತ ಹಾಕುವುದು ಎಂದರೆ, ನಾವೇ ಮುಳುಗಿದಂತೆ” ಎಂದು ಚುನಾವಣೆ ಪ್ರಚಾರದ ವೇಳೆ ಕೆ. ವೆಂಕಟರಮಣ ರೆಡ್ಡಿ ಅಬ್ಬರದ ಭಾಷಣ ಮಾಡುತ್ತಿದ್ದರು. ಯುವಕರನ್ನು ಸೆಳೆದು, ಕಾರ್ಯಕರ್ತರನ್ನು ಹಿಡಿದಿಟ್ಟುಕೊಂಡು ಗೆಲುವು ಸಾಧಿಸಿದ ಇವರೀಗ ಸೆಲೆಬ್ರಿಟಿ ರಾಜಕಾರಣಿಯಾಗಿಯೂ ಬದಲಾಗಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಯಾರು ಏನು ಬೇಕಾದರೂ ಆಗಬಹುದು, ಯಾರು ಯಾರನ್ನು ಬೇಕಾದರೂ ಸೋಲಿಸಬಹುದು ಎಂಬುದಕ್ಕೆ ಇವರೇ ಸಾಕ್ಷಿಯಾಗಿದ್ದಾರೆ. ತೆಲಂಗಾಣದಲ್ಲಿ ಕಾಂಗ್ರೆಸ್‌ 64 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಅಧಿಕಾರದ ಗದ್ದುಗೆ ಏರಿದೆ. ರೇವಂತ್‌ ರೆಡ್ಡಿ ಅವರೇ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಬಿಆರ್‌ಎಸ್‌ 39 ಕ್ಷೇತ್ರಗಳಲ್ಲಿ ಗೆದ್ದರೆ, ಬಿಜೆಪಿ 8 ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಪಂಚ ರಾಜ್ಯಗಳ ಚುನಾವಣೆ ಫಲಿತಾಂಶದ ಕುತೂಹಲಕರ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ: https://vistaranews.com/tag/assembly-election-2023

Continue Reading

ದೇಶ

Mizoram Election Result: ಮಿಜೋರಾಂ ಫಲಿತಾಂಶಕ್ಕೆ ಕ್ಷಣಗಣನೆ; ಯಾರಿಗೆ ಗೆಲುವು?

Mizoram Election Result: ಮಿಜೋರಾಂ ವಿಧಾನಸಭೆ ಚುನಾವಣೆ ಫಲಿತಾಂಶ ಸೋಮವಾರ ಪ್ರಕಟವಾಗಲಿದೆ. ಬೆಳಗ್ಗೆ 8 ಗಂಟೆಯಿಂದಲೇ ಮತ ಎಣಿಕೆ ಆರಂಭವಾಗಲಿದ್ದು, ಮಧ್ಯಾಹ್ನದ ವೇಳೆಗೆ ಸ್ಪಷ್ಟ ಚಿತ್ರಣ ದೊರೆಯಲಿದೆ.

VISTARANEWS.COM


on

Mizoram Election Result
Koo

ಐಜ್ವಾಲ್:‌ ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ (Assembly Elections 2023) ಪ್ರಕಟವಾಗಿದ್ದು, ರಾಜಕೀಯ ಪಕ್ಷಗಳು ಸೋಲು-ಗೆಲುವಿಗೆ ಕಾರಣಗಳನ್ನು ಹುಡುಕುವುದು, ಆತ್ಮಾವಲೋಕನ, ಸಂಭ್ರಮಾಚರಣೆಯಲ್ಲಿ ತೊಡಗಿವೆ. ಇದರ ಬೆನ್ನಲ್ಲೇ ಸೋಮವಾರ (ಡಿಸೆಂಬರ್‌ 4) ಮಿಜೋರಾಂ ವಿಧಾನಸಭೆ ಚುನಾವಣೆ ಫಲಿತಾಂಶವೂ (Mizoram Election Result) ಪ್ರಕಟವಾಗಲಿದ್ದು, ಪ್ರಾದೇಶಿಕ ಪಕ್ಷಗಳ ಸಮರದಲ್ಲಿ ಯಾವ ಪಕ್ಷ ಗೆಲುವು ಸಾಧಿಸಲಿದೆ ಎಂಬ ಕುತೂಹಲ ಮೂಡಿದೆ.

ಈಶಾನ್ಯ ರಾಜ್ಯ ಮಿಜೋರಾಮ್‌ನಲ್ಲಿ ಆಡಳಿತಾರೂಢ ಮಿಜೋ ನ್ಯಾಷನಲ್ ಫ್ರಂಟ್ (MNF), ಪ್ರಮುಖ ವಿರೋಧ ಪಕ್ಷ ಝೋರಾಂ ಪೀಪಲ್ಸ್ ಮೂವ್ಮೆಂಟ್ (ZPM) ಮತ್ತು ಕಾಂಗ್ರೆಸ್ (Congress Party) ಮಧ್ಯೆ ಸ್ಪರ್ಧೆ ಏರ್ಪಟ್ಟಿತ್ತು. ಮತದಾರರು ಆಡಳಿತಾರೂಢ ಎಂಎನ್‌ಎಫ್‌ ಪರವಾಗಿ ತಮ್ಮ ಒಲವು ತೋರಿಸಿದ್ದಾರೆ ಎಂದು ಎಕ್ಸಿಟ್ ಪೋಲ್‌ಗಳು ಹೇಳುತ್ತಿವೆ. ಇಷ್ಟಾಗಿಯೂ ಕೆಲವು ಸಮೀಕ್ಷೆಗಳು ಅತಂತ್ರ ವಿಧಾನಸಭೆಯನ್ನು ಊಹಿಸಿವೆ. ಅಂತಿಮವಾಗಿ ಯಾರ ಪಾಲಿಗೆ ಜಯ ದಕ್ಕಲಿದೆ ಎಂಬುದು ಸೋಮವಾರ ಗೊತ್ತಾಗಲಿದೆ. ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದ್ದು, ಮಧ್ಯಾಹ್ನದ ವೇಳೆಗೆ ಫಲಿತಾಂಶದ ಸ್ಪಷ್ಟ ಚಿತ್ರಣ ದೊರೆಯಲಿದೆ.

ಮುಖ್ಯಮಂತ್ರಿ ಜೊರಾಮ್‌ಥಾಂಗ

40 ಸದಸ್ಯರ ಮಿಜೋರಾಂ ವಿಧಾನಸಭೆಗೆ ನವೆಂಬರ್ 7 ರಂದು ಮತದಾನ ಶಾಂತಿಯುತವಾಗಿ ನಡೆದಿತ್ತು. ಶೇಕಡಾ 80 ಕ್ಕೂ ಹೆಚ್ಚು ಮತದಾನ ದಾಖಲಾಗಿದೆ. ಈ ಬಾರಿ ಮಿಜೋರಾಂನಲ್ಲಿ ಶೇ.81.25ರಷ್ಟು ಮಹಿಳಾ ಮತದಾರರು ಹಾಗೂ ಶೇ.80.04ರಷ್ಟು ಪುರುಷ ಮತದಾರರು ಮತ ಚಲಾಯಿಸಿದ್ದಾರೆ. ರಾಜ್ಯದ ಒಟ್ಟು 8.52 ಲಕ್ಷ ಮತದಾರರಲ್ಲಿ ಶೇಕಡಾ 174 ಅಭ್ಯರ್ಥಿಗಳ ಚುನಾವಣಾ ಭವಿಷ್ಯವನ್ನು ನಿರ್ಧರಿಸಲು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ. ರಾಜ್ಯದ ಎಲ್ಲಾ 11 ಜಿಲ್ಲೆಗಳ ಪೈಕಿ, ಸೆರ್ಚಿಪ್ ಜಿಲ್ಲೆಯಲ್ಲಿ ಅತಿ ಹೆಚ್ಚು 84.78% ಮತದಾನ ದಾಖಲಾಗಿದ್ದು, ಮಾಮಿತ್ ಜಿಲ್ಲೆಯಲ್ಲಿ 84.65%, ಹನ್ಹಥಿಯಾಲ್ ಜಿಲ್ಲೆಯಲ್ಲಿ 84.19% ಮತ್ತು ಲುಂಗ್ಲೈ ಜಿಲ್ಲೆಯಲ್ಲಿ 83.68% ಮತದಾನವಾಗಿದೆ.

ಇದನ್ನೂ ಓದಿ: Assembly Elections 2023: ಬಿಜೆಪಿಗೆ ನಾಲ್ಕನೇ ಮೂರು ಬಹುಮತ, ಕಾಂಗ್ರೆಸ್‌ಗೆ ಒಂದೇ ಗ್ಯಾರಂಟಿ!

18 ಮಹಿಳಾ ಅಭ್ಯರ್ಥಿಗಳು ಸೇರಿದಂತೆ ಒಟ್ಟು 174 ಅಭ್ಯರ್ಥಿಗಳು ಕಣದಲ್ಲಿದ್ದರು. ಆಡಳಿತಾರೂಢ ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್ಎಫ್), ಪ್ರಮುಖ ವಿರೋಧ ಪಕ್ಷ ಝೋರಾಂ ಪೀಪಲ್ಸ್ ಮೂವ್‌ಮೆಂಟ್ (ಝೆಡ್‌ಪಿಎಂ) ಮತ್ತು ಕಾಂಗ್ರೆಸ್ ತಲಾ 40 ಸ್ಥಾನಗಳಲ್ಲಿ ಸ್ಪರ್ಧಿಸಿದ್ದವು. ಇದಕ್ಕೆ ಹೋಲಿಸಿದರೆ, ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷ (ಎಎಪಿ) ಕ್ರಮವಾಗಿ 23 ಮತ್ತು 4 ಸ್ಥಾನಗಳಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸಿವೆ. 2018 ರ ನವೆಂಬರ್​ನಲ್ಲಿ ನಡೆದ ಕೊನೆಯ ವಿಧಾನಸಭಾ ಚುನಾವಣೆಯಲ್ಲಿ ಎಂಎನ್ಎಫ್ 26 ಸ್ಥಾನಗಳನ್ನು, ಝೆಡ್‌ಪಿಎಂ 8 ಸ್ಥಾನಗಳನ್ನು, ಕಾಂಗ್ರೆಸ್ 5 ಮತ್ತು ಬಿಜೆಪಿ 1 ಸ್ಥಾನಗಳನ್ನು ಗೆದ್ದಿದೆ. 

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶದ ಕುತೂಹಲಕರ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ: https://vistaranews.com/tag/assembly-election-2023

Continue Reading

ದೇಶ

ವಿಸ್ತಾರ ಸಂಪಾದಕೀಯ: ವಿಧಾನಸಭೆ ಚುನಾವಣೆ ಫಲಿತಾಂಶ; ‘ಗ್ಯಾರಂಟಿ’ಯೇ ಅಂತಿಮವಲ್ಲ!

Vistara Editorial: ಬಿಜೆಪಿ ಈ ಫಲಿತಾಂಶವನ್ನು ಸಹಜವಾಗಿಯೇ ಹುಮ್ಮಸ್ಸಿನಿಂದ ಸ್ವೀಕರಿಸಿದೆ. ಅದು ಸಹಜ. ಇದು ಲೋಕಸಭೆ ಚುನಾವಣೆ ಫಲಿತಾಂಶದ ದಿಕ್ಸೂಚಿಯೂ ಹೌದು. ದುರಾಡಳಿತ, ಕಳಪೆ ಆಡಳಿತವನ್ನು ಜನ ಸಹಿಸುವುದಿಲ್ಲ ಎಂಬ ಸಂದೇಶವನ್ನೂ ಈ ಫಲಿತಾಂಶ ರವಾನಿಸಿದೆ.

VISTARANEWS.COM


on

4 state election results shows us that, freebies are not the way for win elections
Koo

2024ರ ಲೋಕಸಭೆ ಚುನಾವಣೆಯ (Lok Sabha Election 2024) ಸೆಮಿಫೈನಲ್‌ ಎಂದೇ ವಿಶ್ಲೇಷಿಸಲಾಗಿದ್ದ ಪಂಚರಾಜ್ಯ ಚುನಾವಣೆಯಲ್ಲಿ (Assembly Elections 2023) ನಾಲ್ಕು ರಾಜ್ಯಗಳ ಫಲಿತಾಂಶ ಭಾನುವಾರ (ಡಿಸೆಂಬರ್‌ 3) ಹೊರಬಿದ್ದಿದ್ದು, ಭಾರತೀಯ ಜನತಾ ಪಕ್ಷ ಮೂರು ರಾಜ್ಯಗಳಲ್ಲಿ ನಿಚ್ಚಳ ಬಹುಮತದೊಂದಿಗೆ ಜಯಭೇರಿ ಬಾರಿಸಿದೆ. ಕಾಂಗ್ರೆಸ್‌ ಒಂದು ರಾಜ್ಯವನ್ನು ಗೆದ್ದುಕೊಂಡಿದೆ. ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್‌ಗಢದಲ್ಲಿ ಬಿಜೆಪಿ ಗದ್ದುಗೆ ಏರಿದ್ದರೆ, ತೆಲಂಗಾಣದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೇರಿದೆ. ಬಿಜೆಪಿ ಮಧ್ಯಪ್ರದೇಶವನ್ನು ಉಳಿಸಿಕೊಂಡು ರಾಜಸ್ಥಾನ ಮತ್ತು ಛತ್ತೀಸ್‌ ಗಢವನ್ನು ಕಾಂಗ್ರೆಸ್‌ ಕೈಯಿಂದ ಕಸಿದುಕೊಂಡಿದೆ. ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಅಧಿಕಾರ ಕಳೆದುಕೊಂಡ ಕಾಂಗ್ರೆಸ್‌ ತೆಲಂಗಾಣದಲ್ಲಿ 10 ವರ್ಷಗಳ ಕೆ ಚಂದ್ರಶೇಖರ ರಾವ್‌ (ಭಾರತ ರಾಷ್ಟ್ರ ಸಮಿತಿ- ಬಿಆರ್‌ಎಸ್‌) ಪಾರುಪತ್ಯವನ್ನು ಕೊನೆಗಾಣಿಸಿದೆ. ಈ ಫಲಿತಾಂಶಗಳು ನೀಡುತ್ತಿರುವ ಸಂದೇಶವನ್ನು ನಾವು ವಿಶ್ಲೇಷಿಸಬಹುದಾಗಿದೆ(Vistara editorial).

ಮೂರು ರಾಜ್ಯಗಳನ್ನು ಗೆದ್ದುಕೊಳ್ಳುವ ಮೂಲಕ ಉತ್ತರ ಭಾರತದಲ್ಲಿ ಬಿಜೆಪಿ ತನ್ನ ಪಾರಮ್ಯವನ್ನು ಇನ್ನಷ್ಟು ಗಟ್ಟಿಗೊಳಿಸಿದ್ದರೆ, ಕಾಂಗ್ರೆಸ್‌ ತೆಲಂಗಾಣದ ಗೆಲುವಿನ ಮೂಲಕ ದಕ್ಷಿಣ ಭಾರತದಲ್ಲಿ ತನ್ನ ಬಲವನ್ನು ಹೆಚ್ಚಿಸಿಕೊಂಡಿದೆ. ಕರ್ನಾಟಕದಲ್ಲಿ ನಡೆದ ಚುನಾವಣೆಯಲ್ಲಿ ಗ್ಯಾರಂಟಿಗಳ ಪ್ರಭಾವದಿಂದ ಕಾಂಗ್ರೆಸ್‌ ದೊಡ್ಡ ಗೆಲುವನ್ನು ಸಾಧಿಸಿದ ಬಳಿಕ ಗೊಂದಲದಲ್ಲಿ ಮುಳುಗಿದ್ದ ಬಿಜೆಪಿಗೆ ಈ ಚುನಾವಣೆ ಫಲಿತಾಂಶ ಧೈರ್ಯವನ್ನು ತುಂಬಿದೆ. ಇದು ಬಿಜೆಪಿಯ 2024ರ ಲೋಕಸಭಾ ಚುನಾವಣಾ ಓಟಕ್ಕೆ ಎದುರಾಗಿದ್ದ ಆತಂಕವನ್ನು ದೂರ ಮಾಡಿದೆ. ಬಿಜೆಪಿ ಗೆದ್ದಿರುವ ಮೂರು ರಾಜ್ಯಗಳಲ್ಲೇ 65 ಸ್ಥಾನಗಳಿವೆ. ಇದು ಬಹುತೇಕ ಸಾರಾಸಗಟು ಬಿಜೆಪಿ ಪಕ್ಷಕ್ಕೆ ಬರುವ ಸಾಧ್ಯತೆಗಳು ಕಂಡುಬರುತ್ತಿವೆ.

ಇತ್ತೀಚೆಗೆ ಕಾಂಗ್ರೆಸ್ ನೀಡುತ್ತಿರುವ ಉಚಿತ ಗ್ಯಾರಂಟಿಗಳು ಹೆಚ್ಚು ಚರ್ಚಿತವಾಗಿವೆ. ಇವುಗಳಿಂದಾಗಿಯೇ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂಬುದರಲ್ಲಿ ಭಾಗಶಃ ಸತ್ಯವಿದೆ. ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದುದರ ಹಿಂದೆ ಬಿಜೆಪಿಯ ಕಳಪೆ ಆಡಳಿತದ ಬಗ್ಗೆ ಎದ್ದ ಆಕ್ರೋಶವೂ ಕಾರಣವಾಗಿತ್ತು. ಈಗಲೂ ಅದೇ ಸಂಭವಿಸಿದೆ. ಅಂದರೆ, ಗ್ಯಾರಂಟಿಗಳೇ ಎಲ್ಲವೂ ಅಲ್ಲ ಎಂಬುದನ್ನು ಇದು ಸಾರಿದೆ. ಬಿಜೆಪಿ ಕೂಡಾ ಕಾಂಗ್ರೆಸ್‌ನಂತೆಯೇ ಕೆಲವೊಂದು ಉಚಿತ ಯೋಜನೆಗಳನ್ನು ನೀಡಿದ್ದರೂ ಒಟ್ಟಾರೆ ಫಲಿತಾಂಶ ಗ್ಯಾರಂಟಿ ಯೋಜನೆಗಳ ಹಂಗನ್ನು ಮೀರಿ ನಿಂತಿದೆ. ಮತದಾರರು ಗ್ಯಾರಂಟಿಗಳ ಆಮಿಷವನ್ನು ಮೀರಿ ಮತ ಹಾಕಿದ್ದಾರೆ. ಅಂದರೆ ಉತ್ತಮ ಆಡಳಿತವನ್ನು ಅಪೇಕ್ಷಿಸಿದ್ದಾರೆ ಎಂಬುದು ನಿಶ್ಚಿತ. ಉಚಿತಗಳು ಎಕಾನಮಿಗೆ ಒಳ್ಳೆಯದಲ್ಲ ಎಂಬುದನ್ನು ತಜ್ಞರು ಹೇಳುತ್ತಾರೆ. ಮತದಾರರು ಅದನ್ನೇ ಇನ್ನೊಂದು ಬಗೆಯಲ್ಲಿ ಹೇಳಿದಂತಿದೆ. ಇಲ್ಲವಾದರೆ ಮೂರೂ ಕಡೆ ಕಾಂಗ್ರೆಸ್ ವಿಫಲವಾಗುತ್ತಿರಲಿಲ್ಲ. ತೆಲಂಗಾಣದಲ್ಲಿ ಗ್ಯಾರಂಟಿಗಳನ್ನು ಘೋಷಿಸಿಯೇ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದು ನಿಜ. ಆದರೆ ಹತ್ತು ವರ್ಷಗಳ ಬಿಆರ್‌ಎಸ್ ಆಡಳಿತ ಸಾಕಾಗಿ ಅಲ್ಲಿನ ಜನತೆ ಬದಲಾವಣೆ ಬಯಸಿದ್ದರು ಎಂಬುದೂ ಅಷ್ಟೇ ನಿಜ.

ಬಿಜೆಪಿ ಈ ಫಲಿತಾಂಶವನ್ನು ಸಹಜವಾಗಿಯೇ ಹುಮ್ಮಸ್ಸಿನಿಂದ ಸ್ವೀಕರಿಸಿದೆ. ಅದು ಸಹಜ. ಇದು ಲೋಕಸಭೆ ಚುನಾವಣೆಯ ಮುನ್ಸೂಚನೆಯೂ ಹೌದು. ಆದರೆ ದುರಾಡಳಿತ, ಕಳಪೆ ಆಡಳಿತವನ್ನು ಜನ ಸಹಿಸುವುದಿಲ್ಲ ಎಂಬ ಸಂದೇಶ ಸ್ಪಷ್ಟವಾಗಿದೆ. ಛತ್ತೀಸ್‌ಗಢದಲ್ಲಿ ಭೂಪೇಶ್ ಬಘೇಲ್ ಆಡಳಿತದಲ್ಲಿ ಹಗರಣಗಳ ಮೇಲೆ ಹಗರಣಗಳು ನಡೆದಿದ್ದವು. ಜನತೆ ಸರ್ಕಾರವನ್ನು ಬದಲಿಸಿದ್ದಾರೆ. ಇದು ಬಿಜೆಪಿಗೂ ಪಾಠ. ಮೂರೂ ರಾಜ್ಯಗಳಲ್ಲೂ ಬುಡಕಟ್ಟು ಸಮುದಾಯ ಬಿಜೆಪಿಯ ಕೈಹಿಡಿದಿದೆ. ಇದು ತನ್ನ ಆದ್ಯತೆ ಎಲ್ಲಿಗೆ ಇರಬೇಕೆಂದು ಬಿಜೆಪಿಗೆ ತೋರಿಕೊಟ್ಟಿದೆ. ಕೇಂದ್ರದ ಅಭಿವೃದ್ಧಿ ಯೋಜನೆಗಳು ಮತ ಬಿಜೆಪಿಗೆ ಸಹಾಯ ಮಾಡಿವೆ. ಮುಖ್ಯವಾಗಿ ಉತ್ತರ ಭಾರತದ ಮೂರು ರಾಜ್ಯಗಳಲ್ಲಿ ಜನಪರ ಯೋಜನೆಗಳು, ಕೇಂದ್ರ ರಾಜ್ಯ ಡಬಲ್ ಎಂಜಿನ್ ಸರ್ಕಾರದ ಎಫೆಕ್ಟ್, ಮೋದಿ ಹವಾ ಕೂಡ ಕೆಲಸ ಮಾಡಿದೆ.

ಗೆಲುವಿನ‌ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಹಾಗೂ ಅದರ ನೇತೃತ್ವದ ಇಂಡಿಯಾ ಬ್ಲಾಕ್‌ಗೆ ನಿರಾಸೆ ಆಗಿರುವುದು ಸಹಜ. ಇದನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿ, ಮುಂದಿನ ಲೋಕಸಭೆ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಬೇಕು. ಉಚಿತ ಯೋಜನೆಗಳಿಗಿಂತಲೂ ಖಚಿತ ಅಭಿವೃದ್ಧಿ ಯೋಜನೆಗಳತ್ತ ಹೆಚ್ಚಿನ ಹರಿಸಬೇಕು. ನಾಯಕತ್ವದ ವಿಚಾರದಲ್ಲಿ ಇನ್ನಷ್ಟು ಪ್ರಯೋಗ, ಗಟ್ಟಿತನ ಬೇಕಾದೀತು.

ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಭ್ರೂಣ ಹತ್ಯೆ ಜಾಲ ಆಘಾತಕಾರಿ

Continue Reading
Advertisement
Kodagu News
ಕರ್ನಾಟಕ23 mins ago

ಕೊಡಗು ಜಿಲ್ಲೆಯ ಹೊಳೆಯಲ್ಲಿ ತಾಯಿ, ಇಬ್ಬರು ಯುವತಿಯರ ಶವ ಪತ್ತೆ; ಸಾವಿಗೆ ಕಾರಣ?

Ishwar Sahu
ದೇಶ1 hour ago

ಮುಸ್ಲಿಮರಿಂದ ಹತ್ಯೆಗೀಡಾದ ಯುವಕನ ತಂದೆ 7 ಬಾರಿಯ ಕಾಂಗ್ರೆಸ್ ಶಾಸಕನನ್ನು ಸೋಲಿಸಿದರು!

Jyothi Reddy CEO of American Company
ಅಂಕಣ1 hour ago

Raja Marga Column : ಅನ್ನಕ್ಕಾಗಿ ಕಲ್ಲು ಒಡೆಯೋ ಕೆಲಸ ಮಾಡ್ತಿದ್ದ ಆಕೆ ಈಗ ಅಮೆರಿಕನ್‌ ಕಂಪನಿ ಸಿಇಓ!

Venkataramana Reddy
ದೇಶ2 hours ago

ತೆಲಂಗಾಣದಲ್ಲಿ ಹಾಲಿ, ಭಾವಿ ಸಿಎಂಗಳನ್ನೇ ಸೋಲಿಸಿದ ಬಿಜೆಪಿಯ ವೆಂಕಟರಮಣ ರೆಡ್ಡಿ; ಯಾರಿವರು?

Complaint to CM Siddaramaiah
ಕರ್ನಾಟಕ2 hours ago

Complaint to CM : ಸಿಎಂಗೆ ದೂರು ನೀಡಬೇಕೇ? ಈ ನಂಬರ್‌ಗೆ ಕರೆ ಮಾಡಿ!

women enjoying in rain
ಉಡುಪಿ2 hours ago

Karnataka Weather : ಮಳೆಯೊಂದಿಗೆ 30 ಕಿ.ಮೀ ವೇಗದಲ್ಲಿ ಬೀಸಲಿದೆ ಗಾಳಿ

Mizoram Election Result
ದೇಶ2 hours ago

Mizoram Election Result: ಮಿಜೋರಾಂ ಫಲಿತಾಂಶಕ್ಕೆ ಕ್ಷಣಗಣನೆ; ಯಾರಿಗೆ ಗೆಲುವು?

4 state election results shows us that, freebies are not the way for win elections
ದೇಶ3 hours ago

ವಿಸ್ತಾರ ಸಂಪಾದಕೀಯ: ವಿಧಾನಸಭೆ ಚುನಾವಣೆ ಫಲಿತಾಂಶ; ‘ಗ್ಯಾರಂಟಿ’ಯೇ ಅಂತಿಮವಲ್ಲ!

ead your daily horoscope predictions for december 4th 2023
ಪ್ರಮುಖ ಸುದ್ದಿ4 hours ago

Dina Bhavishya : ಇಂದು ಹೂಡಿಕೆ ಮಾಡಿದ್ರೆ ಈ ರಾಶಿಯವರಿಗೆ ಡಬಲ್‌ ಧಮಾಕಾ!

Sphoorti Salu
ಸುವಚನ4 hours ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

ead your daily horoscope predictions for december 4th 2023
ಪ್ರಮುಖ ಸುದ್ದಿ4 hours ago

Dina Bhavishya : ಇಂದು ಹೂಡಿಕೆ ಮಾಡಿದ್ರೆ ಈ ರಾಶಿಯವರಿಗೆ ಡಬಲ್‌ ಧಮಾಕಾ!

Police call off protest FIR against lawyer who slapped police
ಕರ್ನಾಟಕ21 hours ago

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Dina Bhavihsya
ಪ್ರಮುಖ ಸುದ್ದಿ1 day ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Cockroaches bite baby born 2 days ago in vanivilas hospital
ಆರೋಗ್ಯ2 days ago

Vanivilas Hospital : 2 ದಿನಗಳ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದ ಜಿರಳೆಗಳು!

Dina Bhavishya
ಪ್ರಮುಖ ಸುದ್ದಿ2 days ago

Dina Bhavishya : ಯಾರನ್ನೂ ನಂಬಿ ಇನ್ವೆಸ್ಟ್ಮೆಂಟ್‌ ಮಾಡ್ಬೇಡಿ!

DK Shiakumar and MLA Munirathna
ಕರ್ನಾಟಕ3 days ago

DK Shivakumar : ಡಿಕೆಶಿಯನ್ನು ಗೇಟ್‌ ಒಳಗೇ ಬಿಟ್ಟಿಲ್ಲ, ಸಿಎಂ ಮಾಡುವಂತೆಯೂ ಹೇಳಿಲ್ಲವೆಂದ ಮುನಿರತ್ನ!

Tigre Found in Mysuru again Beware of this village
ಕರ್ನಾಟಕ3 days ago

Operation Tiger : ಮೈಸೂರಲ್ಲಿ ಮತ್ತೆ ಹುಲಿ ಕಾಟ; ಈ ಗ್ರಾಮದವರು ಹುಷಾರು!

Infosys Narayana Murthy and Congress Guarantee
ಕರ್ನಾಟಕ4 days ago

Congress Guarantee : ಯಾವುದನ್ನೂ ಪುಕ್ಕಟೆ ಕೊಡಬೇಡಿ; ‘ಗ್ಯಾರಂಟಿ’ಗೆ ನಾರಾಯಣ ಮೂರ್ತಿ ಆಕ್ಷೇಪ!

Justice for Ajay Protests against NIMHANS Hospital
ಆರೋಗ್ಯ4 days ago

Child Death : ಜಸ್ಟಿಸ್ ಫಾರ್ ಅಜಯ್; ಶುರುವಾಯ್ತು ನಿಮ್ಹಾನ್ಸ್‌ ವಿರುದ್ಧ ಪ್ರತಿಭಟನೆ

Dina Bhavishya
ಪ್ರಮುಖ ಸುದ್ದಿ5 days ago

Dina Bhavishya : ಯಾರಾದರೂ ಕಾಳಜಿ ತೋರಿದರೆ ಈ ರಾಶಿಯವರು ನೆಗ್ಲೆಕ್ಟ್‌ ಮಾಡ್ಬೇಡಿ!

ಟ್ರೆಂಡಿಂಗ್‌