Site icon Vistara News

MP Pratapsimha : We are with ಹಿಂದೂ ಹುಲಿ ಪ್ರತಾಪ್‌ಸಿಂಹ; ಬೆಂಬಲಿಗರ ಘೋಷಣೆ

MP Pratapsimha in front Of old parliament Building

ಮೈಸೂರು: ಲೋಕಸಭೆಗೆ ನುಗ್ಗಿ ದಾಂಧಲೆ (Security breach in Loksabha) ಎಬ್ಬಿಸಿದ ದಾಳಿಕೋರರಿಗೆ ಸಂಸತ್‌ ಪ್ರವೇಶದ ಪಾಸ್‌ (Parliament Visitor Pass) ನೀಡಿದ್ದಾರೆ ಎಂಬ ಕಾರಣಕ್ಕೆ ಕೆಲವರಿಂದ ಟೀಕೆಗೆ ಒಳಗಾಗುತ್ತಿರುವ ಮೈಸೂರು ಸಂಸದ ಪ್ರತಾಪ್‌ ಸಿಂಹ (MP Pratapsimha) ಅವರ ಪರವಾಗಿ ಈಗ ಅವರ ಅಭಿಮಾನಿಗಳು ಕೂಗೆಬ್ಬಿಸಿದ್ದಾರೆ. ಪ್ರತಾಪ್‌ಸಿಂಹ ಅವರನ್ನು ಹಿಂದು ಹುಲಿ (Hindu Huli) ಎಂದು ಕೊಂಡಾಡಿದ್ದಾರೆ.

ಸಂಸತ್ ಮೇಲೆ ದಾಳಿಯನ್ನು ಖಂಡಿಸುತ್ತೇವೆ. ಆದರೆ ಪ್ರತಾಪ್ ಸಿಂಹ ಅವರನ್ನು ಟಾರ್ಗೆಟ್ ಮಾಡಲಾಗುತ್ತಿರುವುದನ್ನು ಸಹಿಸಲು ಸಾಧ್ಯವಿಲ್ಲ. ಪಾಸ್ ಕೊಟ್ಟ ಮಾತ್ರಕ್ಕೆ ಪ್ರತಾಪ್ ಸಿಂಹ ಅವರನ್ನು ಭಯೋತ್ಪಾದಕ ರೀತಿಯಲ್ಲಿ ಹೇಳಿಕೆಯನ್ನು ಕೊಡಲಾಗುತ್ತಿದೆ. ಅಂತಹವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಿದ್ದೇವೆ ಎಂದು ಸಂಸದರ ಮೈಸೂರು ಕಚೇರಿ ಮುಂದೆ ನಡೆದ ದೊಡ್ಡ ಮಟ್ಟದ ಬಲ ಪ್ರದರ್ಶನದ ವೇಳೆ ಅಭಿಮಾನಿಗಳು ಹೇಳಿದರು.

ʻʻಮೈಸೂರು ಮೂಲದ ಆರೋಪಿ ಮನೋರಂಜನ್‌ಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಅವರ್ಯಾರು ಕೂಡ ನಮ್ಮ ಪಕ್ಷದ ಸದಸ್ಯರಲ್ಲ. ಅವರಿಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಪ್ರಕರಣದಲ್ಲಿ ಭಾಗಿಯಾಗಿರುವವರೆಲ್ಲರೂ ಬೇರೊಂದು ಸಿದ್ದಾಂತವನ್ನು ಹೊಂದಿರುವಂತಹವರು”ʼ ಎಂದು ಬಿಜೆಪಿ ಮುಖಂಡ ಮೈ.ವಿ. ರವಿಶಂಕರ್ ಹೇಳಿಕೆ ನೀಡಿದರು.

ʻʻಕಳೆದ ಬುಧವಾರ ಸಂಸತ್ ನಲ್ಲಿ ನಡೆದ ಘಟನೆಗೆ ಭದ್ರತಾ ವೈಫಲ್ಯ ಕಾರಣವಾಗಿದೆ ಎಂಬುದನ್ನು ಪಕ್ಷ ಒಪ್ಪಿಕೊಂಡಿದೆ. ಘಟನೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. ಸಂಸದ ಪ್ರತಾಪ್ ಕ್ಷೇತ್ರದ ಮತದಾರ ಎಂಬ ಕಾರಣಕ್ಕಾಗಿ ಮನೋರಂಜನ್ ಗೆ ಪಾಸ್ ‌ನೀಡಿದ್ದಾರೆ. ಈ ಬಗ್ಗೆ ಪ್ರತಾಪ್ ಸಿಂಹ ಅವರು ಲೋಕಸಭೆಯ ಸ್ಪೀಕರ್ ವಿವರಗಳನ್ನು ನೀಡಿದ್ದಾರೆʼʼ ಎಂದು ಮೈ ವಿ ರವಿಶಂಕರ್‌ ವಿವರಿಸಿದರು.

ಇದೇ ವೇಳೆ ಸಂಸದ ಪ್ರತಾಪ್ ಸಿಂಹ ಕಚೇರಿ ಮುಂಭಾಗ ಸೇರಿದ ಬಿಜೆಪಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪ್ರತಾಪ್ ಸಿಂಹ ಅವರೊಂದಿಗೆ ನಾವು ಎಂದು ಘೋಷಣೆ ಕೂಗಿದರು. ʻʻರಾಷ್ಟ್ರೀಯವಾದಿ ಪ್ರತಾಪ್ ಸಿಂಹ ಜೊತೆಗೆ ನಾವಿದ್ದೇವೆ. ಹಿಂದೂ ಹುಲಿ ಪ್ರತಾಪ್ ಸಿಂಹ ಎಂದು ಬೆಂಬಲಿಗರು ಪ್ರತಾಪ್‌ ಸಿಂಹ ಅವರ ಭಾವಚಿತ್ರದ ಮುಖವಾಡ ಹಾಕಿಕೊಂಡು ಘೋಷಣೆ ಕೂಗಿದರು.

ಪ್ರತಾಪ್ ಸಿಂಹ ಅವರೇ ಫೇಸ್‌ಬುಕ್ ಮೂಲಕ ಸೂಕ್ಷ್ಮವಾಗಿ ಹೇಳಿಕೊಂಡಿರುವ ಪ್ರಕಾರ, ಸಂಸದರು ಕೇವಲ ಈತನಿಗೆ ಮಾತ್ರವಲ್ಲ ಮೈಸೂರಿನ ವಿದ್ಯಾವರ್ಧಕ ಕಾಲೇಜಿನ ಪೊಲಿಟಿಕಲ್ ವಿದ್ಯಾರ್ಥಿಗಳಿಗೆ ಪಾಸ್ ಕೊಟ್ಟಿದ್ದಾರೆʼʼ ಎಂದು ಪ್ರತಾಪ್ ಸಿಂಹ ಬೆಂಬಲಿಗ ಗೋಕುಲ್ ಗೋವರ್ಧನ್ ಹೇಳಿಕೆ ನೀಡಿದರು.

ಇದನ್ನೂ ಓದಿ: Security breach in Loksabha : ಸಾಗರ್‌ ಶರ್ಮಾಗೆ ಪಾಸ್‌ ಕೊಟ್ಟಿದ್ದೇಕೆ?: ಇಲ್ಲಿದೆ ಪ್ರತಾಪ್‌ಸಿಂಹ ವಿವರಣೆ

ಇದರಲ್ಲಿ ಪ್ರತಾಪ್‌ ಸಿಂಹ ಅವರ ತಪ್ಪೇನೂ ಇಲ್ಲ ಎಂದ ಆರ್‌. ಅಶೋಕ್‌

ಈ ನಡುವೆ‌ ಮಂಡ್ಯದಲ್ಲಿ ಮಾತನಾಡಿದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್‌ ಅಶೋಕ್‌ ಅವರು, ಸಂಸತ್‌ ಮೇಲಿನ ದಾಳಿಗೆ ಸಂಬಂಧಿಸಿ ತನಿಖೆ ನಡೆಯುತ್ತಿದೆ. ವರದಿ ಏನ್ ಬರುತ್ತದೋ ನೋಡೋಣ. ಇದ್ರಲ್ಲಿ ಪ್ರತಾಪ್ ಸಿಂಹ ಅವರದ್ದು ಏನ್ ತಪ್ಪಿದೆ? ಡಿಕೆಶಿ ಅವರ ತಮ್ಮನೂ ಕೂಡ ಸಂಸದ. ಅವರೇ ಪಾಸ್ ಕೊಟ್ಟಿದ್ರೆ ನಾವು ಆರೋಪ ಮಾಡಲಾಗುತ್ತಾ? ಭಯೋತ್ಪಾದನೆಗೆ ಕುಮ್ಮಕ್ಕಿದ್ರೆ ಆಪಾದನೆ ಮಾಡಬಹುದು. ಪ್ರತಾಪ್ ಸಿಂಹ ಭಯೋತ್ಪಾದನೆ ವಿರುದ್ಧ ಹೋರಾಟ ಮಾಡ್ತಿದ್ದಾರೆ. ಆ ಪ್ರಶ್ನೆಯೇ ಬರಲ್ಲ ಎಂದು ಹೇಳಿದರು.

Exit mobile version