Site icon Vistara News

Mudabidre Election Results: ಮೂಡುಬಿದಿರೆ ಕೋಟೆಗೆ ಉಮಾನಾಥ ಕೋಟ್ಯಾನ್‌ ಮತ್ತೆ ಅಧಿಪತಿ

Mudabidre Election results Umanath Kotyan

ಮಂಗಳೂರು: ಭಾರಿ ಕುತೂಹಲ ಮೂಡಿಸಿದ್ದ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಫಲಿತಾಂಶ (Mudabidre Election Results) ಹೊರಬಿದ್ದಿದ್ದು, ಈ ಬಾರಿ ಬಿಜೆಪಿಯ ಪಕ್ಷದ ಉಮಾನಾಥ ಕೋಟ್ಯಾನ್‌ ಅವರು ಜಯಗಳಿಸಿದ್ದಾರೆ. ಅವರು ಒಟ್ಟು 86925 ಮತಗಳನ್ನು ಪಡೆಯುವ ಮೂಲಕ ತಮ್ಮ ಸಮೀಪ ಸ್ಪರ್ಧಿ ಕಾಂಗ್ರೆಸ್‌ನ ಮಿಥುನ್‌ ರೈ ವಿರುದ್ಧ 22,468 ಮತಗಳ ಅಂತರದಿಂದ ಜಯಗಳಿಸಿದ್ದಾರೆ.

ಗೆದ್ದು ಬೀಗಿದ ಉಮಾನಾಥ ಕೋಟ್ಯಾನ್‌

ಶಾಸಕರಾಗಿ ಉಮಾನಾಥ ಕೋಟ್ಯಾನ್ ಕೂಡ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಸರಳ ಸಜ್ಜನಿಕೆಯ ಉಮಾನಾಥ ಕೋಟ್ಯಾನ್ ವಿಚಾರವಾಗಿ ಕ್ಷೇತ್ರದ ಜನರಲ್ಲಿ ಒಳ್ಳೆಯ ಅಭಿಪ್ರಾಯ ಇರುವುದು ಅವರ ಗೆಲುವಿಗೆ ಕಾರಣವಾಗಿದೆ.

ಸೋಲು ಕಂಡ ಮಿಥುನ್‌ ರೈ

ಐದು ವರ್ಷಗಳ ಹಿಂದೆಯೇ ಅಭಯ್‌ ಚಂದ್ರ ಜೈನ್ ಮುಂದಿನ ಅಭ್ಯರ್ಥಿ ಮಿಥುನ್ ರೈ ಅಂತ ಘೋಷಣೆ ಮಾಡಿದ್ದರಿಂದ ಅವರು ಐದು ವರ್ಷಗಳಿಂದ ಮೂಡಬಿದರೆ ಕ್ಷೇತ್ರದಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದರು. ಜನರ ಸಂಪರ್ಕದಲ್ಲಿ ಇದ್ದರೂ ಅದು ಗೆಲ್ಲುವ ಮಟ್ಟಕ್ಕೆ ಕೊಂಡೊಯ್ಯಲಿಲ್ಲ.

ಮೂಡುಬಿದಿರೆ ಚುನಾವಣಾ ಫಲಿತಾಂಶ

ಸಾಧನೆ ಮಾಡದ ಜೆಡಿಎಸ್‌

ಜೆಡಿಎಸ್ ಸಾಂಪ್ರದಾಯಿಕ ಮತಗಳನ್ನು ನೆಚ್ಚಿಕೊಂಡಿದ್ದ ಆ ಪಕ್ಷದ ಅಭ್ಯರ್ಥಿ ಅಮರಶ್ರೀ ಅವರಿಗೆ ಈ ಬಾರಿ ಕೈಕೊಟ್ಟಂತೆ ಕಾಣುತ್ತಿದೆ. ಅವರು ಕೇವಲ 1533 ಮತಗಳನ್ನಷ್ಟೇ ಪಡೆಯಲು ಶಕ್ತರಾಗಿದ್ದಾರೆ. ಈ ಮೂಲಕ ನೀರಸ ಪ್ರದರ್ಶನವನ್ನು ನೀಡಿದ್ದಾರೆ.

ಇದನ್ನೂ ಓದಿ: Karnataka Election Results 2023 : ಕಾಂಗ್ರೆಸ್‌ ಅಧಿಕಾರಕ್ಕೆ; ಐದು ಉಚಿತ ಯೋಜನೆಗಳ ಜಾರಿಗೆ ಕೌಂಟ್‌ಡೌನ್‌

ಕಳೆದ ಬಾರಿಯ ಫಲಿತಾಂಶ
ಉಮಾನಾಥ ಕೋಟ್ಯಾನ್ (ಬಿಜೆಪಿ): 87444, ಅಭಯ ಚಂದ್ರ ಜೈನ್ (ಕಾಂಗ್ರೆಸ್): 57645, ಗೆಲುವಿನ ಅಂತರ: 29799

ಈ ಬಾರಿಯ ಚುನಾವಣಾ ಫಲಿತಾಂಶ
ಉಮಾನಾಥ ಕೋಟ್ಯಾನ್ (ಬಿಜೆಪಿ): 86925 | ಮಿಥುನ್‌ ರೈ (ಕಾಂಗ್ರೆಸ್‌): 64457 | ಗೆಲುವಿನ ಅಂತರ: 22,468 | ನೋಟಾ: 837

Exit mobile version