ಬೆಂಗಳೂರು, ಕರ್ನಾಟಕ: ವಿಜಯಪುರ ಜಿಲ್ಲೆಯ ಬಹುತೇಕ ಚುನಾವಣೆ ಫಲಿತಾಂಶ ಹೊರ ಬಿದ್ದಿದೆ. 6ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದಾರೆ. ಜಿಲ್ಲೆಯ ಪ್ರಮುಖ ಕ್ಷೇತ್ರಗಳ ಪೈಕಿ ಒಂದಾಗಿರುವ ಮುದ್ದೇಬಿಹಾಳದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ ಎಸ್ ನಾಡಗೌಡ ಅವರು 7637 ಮತಗಳ ಅಂತರದಿಂದ ಗೆಲುವು ಕಂಡಿದ್ದಾರೆ. ಸೋಲು ಕಂಡಿರುವ ಬಿಜೆಪಿಯ ಎ ಎಸ್ ಪಾಟೀಲ್ ನಡಹಳ್ಳಿ ವಿರುದ್ಧ ಸಿ ಎಸ್ ನಾಡಗೌಡ ಅವರು 70754 ಮತಗಳನ್ನು ಪಡೆದುಕೊಂಡಿದ್ದಾರೆ. ಸಿ ಎಸ್ ನಾಡಗೌಡ ಅವರು 78598 ಮತಗಳನ್ನು ತಮ್ಮದಾಗಿಸಿಕೊಂಡಿದ್ದರು(Muddebihal Election Results).
2023ರ ಅಭ್ಯರ್ಥಿಗಳು ಯಾರು?
ಹಾಲಿ ಶಾಸಕ ಎ ಎಸ್ ಪಾಟೀಲ್ ನಡಹಳ್ಳಿ ಅವರು ಬಿಜೆಪಿಯಿಂದ ಮತ್ತೆ ಕಣದಲ್ಲಿದ್ದಾರೆ. 2018ರಲ್ಲಿ ಸೋತಿದ್ದ ಕಾಂಗ್ರೆಸ್ ಅಭ್ಯರ್ಥಿ ಸಿ ಎಸ್ ನಾಡಗೌಡ ಅವರು ಸ್ಪರ್ಧಿಸಿದ್ದರು. ಜೆಡಿಎಸ್‌ನಿಂದ ಬಸವರಾಜ್ ಭಜಂತ್ರಿ ಅವರು ಸ್ಪರ್ಧಿಸಿದ್ದಾರೆ.
2018 ಚುನಾವಣೆಯ ಫಲಿತಾಂಶ ಏನಾಗಿತ್ತು
ಮುದ್ದೇಬಿಹಾಳ ವಿಜಯಪುರ ಜಿಲ್ಲೆಯ ಪ್ರಮುಖ ಕ್ಷೇತ್ರಗಳಲ್ಲಿ ಒಂದಾಗಿದೆ. ಇದು ಕಾಂಗ್ರೆಸ್‌ನ ಭದ್ರಕೋಟೆಯಾಗಿದೆ. ಜನತಾ ಪಾರ್ಟಿ ಕೂಡ ಈ ಕ್ಷೇತ್ರವನ್ನು ಗೆದ್ದ ಇತಿಹಾಸವಿದೆ. 2018ರಲ್ಲಿ ಬಿಜೆಪಿಯು ತನ್ನ ಖಾತೆಯನ್ನು ಈ ಕ್ಷೇತ್ರದಲ್ಲಿ ತೆರೆದಿದೆ. 2018ರ ಚುನಾವಣೆಯಲ್ಲಿ ಬಿಜೆಪಿಯ ಎ ಎಸ್ ಪಾಟೀಲ್ ನಡಹಳ್ಳಿ ಅವರು 65512 ಮತಗಳನ್ನು ಪಡೆದುಕೊಂಡು, 8633ರ ಮತಗಳ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಸಿ ಎಸ್ ನಾಡಗೌಡ ಅವರು 54879 ಮತಗಳನ್ನು ಪಡೆದುಕೊಂಡಿದ್ದರು.