Site icon Vistara News

ಬೆಲ್ಲಕ್ಕೆ ಜಿಎಸ್‌ಟಿ ವಿನಾಯಿತಿ ನೀಡಿ; ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಸುಮಲತಾ ಮನವಿ

ಜಿಎಸ್‌ಟಿ

ಮಂಡ್ಯ: ಬೆಲ್ಲದ ಮೇಲೆ ಶೇ.5 ಜಿಎಸ್‌ಟಿ ವಿಧಿಸಿರುವುದನ್ನು ಮರು ಪರಿಶೀಲಿಸುವಂತೆ ಸಕ್ಕರೆನಾಡು ಮಂಡ್ಯದ ಸಂಸದೆ ಸುಮಲತಾ ಅಂಬರೀಶ್ ಅವರು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಿದ್ದಾರೆ.

ದೆಹಲಿಯಲ್ಲಿ ಶುಕ್ರವಾರ ನಿರ್ಮಲಾ ಸೀತಾರಾಮ್ ಅವರನ್ನು ಸುಮಲಾತಾ ಅವರು ಖುದ್ದು ಭೇಟಿಯಾಗಿ ಬೆಲ್ಲದ ಮೇಲಿನ ಜಿಎಸ್‌ಟಿ ಕೈಬಿಡುವಂತೆ ಲಿಖಿತ ಮನವಿ ಸಲ್ಲಿಸಿ, ರಾಜ್ಯದ ಕಬ್ಬು ಬೆಳೆಗಾರರು ಅನುಭವಿಸುತ್ತಿರುವ ಸಂಕಷ್ಟಗಳನ್ನು ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.

ಬೆಲ್ಲ ತಯಾರಿಸುವ ಘಟಕಗಳ ವಸ್ತುಸ್ಥಿತಿ, ಮಹಾರಾಷ್ಟ್ರ, ಉತ್ತರ ಪ್ರದೇಶ ಸೇರಿ ಬೇರೆ ರಾಜ್ಯಗಳನ್ನು ಹೋಲಿಸಿದಾಗ ರಾಜ್ಯದ ಕಬ್ಬು ಬೆಳೆಗಾರರಿಗೆ ಕಬ್ಬಿನ ಮೇಲೆ ಅತಿ ಕಡಿಮೆಯ ನ್ಯಾಯೋಚಿತ ಮತ್ತು ಲಾಭದಾಯಕ ಬೆಲೆ (ಎಫ್‌ಆರ್‌ಪಿ) ಸಿಗುವ ಬಗ್ಗೆಯೂ ಸುಮಲತಾ ವಿವರಿಸಿದ್ದಾರೆ. ಮನವಿಗೆ ನಿರ್ಮಲಾ ಸೀತಾರಾಮನ್ ಸಕಾರಾತ್ಮವಾಗಿ ಸ್ಪಂದಿಸಿ, ಜಿಎಸ್‌ಟಿ ಮಂಡಳಿ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಸಚಿವರ ಸಕಾರಾತ್ಮಕ ಸ್ಪಂದನೆಗೆ ಸುಮಲತಾ ಧನ್ಯವಾದಗಳನ್ನು ಅರ್ಪಿಸಿದ್ದು, ಬೆಲ್ಲ ತಯಾರಿಸುವ ರೈತರಿಗೆ ಆದಷ್ಟು ಬೇಗ ಜಿ.ಎಸ್.ಟಿ ವಿನಾಯಿತಿ ಪರಿಹಾರ ದೊರಕಿಸುವ ಭರವಸೆಯಲ್ಲಿದ್ದಾರೆ.

ಇದನ್ನೂ ಓದಿ | Praveen Nettaru | ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆ ಎನ್‌ಐಎಗೆ ವಹಿಸಿ ಕೇಂದ್ರ ಗೃಹ ಇಲಾಖೆ ಆದೇಶ

Exit mobile version